ರಾಮನಗರ ಜಿಲ್ಲಾ ಕೇಂದ್ರದಲ್ಲಿ ‘ಕನ್ನಡ ಭವನ ನಿರ್ಮಾಣ’ ಮಾಡಲು ಭಗತ್ ಸಿಂಗ್ ಸೇನೆ ಮನವಿ
ರಾಮನಗರ : ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಷಿ ಅವರಿಗೆ ಭಗತ್ ಸಿಂಗ್ ಸೇನೆಯ ಪದಾಧಿಕಾರಿಗಳು ರಾಮನಗರ ಜಿಲ್ಲಾ ಕೇಂದ್ರದಲ್ಲಿ ‘ಕನ್ನಡ ಭವನ’ ನಿರ್ಮಾಣ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ನಾಡೋಜ ಡಾ. ಮಹೇಶ ಜೋಷಿ ಅವರು ರಾಮನಗರ ಜಿಲ್ಲಾ ಕೇಂದ್ರವಾಗಿ ಹಲವು ವರ್ಷಗಳು ಕಳೆದಿವೆ. ಜಿಲ್ಲಾ ಕೇಂದ್ರದಲ್ಲಿ ‘ಕನ್ನಡ ಭವನ’ ನಿರ್ಮಾಣ ಮಾಡಲು ಎಲ್ಲರ ಸಹಕಾರದೊಂದಿಗೆ ಕಾರ್ಯಪ್ರವೃತ್ತನಾಗುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಗತ್ ಸೇನೆಯ ವಿನೋದ್ ಭಗತ್ (ವಕೀಲರು), ಕೆ. ಲೋಕೇಶ್, ರಾಜಣ್ಣ, ಪವನ್ ಇತರರು ಉಪಸ್ಥಿತರಿದ್ದರು.