ಡಿ.ಕೆ. ಶಿವಕುಮಾರ್ ಕೆಪಿಸಿಸಿ ಸಾರಥ್ಯದ ವಹಿಸಿಕೊಂಡ ಮೇಲೆ ರಾಜ್ಯದಲ್ಲಿ ಬದಲಾವಣೆ ಪರ್ವ : ಎಸ್. ರವಿ
ರಾಮನಗರ : ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಸಾರಥ್ಯ ವಹಿಸಿದ ಮೇಲೆ ಬದಲಾವಣೆಯ ಪರ್ವ ರಾಜ್ಯದಲ್ಲಿ ಕಾಣುತ್ತಿದ್ದೇವೆ ಇದಕ್ಕೆ ಈಗ ನಡೆದ ವಿಧಾನ ಪರಿಷತ್ತಿನ ಚುನಾವಣೆ ಫಲಿತಾಂಶವೇ ಹೇಳುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ತಿಳಿಸಿದರು.
ರಾಮನಗರದ ಕಾಂಗ್ರೇಸ್ ಪಕ್ಷದ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರು, ಪಕ್ಷದ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮೇಲೆ ರಾಜ್ಯದಲ್ಲಿ ಹಲವು ಬದಲಾವಣೆಗಳಾಗಿವೆ. ಅವರ ನಾಯಕತ್ವ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ವಿಧಾನ ಪರಿಷತ್‍ಚುನಾವಣೆಯಲ್ಲಿ ಭಾರಿಅಂತರದ ಗೆಲುವಿಗೆ ಕಾರಣವಾಯಿತು ಎಂದರು.
ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಆಡಳಿತರೂಢ ಪಕ್ಷಗಳೇಗೆದ್ದಂತಹ ನಿದರ್ಶನಗಳಿವೆ. ಆದರೆಡಿ.ಕೆ.ಶಿವಕುಮಾರ್ ಕಾಂಗ್ರೆಸ್‍ಚುಕ್ಕಾಣಿ ಹಿಡಿದ ನಂತರ ಉಪ ಚುನಾವಣೆ ಸೇರಿದಂತೆಗ್ರಾಮ ಮಟ್ಟದ ಸಹಕಾರ ಸಂಘಗಳವರೆಗೆ ಯಶಸ್ಸು ಕಾಣಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತವರಲ್ಲೂ ಕೂಡಕಾಂಗ್ರೆಸ್ ಪಕ್ಷಗೆಲ್ಲುವ ಮೂಲಕ ಬಿಜೆಪಿಯ ನೆಲೆ ಕಸಿದಿದೆ ಇದು ಮುಂದಿನ 2023 ರಚುನಾವಣೆಗೆಕಾಂಗ್ರೆಸ್ ಪಕ್ಷದ ಗೆಲುವಿನ ದಿಕ್ಸೂಚಿಯಾಗಿದೆ.
ವಿಧಾನ ಪರಿಷತ್ ಚುನಾನವಣೆಗಳಲ್ಲಿ ಆಸಕ್ತಿವಹಿಸದಿದ್ದಕುಮಾರಸ್ವಾಮಿ ಈ ಭಾರಿಯಚುನಾವಣೆಯಲ್ಲಿ ಸ್ವತಃಅಖಾಡಕ್ಕೆ ಇಳಿದಿದ್ದರು, ಚುನಾವಣೆಗೆ ಬೇಕಾದ ಮದ್ದು- ಗುಂಡುಗಳನ್ನು ಪೂರೈಸುವುದಾಗಿಯೂ ಹಾಗೂ ಗೆಲುವಿಗೆ ಬೇಕಾದಎಲ್ಲಾ ರಣತಂತ್ರಗಳನ್ನು ಎಣೆಯಲಾಗುವುದುಎಂದಿದ್ದರು. ಆದರೆ ಮತದಾರರುಜೆಡಿಎಸ್ ನವರಗೊಂದಲದ ನಡೆಗೆತಕ್ಕ ಪಾಠ ಕಲಿಸಿದ್ದಾರೆ ಎಂದರು.
