ಪ್ರತಿ ತಿಂಗಳು ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತೋಷದ ಸಂಗತಿ : ವಿಜಯ್ ರಾಂಪುರ

ರಾಮನಗರ : ಜಾನಪದ ಲೋಕದಲ್ಲಿ ಕಲಾವಿದರನ್ನು ಗುರುತಿಸಿ ಪ್ರತಿ ತಿಂಗಳು ಸನ್ಮಾನ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.
ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಡೋಜ ಎಚ್.ಎಲ್.ನಾಗೇಗೌಡರು ಕಟ್ಟಿದ ಜಾನಪದದ ಬೇರು ಇಂದು ಗಟ್ಟಿಯಾಗಿದೆ, ಟೊಂಗೆಗಳು ಬಲಿಷ್ಟವಾಗಿದ್ದು ಹಣ್ಣುಗಳನ್ನು ಬಿಡಲು ಆರಂಭಿಸಿದೆ. ಜಾನಪದ ಲೋಕ ಜನಸಾಮಾನ್ಯರಿಗೂ ಹತ್ತಿರವಾಗುತ್ತಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ಒಂದಲ್ಲ ಒಂದು ಬಗೆಯಲ್ಲಿ ನಮ್ಮ ಮೂಲ ಸಂಸ್ಕøತಿಯನ್ನು ಮರೆಯದೆ ಆಹಾರ ಪದ್ದತಿಯನ್ನು ರೂಡಿಸಿಕೊಂಡು ಬರುತ್ತಿದ್ದೇವೆ. ಸಾಕ್ಷಿಯಾಗಿ ಪ್ರತಿ ಸಂಕ್ರಾಂತಿಯಲ್ಲಿ ಗೆಡ್ಡೆ ಗೆಣಸುಗಳನ್ನು ಸುಟ್ಟು, ಬೇಯಿಸಿ ತಿನ್ನುವುದನ್ನು ಇಂದಿಗೂ ಕಾಣಬಹುದು ಎಂದು ತಿಳಿಸಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಿ.ಆರ್. ಉಮೇಶ್ ಮಾತನಾಡಿ ವಿದ್ಯಾರ್ಥಿಗಳ ನಡೆ ಜಾನಪದ ಲೋಕದಕಡೆ, ವಿದ್ಯಾರ್ಥಿಗಳ ನಡೆ, ಜಾನಪದ ಲೋಕದ ನಡೆ ಕಾಲೇಜಿನಕಡೆ ಎಂಬ ಶಿರ್ಷಿಕೆಯಡಿಯಲ್ಲಿ ಕರ್ನಾಟಕಜಾನಪದ ಪರಿಷತ್ತು ಮತ್ತು ಜಾನಪದ ಲೋಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಂತೋಷದ ವಿಷಯ. ನಾವು ಕಳೆದುಕೊಂಡಿರುವ ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ಮರಳಿ ಮಣ್ಣಿಗೆ ಎಂಬಂತೆ ಪ್ರತಿ ತಿಂಗಳು ಮೇಲುಗಿರಯ್ಯನಂತಹ ಹಿರಿಯ ಕಲಾವಿದರನು ್ನಜಾನಪದ ಲೋಕಕ್ಕೆ ಕರೆಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಕೋಲಾಟ ಕಲಾವಿದ ಮೇಲುಗಿರಯ್ಯ ಗೌರವ ಸ್ವೀಕರಿಸಿ ಭಾವುಕರಾದರು. ಮಾಗಡಿ ತಾಲ್ಲೂಕಿನ ತೂಬಿನಕೆರೆ ಗ್ರಾಮದಲ್ಲಿ ಹುಟ್ಟಿದ ನಾನು ಅನಕ್ಷರಸ್ಥ, ಕಳೆದೆರಡು ವರ್ಷಗಳ ಹಿಂದೆ ಪಾಶ್ರ್ವವಾಯು ಬಂದು ನಿಲ್ಲಲು ಕೂರಲು ಆಗತ್ತಿಲ್ಲ ಎನ್ನುತ್ತಾ 90 ವರ್ಷದ ಅವರು ತಂದೆ ಮೂಡಲಗಿರಿಯಪ್ಪ, ತಾಯಿ ಯಶೋದಮ್ಮ ಮತ್ತು ಗುರುಗಳಾದ ಕುಣಿಗಲ್ ತಿಮ್ಮಯ್ಯ ಅವರನ್ನು ನೆನಪಿಸಿಕೊಂಡರು. ಊರಿನ ಕಲಾಸಕ್ತರೆಲ್ಲರಿಗೂ ಕೋಲಾಟ, ಪಟಕುಣಿತ, ಸೋಮನ ಕುಣಿತ ಕಲೆಯನ್ನು ಕಲಿಸಿಕೊಟ್ಟಿದ್ದೇನೆ ಎನ್ನುತ್ತಾ
ಏನು ಮಾಡಲಕ್ಕ ನನ್ನ್‍ಗಂಡಮಾಡಿದ್‍ದುಕ್ಕ
ಯಾರಿಗೇಳಲಕ್ಕ ನನ್ನ ಮುರ್ವ ಮಾಡಿದ್‍ದುಕ್ಕ
ಇವ್ನ್‍ಯಾಕೆ ಬಂದಾವ್ನೆಇವ್ನ್‍ಯಾಕೆ ಬಂದಾವ್ನೆ | ಮುರ್ವಯಾಕೆ ಬಂದಾವನೆ | ಎಂದುಕೋಲಾಟದ ಪದಗಳನ್ನು ತನ್ನತಂಡದೊಂದಿಗೆ ಹಾಡುತ್ತಾ ರಂಜಿಸಿದರು.
ಕ್ಯೂರೇಟರ್ ಡಾ.ಯು.ಎಂರವಿ ಸ್ವಾಗತ ಕೋರಿ ಸಂವಾದಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಂಗಸಹಾಯಕರಾದ ಪ್ರದೀಪ್. ಎಸ್ ನಿರೂಪಿಸಿದರು. ರಾಮನಗರದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಐಚ್ಚಿಕ ಕನ್ನಡ ವಿದ್ಯಾರ್ಥಿಗಳು, ಕಲಾಸಕ್ತರು, ಕಲಾವಿದರು ಲೋಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *