ಬಿಡದಿ ಪುರಸಭೆ ಚುನಾವಣೆ : ಕೊನೆ ದಿನ ಮೂರು ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ರಾಮನಗರ : ಬಿಡದಿ ಪುರಸಭೆ ಚುನಾವಣೆಗೆ ನಾಮ ಪತ್ರ ಸಲ್ಲಿಸಲು ಕೊನೆ ದಿನವಾದ ಬುಧವಾರ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಕೆಲ ವಾರ್ಡುಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಒಂದನೇ ವಾರ್ಡಿನ ಕಲ್ಲುಗೋಪಳ್ಳಿಯಿಂದ ಎನ್.ಕೆ.ಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ನೂರಾರು ಬೆಂಲಿಗರೊಂದಿಗೆ ಆಗಮಿಸಿ ನಾಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಶಿವಣ್ಣ, ವೆಂಕಟೇಸದ್, ಸಿದ್ದಯ್ಯ, ದಿಷಾ ಸಮಿತಿ ಸದಸ್ಯೆ ಕಾವ್ಯ ಸೇರಿದಂತೆ ದಾಸಪ್ಪನದೊಡ್ಡಿ ಮುಖಂಡರು ಉಪಸ್ಥಿತರಿದ್ದರು.
ವಾರ್ಡ್ ಸಂಖ್ಯೆ 17 ರಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಮೀಸೆ ರಾಮಕೃಷ್ಣಯ್ಯ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಶಾಸಕ ಎ.ಮಂಜುನಾಥ್ ಪತ್ನಿ, ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಸೇರಿದಂತೆ ಬಿ.ವಿ.ಪುಟ್ಟಸ್ವಾಮಯ್ಯ, ಪುರಸಭೆ ಮಾಜಿ ಅಧ್ಯಕ್ಷೆ ವೆಂಕಟೇಶಮ್ಮ ರಾಮಕೃಷ್ಣಯ್ಯ, ಸಂತೋಷ, ಬಾನಂದೂರು ಶಿವಕುಮಾರ್, ಬೋರಿ ತಿಮ್ಮಯ್ಯ, ಗಿರೀಶ್, ಗ್ರಾಪಂ ಸದಸ್ಯ ಗೊಲ್ಲಹಳ್ಳಿ ರವಿ, ಬಾನಂದೂರು ಪಾಪಣ್ಣ, ರಾಮು, ಮತ್ತಿತರರು ಉಪಸ್ಥಿತರಿದ್ದರು.
ಬಾನಂದೂರು ವಾರ್ಡಿನಿಂದ ಎಸ್.ವೀಣಾ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಪತಿ ಪಾಪಣ್ಣ, ಮುಖಂಡರಾದ ಕೆಂಪರಾಜು, ಆಟೋ ಆನಂದ್, ರಾಧಾಕೃಷ್ಣ, ಮಂಜು, ಸಿದ್ದರಾಜು, ಸಂದೀಪ ಮತ್ತಿತರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಹಾಲಿನ ಮಂಜಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೆ, 16 ನೇ ವಾರ್ಡಿನಮದ ಗಾಯಿತ್ರಿ ಜಗದೀಶ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
23 ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವೆಂಕಟಾಚಲಯ್ಯ, 5 ನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ಪದ್ಮ ಅವರು ನಾಮಪತ್ರ ಸಲ್ಲಿಸಿದರು. ವಾರ್ಡ್ ಸಂಖ್ಯೆ 14 ರಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಗರತ್ನಮ್ಮ ಅವರು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಜೇಶ್ ಎನ್. ರವಿ, ಅಶ್ವಥ್, ಮಂಡ್ಯ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಪಕ್ಷದ ಅಭ್ಯರ್ಥಿಗಳಾಗಿ 21 ನೇ ವಾರ್ಡಿನಿಂದ ಸಿದ್ಧರಾಜು, 5 ನೇ ವಾರ್ಡಿನಿಂದ ನೇತ್ರಾವತಿ, 6 ನೇ ವಾರ್ಡಿನಿಂದ ದಿನೇಶ್, 13 ನೇ ವಾರ್ಡಿನಿಂದ ರೇಣುಕಯ್ಯ ಅವರು ನಾಮಪತ್ರ ಸಲ್ಲಿಸಿದರು. 5 ನೇ ವಾರ್ಡಿನಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ಪದ್ಮಾ ಅವರು ಮುಖಂಡರಾದ ಶರತ್ ಗೌಡ, ಸಂದೀಪ್ ರೆಡ್ಡಿ, ಚೇತನ್, ನಂಜುಂಡಸ್ಚಾಮಿ, ಕುಸುಮಾ, ಮಾಲ, ಪುಟ್ಟಲಕ್ಷ್ಮಮ್ಮ ಮತ್ತಿತರರೊಂದಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು.

