ಶ್ರೀರಾಮ ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ಸಭೆ
ರಾಮನಗರ : ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಬಳಿ ಇರುವ ಶ್ರೀರಾಮ ಗೃಹ ನಿರ್ಮಾಣ ಸಹಕಾರ ಸಂಘದ 2020-2021ನೇ ಸಾಲಿನ ಸರ್ವಸದಸ್ಯರ ಸಭೆ ನಡೆಯಿತು.
ಸಂಘದ ಅಧ್ಯಕ್ಷರಾದ ತ್ಯಾಗರಾಜ ಮಾತನಾಡಿ, ಶ್ರೀರಾಮ ಗೃಹ ನಿರ್ಮಾಣ ಸಹಕಾರ ಸಂಘವು ಕಳೆದ ನಾಲ್ಕು ವರ್ಷಗಳಿಂದ ಲಾಭದಲ್ಲಿ ನಡೆಯುತ್ತಿದೆ. ಸಂಘವು 2013ರಲ್ಲಿ ಕೇವಲ 400 ಸದಸ್ಯರಿಂದ 8 ಲಕ್ಷ ಷೇರು ಬಂಡವಾಳ ಸಂಗ್ರಹಿಸುವ ಮೂಲಕ ಅಧಿಕೃತವಾಗಿ ತನ್ನ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿತು. ಪ್ರಸ್ತುತ ಸಂಘವು ಸುಮಾರು ಸಾವಿರ ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದರು.
ಸಂಘದ ಸದಸ್ಯರ ಆರ್ಥಿಕ ಹಿತಾಸಕ್ತಿಯನ್ನು ವೃದ್ಧಿಸಲು ಮತ್ತು ಸದಸ್ಯರಲ್ಲಿ ಮಿತವ್ಯಯ, ಉಳಿತಾಯ ಮತ್ತು ಸ್ವಯಂ ಸಹಾಯವನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ಸದಸ್ಯರಿಗೆ ಹೊಸದಾಗಿ ವಾಸಿಸುವ ಮನೆಗಳನ್ನು ನಿರ್ಮಿಸಲು, ಈಗಿರುವ ಅವರ ಮನೆಗಳನ್ನು ವಿಸ್ತರಿಸುವುದಕ್ಕಾಗಿ, ದುರಸ್ತಿಗೊಳಿಸುವುದಕ್ಕಾಗಿ ಹಾಗೂ ನಿವೇಶನಗಳನ್ನು ಖರೀದಿಸಲು ಮತ್ತು ಆಸ್ತಿ ಅಡಮಾನ ಸಾಲಗಳನ್ನು ಕೊಡಲಾಗುತ್ತಿದೆ ಎಂದು ತಿಳಿಸಿದರು.
ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಪ್ರತಿಭಾ ಪುರಸ್ಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಸಭೆಯನ್ನು ಮನೋವೈದ್ಯ ಡಾ.ಎನ್. ಗೋಪಾಲಕೃಷ್ಣ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷರಾದ ನಾಗರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಪ್ಪ, ನಿರ್ದೇಶಕರಾದ ಕೆ. ಕರೀಗೌಡ, ಕೆ. ಗಂಗಚಿಕ್ಕೇಗೌಡ, ಗುರುಮೂರ್ತಿ, ಕೆ. ಚಂದ್ರಯ್ಯ, ದಿನೇಶ, ಎಂ. ಮಂಜುನಾಥ, ಟಿ. ರಮೇಶ್, ರಮೇಶ್ ಕೇಕುಡ, ಎಂ. ರಾಮಕೃಷ್ಣಯ್ಯ, ಎಸ್.ಎಲ್. ವನರಾಜು, ಬಿ.ಎಸ್. ಗಂಗಾಧರ್, ಎಸ್. ರುಕ್ಮಿಣಿ, ಕೆ.ಸಿ. ವಿನೋದ, ಸಿಬ್ಬಂದಿಗಳಾದ ಗುರುಪ್ರಸಾದ್, ಟಿ.ಬಿ. ಪ್ರಕಾಶ್ ಇತರರು ಇದ್ದರು. ಗಾಯಕ ಕೆಂಗಲ್ ವಿನಯ್ ಕುಮಾರ್ ಪ್ರಾರ್ಥಿಸಿದರು.
