ನಿವೃತ್ತ ನೌಕರರ ಸಂಘದ 2022ರ ಕ್ಯಾಲೆಂಡರ್ ಬಿಡುಗಡೆ

ರಾಮನಗರ: ದಿನ, ಮಾಸಿಕ ಹಾಗೂ ವರ್ಷದ ಆಗು-ಹೋಗುಗಳ ದಾಖಲಿಸುವ ನಿಟ್ಟಿನಲ್ಲಿ ವಾರ್ಷಿಕ ಕ್ಯಾಲೆಂಡರ್ ಫೂರಕವಾಗಿದೆ ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.
ನಗರದ ಚೈತನ್ಯಭವನದಲ್ಲಿ ಹಮ್ಮಿಕೊಂಡಿದ್ದ ಸಂಘದ ಮಾಸಿಕ ಸಭೆಯಲ್ಲಿ 2022ರ ಕ್ಯಾಲೆಂಡರ್ ಬಿಡುಗಡೆ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಸಂಘವು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಸದಸ್ಯರಿಗಾಗಿ ಸಂಧ್ಯಾಕಿರಣ ಸೇರಿದಂತೆ ಹಲವಾರು
ಯೋಜನೆಗಳಿವೆ ಇವುಗಳನ್ನು ಸದಸ್ಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು
ಕರೆ ನೀಡಿದರು.
ಸಂಘದ ನೂತನ ನಿರ್ದೇಶಕ, ನಿವೃತ್ತ ಟಿಎಚ್ಒ ಡಾ.ಎಂ.ನಯಾಜ್ ಅಹಮದ್ ಮಾತನಾಡಿ, ನಗರದಲ್ಲಿನ ತಮ್ಮ‌ ಕ್ಲಿನಿಕ್ ನಲ್ಲಿ ಬಡ ಹಿರಿಯ ನಾಗರಿಕರು ಹಾಗೂ ಸಂಘದ ಸದಸ್ಯರಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುವುದಾಗಿ ವಾಗ್ದಾನ ಮಾಡಿದರು.
ಖಜಾಂಚಿ ಹಬೀಬುಲ್ಲಾ ಖಾನ್, ಹಿಂದಿನ ಸಭೆಯ ವರದಿ ಮಂಡಿಸಿದರು.
ಪ್ರಧಾನ ಕಾರ್ಯದರ್ಶಿ ಕೆ. ನಟರಾಜ ಅವರು ತಮ್ಮ ಮಾಸಿಕ ವರದಿಯ ಆಯವ್ಯಯ ಮಂಡಿಸಿ ಸದಸ್ಯರು ಹಾಗೂ ನಿರ್ದೇಶಕರಿಂದ ಅನುಮತಿ ಪಡೆದುಕೊಂಡರು.
ಸಂಘದ ಸಂಘಟನಾ ಕಾರ್ಯದರ್ಶಿ ನಿವೃತ್ತ ಶಿಕ್ಷಕ ಸೋಗಾಲ ರಾಮು ಅವರು ನಿರ್ವಹಣೆ ಮಾಡಿದರು.
ಇದೇ ಸಂದರ್ಭದಲ್ಲಿ 80 ವರ್ಷ ಪೂರೈಸಿದ ಸಂಘದ ಜಿಲ್ಲಾಧ್ಯಕ್ಷ ಟಿ.ವೆಂಕಟಾಚಲಯ್ಯ ಹಾಗೂ ಸಂಘದ ಮಾಜಿ ನಿರ್ದೇಶಕ ಕೆಂಡೇಗೌಡ ಅವರಿಗೆ ಆತ್ಮೀಯವಾಗಿ ಅಭಿನಂದನೆ ಸಲ್ಲಿಸಲಾಯಿತು.
ಸಭೆಯ ಆರಂಭದಲ್ಲಿ ಸಂಘದ ನೂತನ ಸದಸ್ಯರಾದ ಚನ್ನಪಟ್ಟಣದ ಭದ್ರಮ್ಮ, ರಾಂಪುರ ವೆಂಕಟೇಶ್ ಹಾಗೂ ಇನ್ನಿತರರು ಸಭೆಯಲ್ಲಿ ತಮ್ಮ ಪರಿಚಯ ಮಾಡಿಕೊಂಡರು.
ಸಭೆಯ ಆರಂಭದಲ್ಲಿ ಕಳೆದ ತಿಂಗಳು ನಿಧನರಾದ ಸಂಘದ ಸದಸ್ಯರಾದ ‌ಈಶ್ವರಯ್ಯ ಮತ್ತು ಅಪ್ಪುಸ್ವಾಮಿ ಹಾಗೂ ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸೇನಾ ದಂಡನಾಯಕ ಬಿಪಿನ್‌ ರಾವತ್ ದಂಪತಿ ಹಾಗೂ ಹದಿಮೂರು ಮಂದಿಗೆ ಸಂತಾಪ‌ ಸೂಚಿಸಲಾಯಿತು.
ಸಂಘದ ಗೌರವಾಧ್ಯಕ್ಷ ಚಂದ್ರಶೇಖರ, ಉಪಾಧ್ಯಕ್ಷರಾದ ಯು.ವಿ.ಸ್ವಾಮಿ, ಬಿ.ಕೆ. ಸಿದ್ದಲಿಂಗಯ್ಯ, ಪುಟ್ಟಸ್ವಾಮಿಗೌಡ, ರಾಜ್ಯ ಸಂಘದ ಸದಸ್ಯ ಬಿ.ಎಸ್. ಶಿವಸ್ವಾಮಿ, ಎಸ್.ಎಲ್.ವನರಾಜು, ಸಂಘಟನಾ ಕಾರ್ಯದರ್ಶಿಗಳಾದ ಕೆ.ಎಸ್.ಕಾಳಪ್ಪ, ಶಿಕ್ಷಕ ಸೋಗಾಲ ರಾಮು, ಸಹ ಕಾರ್ಯದರ್ಶಿಗಳಾದ ಜಿ.ಗಿರಿಗೌಡ ಕೆ.ಕರಿಗೌಡ, ಕೆ.ಹನುಮಯ್ಯ ಆಂತರಿಕ ಲೆಕ್ಕ ಪರಿಶೋಧಕ ಎಂ. ತಮ್ಮಯ್ಯ, ನಿರ್ದೇಶಕರಾದ ಆರ್.ಚಿಕ್ಕಬೈರೇಗೌಡ, ಆರ್. ನಂಜಪ್ಪ, ಎಂ.ಮರಿದೇವರು, ಎಸ್. ಸಿದ್ದಯ್ಯ, ಬಿ.ಪಿ.ರೇವಣ್ಣ, ಜಿ. ಚಂದ್ರಮ್ಮ, ಎಸ್.ಎಲ್.ವನರಾಜು, ಎಂ.ನಾಗರಾಜು, ಬಿ.ವಿ.ಸದಾಶಿವಯ್ಯ, ಬಿ.ನಾಗರಾಜಯ್ಯ ವಿ. ಮುನಿರುದ್ರಯ್ಯ, ಮಾಗಡಯ್ಯ, ಅಬ್ದುಲ್ ಹೈ, ಜೆ.ಎಂ.ವೆಂಕಟಕೃಷ್ಣೇಗೌಡ, ಸಿ.ಕೆ.ಪುಷ್ಪಾ, ಡಾ.ಎಂ.ನಯಾಜ್ ಅಹಮ್ಮದ್, ವಿ.ಮುನಿರುದ್ರಯ್ಯ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *