ಬಿಡದಿ ಪುರಸಭೆ ಚುನಾವಣೆ : ಮೂರು ಪಕ್ಷಗಳಿಂದ ನಾಮಪತ್ರ
ರಾಮನಗರ: ಬಿಡದಿ ಪುರಸಭೆ ಚುನಾವಣೆಯ ಕಾವು ದಿನೇ ದಿನೇ ರಂಗೇರುತ್ತಿದ್ದು, ಮಂಗಳವಾರ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು.
ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ ಎ.ಮಂಜುನಾಥ್, ಪುರಸಭೆ ಮಾಜಿ ಸದಸ್ಯ ಬಿ.ಎಂ.ರಮೇಶ್ ಕುಮಾರ್ ಹಾಗೂ ಮತ್ತಿತರರು ಸಾಥ್ ನೀಡಿದರೆ, ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಉಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್ ಚಂದ್ರ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಇದ್ದರು.
ಬಿಜೆಪಿ ಅಭ್ಯರ್ಥಿಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ, ಉಪಾಧ್ಯಕ್ಷ ಶಿವಲಿಂಗಯ್ಯ (ಕುಳ್ಳಪ್ಪ) ಮಾಗಡಿ ಮಂಡಲ ಅಧ್ಯಕ್ಷ ಧನಂಜಯ, ರಾಮನಗರ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಡಿ.ನರೇಂದ್ರ, ಬಿಡದಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹನುಮೇಶ್ ಮತ್ತಿತರರು ಸಾಥ್ ನೀಡಿದರು.
ಜೆಡಿಎಸ್ ಅಭ್ಯರ್ಥಿಗಳ ಉಮೇದುವಾರಿಕೆ:
ಬಿಡದಿ ಪುರಸಭೆಯ ವಾರ್ಡ್ ನಂ 11 – ಬಿಡದಿ-3 ಜೆಡಿಎಸ್ ಅಭ್ಯರ್ಥಿಯಾಗಿ ಎಂ.ಎನ್.ಹರಿಪ್ರಸಾದ್ ನಾಮಪತ್ರ ಸಲ್ಲಿಸಿದರು.
ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ ಎ.ಮಂಜುನಾಥ್, ಮಂಜುನಾಥ್ ಬ್ಯಾಟಪ್ಪ, ಮಂಜು. ಆರ್.ಗೌಡ, ನಂಜುಂಡ, ವಸೀಂ ಪಾಷ, ರಮೇಶ್, ಮನೋರಂಜನ್, ರಾಮಪ್ರಸಾದ್, ಪ್ರೇಮ್, ಮತ್ತಿತರರು ಉಪಸ್ಥಿತರಿದ್ದರು.
ವಾರ್ಡ್ ನಂ 9 – ಬಿಡದಿ-1 ರ ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಜಿ.ಲೋಹಿತ್ ಕುಮಾರ್ ನಾಮಪತ್ರ ಸಲ್ಲಿಸಿದರು.
ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ ಎ.ಮಂಜುನಾಥ್, ಬಿ.ಎಂ.ರಮೇಶ್ ಕುಮಾರ್, ಮಂಜುನಾಥ್ ಬ್ಯಾಟಪ್ಪ, ತಾಂಡವಮೂರ್ತಿ, ಬಿ.ಪಿ.ರುದ್ರಪ್ಪ, ಸಿದ್ದರಾಜು, ರೇಣುಕಪ್ಪ, ವಿನಯ್ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ:
ವಾರ್ಡ್ ನಂ 15 – ಛತ್ರ-1 ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಸಿ. ಬಿಂದ್ಯಾ ನಾಮಪತ್ರ ಸಲ್ಲಿಸಿದರು.
ವಾರ್ಡ್ ನಂ 3 – ಕಾಂಗ್ರೆಸ್ ಅಭ್ಯರ್ಥಿಯಾಗಿ ಕವಿತಾ ಕುಮಾರ್ ಉಮೇದುವಾರಿಕೆ ಸಲ್ಲಿಸಿದರು. ಮುಖಂಡರಾದ ಮಹೇಶ್, ನೀಲಮ್ಮ, ಬಾಲಾಜಿ, ಕೆಂಚನಕುಪ್ಪೆ ರಾಮಣ್ಣ, ವೆಂಕಟೇಶ್, ವೀಣಾ, ರತ್ನಮ್ಮ, ಸತ್ಯಪ್ಪ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ: ವಾರ್ಡ್ ನಂ-8 ಕೇತಗಾನಹಳ್ಳಿ-2 ಬಿಜೆಪಿ ಅಭ್ಯರ್ಥಿಯಾಗಿ ಬಿ.ಎನ್. ಪ್ರಸನ್ನಕುಮಾರ್, ವಾರ್ಡ್ ನಂ-11 ಬಿಜೆಪಿ ಅಭ್ಯರ್ಥಿಯಾಗಿ ಲೋಕೇಶ್, ವಾರ್ಡ್ ನಂ-12 ಬಿಡದಿ-4 ಬಿಜೆಪಿ ಅಭ್ಯರ್ಥಿಯಾಗಿ ಬಾಳೆಮಂಡಿ ಶಿವಣ್ಣ ನಾಮಪತ್ರ ಸಲ್ಲಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ, ಉಪಾಧ್ಯಕ್ಷ ಶಿವಲಿಂಗಯ್ಯ (ಕುಳ್ಳಪ್ಪ) ಮಾಗಡಿ ಮಂಡಲ ಅಧ್ಯಕ್ಷ ಧನಂಜಯ, ರಾಮನಗರ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಡಿ.ನರೇಂದ್ರ, ಬಿಡದಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹನುಮೇಶ್, ರವಿ, ಕೃಷ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

