ಪರಿಷತ್ ಚುನಾವಣೆ : ಕನಕಪುರದಲ್ಲಿ ಡಿಸೆಂಬರ್ 13 ರಂದು ಮರು ಮತದಾನ

ರಾಮನಗರ : ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಸಂಬಂಧಿಸಿದಂತೆ ಕನಕಪುರ ತಾಲ್ಲೂಕಿನ ನಾರಾಯಣಪುರ ಮತಗಟ್ಟೆ ಸಂಖ್ಯೆ 205ರಲ್ಲಿ ಡಿಸೆಂಬರ್ 13 ರಂದು ಮರು ಮತದಾನ ನಡೆಯಲಿದೆ. ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮರು ಮತದಾನ ನಡೆಯಲಿದೆ ಎಂದು ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.
ಡಿಸೆಂಬರ್ 10ರ ಶುಕ್ರವಾರ ಕನಕಪುರ ತಾಲ್ಲೂಕಿನ ನಾರಾಯಣಪುರ ಮತಗಟ್ಟೆ ಸಂಖ್ಯೆ 205 ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮತದಾನ ಮಾಡುಗ ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದರು.
ಜೆಡಿಎಸ್ ಅಭ್ಯರ್ಥಿಯ ಏಜೆಂಟ್ ನೀತಿಸಂಹಿತೆ ಉಲ್ಲಂಘನೆ ನಡೆದಿದೆ ಹಾಗಾಗಿ ಚುನಾವಣೆಯನ್ನು ಅಸಿಂಧು ಮಾಡುವಂತೆ ದೂರು ಸಲ್ಲಿಸಿದ್ದರು. ನಾರಾಯಣಪುರ ಮತ ಕೇಂದ್ರದಲ್ಲಿ ಕಾಂಗ್ರಸ್ ಪರವಾಗಿ ಮತ ಚಲಾಯಿಸಿದ ಮತದಾರ ಮತಗಟ್ಟೆಯಲ್ಲಿದ್ದ ಕಾಂಗ್ರಸ್ ಏಜೆಂಟ್ಗೆ ತೋರಿಸಿದ್ದಲ್ಲದೇ ತಮ್ಮ ಮೊಬೈಲ್ ವಿಡಿಯೋ ಮಾಡಿಕೊಂಡಿದನ್ನು ಜೆಡಿಎಸ್ ಚುನಾವಣಾ ಏಜೆಂಟ್ ಆಕ್ಷೇಪಿಸಿದ್ದರು. ಈ ಸಮಯದಲ್ಲಿ ಜೆಡಿಎಸ್ ಏಜೆಂಟ್ ರಮೇಶ ಮತ್ತು ಕಾಂಗ್ರಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆದಿತ್ತು.
ಮತಗಟ್ಟೆಯ ಅಧಿಕಾರಿಗಳು ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿದ್ದು, ಮತಕೇಂದ್ರದಲ್ಲಿ ಮೊಬೈಲ್ ಬಳಕೆಗೆ ನಿಷೇಧವಿದ್ದರೂ ಚುನಾವಣಾ ಸಿಬ್ಬಂದಿ ಕಾಂಗ್ರಸ್ ಸದಸ್ಯರಿಗೆ ಮೊಬೈಲ್ ಬಳಕೆಗೆ ಅವಕಾಶ ಮಾಡುಕೊಟ್ಟು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಜೆಡಿಎಸ್ನವರು ಆರೋಪಿಸಿದ್ದರು.
ನಾರಾಯಣಪುರ ಮತಗಟ್ಟೆ ಸಂಖ್ಯೆ 205ರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು ಹಾಗೂ ಕಾಂಗ್ರಸ್ ದಬ್ಬಾಳಿಕೆಗೆ ಸಹಕಾರ ನೀಡಿದ ಚುನಾವಣಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಅಭ್ಯರ್ಥಿ ಎಚ್. ಎಂ. ರಮೇಶಗೌಡ ಚುನಾವಣಾ ಏಜೆಂಟ್ ರವೇಶ್ ವಿಡಿಯೋ ಹೇಳಿಕೆಯನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದರು, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಜೆಡಿಎಸ್ ಏಜೆಂಟ್ ರಮೇಶ್ ದೂರಿನ ಮೇರಿಗೆ ಪರಿಶೀಲನೆ ನಡೆಸಿದ ಚುನಾವಣಾ ಆಯೋಗ ಮೇಲ್ನೋಟಕ್ಕೆ ಚುನಾವಣಾ ಅಕ್ರಮ ಕಂಡು ಬಂದ ಹಿನ್ನಲೆಯಲ್ಲಿ ಡಿಸೆಂಬರ್ 10ರಂದು ನಡೆದ ಮತದಾನವನ್ನು ಅಸಿಂಧುಗೊಳಿಸಿ ಸೋಮವಾರ ಮರು ಮತದಾನಕ್ಕೆ ಆದೇಶ ಮಾಡಿದೆ.

Leave a Reply

Your email address will not be published. Required fields are marked *