ಜಾತ್ಯಾತೀತಜನತಾ ದಳದ ಮುಖಂಡರಾದಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಆ ಪಕ್ಷದ ನಾಯಕರಗೊಂದಲಕರ ಹೇಳಿಕೆಗಳು ಮತದಾರರು ಆ ಪಕ್ಷವನ್ನುತಿರಸ್ಕರಿಸಲುಕಾರಣವಾಯಿತು.ಜೆಡಿಎಸ್ ಮತ್ತು ಬಿಜೆಪಿ ನೇರÀಒಪ್ಪಂದ ಮಾಡಿಕೊಂಡಿದ್ದವು, ಆ ಎರಡು ಪಕ್ಷಗಳ ನಾಯಕರಲ್ಲಿಯೆ ಸ್ಪಷ್ಟತೆಇರಲಿಲ್ಲ. ಮತದಾರರನ್ನುಗೊಂದಲಕ್ಕೆ ಒಳಗಾಗುವಂತೆ ಮಾಡಲೆತ್ನಿಸಿದ್ದರು, ಬೆಂಗಳೂರು ಗ್ರಾಮಾಂತರಉಸ್ತುವಾರಿ ಸಚಿವಎಂ.ಟಿ.ಬಿ.ನಾಗರಾಜ್ ಹೊಸಕೋಟೆಯಲ್ಲಿ ಹೊಂದಾಣಿಕೆರಾಜಕಾರಣವನ್ನು ಅನುಷ್ಠಾನಕ್ಕೆ ತಂದಿದ್ದರು, ಆದರೆರಾಮನಗರಜಿಲ್ಲೆಯಲ್ಲಿಅದು ಯಶಸ್ವಿಯಾಗಲಿಲ್ಲ.
ಕಾಂಗ್ರೆಸ್‍ಎಂದೂ ಹೊಂದಾಣಿಕೆರಾಜಕೀಯ ಮಾಡಿಲ್ಲ. ಇಲ್ಲಿಜೆಡಿಎಸ್ ಪಕ್ಷದ ನಾಯಕರಿಗೆ ಸ್ಪಷ್ಟತೆ ಎಂಬುದಿಲ್ಲ. ಒಮ್ಮೆಕಾಂಗ್ರೆಸ್‍ಜೊತೆ ಮತ್ತೊಮ್ಮೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ.ಇದರಿಂದ ಮತದಾರರುಕಾಂಗ್ರೆಸ್ ಪಕ್ಷದತ್ತ ವಾಲುತ್ತಿದ್ದಾರೆ.
ಕಾಂಗ್ರೇಸ್ ಪಕ್ಷದಅಧ್ಯಕ್ಷಡಿ.ಕೆ.ಶಿವಕುಮಾರ್ ನಾಯಕತ್ವ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರ ಆಶೀರ್ವಾದ, ನಮ್ಮ ನಾಯಕರಾದಸಂಸದಡಿ.ಕೆ.ಸುರೇಶ್‍ರವರ ಮಾರ್ಗದರ್ಶನಅವರ ಪರಿಶ್ರಮ ಸೇರಿದಂತೆಕಾಂಗ್ರೆಸ್‍ಮುಖಂಡರ, ಕಾರ್ಯಕರ್ತರ ಸಂಘಟಿತಒಗ್ಗಟ್ಟಿನಶ್ರಮ ನನ್ನ ಗೆಲುವಿಗೆ ಕಾರಣವಾಗಿದೆ700 ಕ್ಕೂ ಹೆಚ್ಚಿನ ಮತಗಳ ಅಂತರದ ಗೆಲುವು ಲಭಿಸಿದೆ. ಪಕ್ಷದಆಂತರಿಕ ಸಮೀಕ್ಷೆಯಲ್ಲಿ 2000 ಮತಗಳ ಲಭಿಸಬಹುದೆಂಬ ನಿರೀಕ್ಷೆ ಮಾಡಿದ್ದೆವುಆದರೆ ಭಾರಿಅಂತರದ ಗೆಲುವು ಲಭಿಸಿದ್ದು, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದವರುಕಾಂಗ್ರೆಸ್‍ಪರವಾಗಿಮತ ಹಾಕಿರುವುದು ಸ್ಪಷ್ಟವಾಗುತ್ತಿದೆಎಂದರು.
ಜಿಲ್ಲಾಕಾಂಗ್ರೆಸ್‍ಅಧ್ಯಕ್ಷಗಂಗಾಧರ್, ಜಿಲ್ಲಾ ಪಂಚಾಯಿತಿ ಮಾಜಿಅಧ್ಯಕ್ಷಇಕ್ಬಾಲ್ ಹುಸೇನ್, ನಗರಸಭೆಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ, ಸದಸ್ಯರಾದ ಕೆ.ಶೇಷಾದ್ರಿ, ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷ ವಿ.ಎಚ್.ರಾಜು ಮುಖಂಡರುಗಳಾದ ಸಯ್ಯದ್‍ಜಿಯಾವುಲ್ಲಾ, ಎ.ಬಿ.ಚೇತನ್‍ಕುಮಾರ್, ಕೆ.ರಮೇಶ್, ವಿಜಯದೇವ್, ವಿಷ್ಣುಮೂರ್ತಿ, ಗಂಗಾಧರ್, ಸುನಿಲ್, ಪ್ರಮೋದ್, ಮುತ್ತರಾಜು, ಮಹೇಂದ್ರ, ನಿಜಾಂ ಷರೀಫ್ ಇತರರು ಇದ್ದರು.
