ರೇವಣಸಿದ್ದೇಶ್ವರ ಬೆಟ್ಟದ ದೇವಾಲಯದಲ್ಲಿ ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಹಣ ಏಣಿಕೆ : 6,15,900 ರೂ. ಹಣ ಸಂಗ್ರಹ

ರಾಮನಗರ : ತಾಲ್ಲೂಕಿನ ಕೈಲಾಂಚ ಹೋಬಳಿಯ ಹುಲಿಕೆರೆ-ಗುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ದೇವಾಲಯದಲ್ಲಿ ಧಾರ್ಮಿಕ ದತ್ತಿ ಇಲಾಖೆ ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಹಣ ಏಣಿಕೆ ಕಾರ್ಯ ನಡೆಸಿದರು.
ಅವ್ವೇರಹಳ್ಳಿ ರೇವಣಸಿದ್ದೇಶ್ವರಬೆಟ್ಟ ಪ್ರಾಚೀನ ಕ್ಷೇತ್ರಗಳಲ್ಲಿ ಒಂದಾಗಿದ್ದು ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.ನಾಡಿನೆಲ್ಲೆಡೆಅಪಾರ ಭಕ್ತಾಧಿಗಳನ್ನು ಹೊಂದಿದೆ. ಕ್ಷೇತ್ರದಲ್ಲಿ ರೇವಣಸಿದ್ದೇಶ್ವರ, ಪಾಂಡವರ ವನವಾಸ ಕಾಲದಲ್ಲಿ ಭೀಮನಿಂದ ಪ್ರತಿಷ್ಟಾಪನೆಗೊಂಡ ಮರುಳಸಿದ್ದೇಶ್ವರ ದೇವಾಲಯ, ವೀರಭದ್ರಸ್ವಾಮಿ ದೇವಾಲಯ, ರೇಣುಕಾಂಭ ದೇವಾಲಯಗಳಿವೆ.
ಧಾರ್ಮಿಕ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ದೇವಾಲಯಇದಾಗಿದೆ. ಪ್ರತೀ ವರ್ಷ ದೇವಾಲಯಕ್ಕೆ ಹುಂಡಿ ಹಣದಿಂದಲೇ ಆದಾಯ ಬರುತ್ತದೆ ಭಕ್ತರು ಕಾಣಿಕೆ ನೀಡಲು ಭೀಮೇಶ್ವರ ದೇವಾಲಯ ರೇಣುಕಾಂಭ ದೇವಾಲಯದಲ್ಲಿ ಹುಂಡಿಗಳನ್ನು ಇಡಲಾಗಿದೆ. ಪ್ರತೀ ಆರು, ಮೂರು, ಎರಡು ತಿಂಗಳಿಗೊಮ್ಮೆ ಹುಂಡಿಯಲ್ಲಿ ಸಂಗ್ರವಾಗಿರುವ ಹಣತೆಗೆದು ಬ್ಯಾಂಕಿಗೆ ಧಾರ್ಮಿಕ ದತ್ತಿ ಇಲಾಖೆ ಜಮಾ ಮಾಡುತ್ತದೆ.
ಬುಧವಾರ ರೇವಣಸಿದ್ದೇಶ್ವರ ದೇವಾಲಯದ ಆಡಳಿತಾಧಿಕಾರಿ ಎಸ್.ಜೆ. ಯೇಸುರಾಜ್, ಕಂದಾಯ, ಧಾರ್ಮಿಕದತ್ತಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ದೇವಾಲಯದ ಎಲ್ಲಾ ಹುಂಡಿಗಳಿಂದ ಒಟ್ಟು 6,15,900ರೂ.ಗಳು ಸಂಗ್ರಹವಾಗಿತ್ತು. ಸ್ಥಳದಲ್ಲೇ ಬರೋಡಾ ಬ್ಯಾಂಕಿನ ಅಧಿಕಾರಿಗಳು ಹಣವನ್ನು ನೋಟು ಎಣಿಸುವ ಯಂತ್ರಗಳಿಂದ ಲೆಕ್ಕ ಹಾಕಿ ಜಮಾವಣೆ ಮಾಡಿಕೊಂಡರು.
ದೇವಾಲಯದ ಆಡಳಿತಾಧಿಕಾರಿ ಎಸ್.ಜೆ.ಯೇಸುರಾಜ್ ಮಾತನಾಡಿ ದೇವಾಲಯಗಳು ಬೆಟ್ಟದ ಅಕ್ಕಪಕ್ಕ ಜನ ವಸತಿ ಪ್ರದೇಶದಿಂದದೂರ ಇರುವ ಕಾರಣ ಹಣದ ಭದ್ರತಾದೃಷ್ಟಿಯಿಂದ ಪ್ರತೀ ಎರಡು, ಮೂರು ತಿಂಗಳಿಗೊಮ್ಮೆ ಹಣತೆಗೆಯಲಾಗುತ್ತಿದೆ ಕಂದಾಯ, ಧಾರ್ಮಿಕದತ್ತಿ ಇಲಾಖೆ ಸಮ್ಮುಖದಲ್ಲಿ ಪ್ರತೀ ಎಣಿಕೆ ಕಾರ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನುತೆಗೆಯಲಾಯಿತು. ಸ್ಥಳದಲ್ಲಿ ಬ್ಯಾಂಕಿನ ಅಧಿಕಾರಿಗಳುಜಮಾವಣೆ ಮಾಡಿಕೊಂಡರು ಎಂದರು.
ಗ್ರಾಮ ಲೆಕ್ಕಿಗರಾದ ಮಂಜುನಾಥ್, ಜಿಲ್ಲಾಧಿಕಾರಿಗಳ ಕಛೇರಿ ವಿಷಯ ನಿರ್ವಾಹಕಿ ಎಸ್ ಸುಮಿತ್ರ ಮುಖಂಡರಾದ ಅವ್ವೇರಹಳ್ಳಿ ಶಿವಲಿಂಗಯ್ಯ, ಸಮಾಜ ಸೇವಕ ತಮ್ಮಣ್ಣ, ದೇವಾಲಯದ ಪ್ರಧಾನಅರ್ಚಕ ವಿಜಯ್‍ಕುಮಾರ್, ರೇಣುಕಾಂಭ ದೇವಾಲಯದ ಅರ್ಚಕ ಮೂರ್ತಿ, ಗ್ರಾಮ ಸೇವಕರು, ದೇವಾಲಯದ ಸಿಬ್ಬಂದಿಗಳು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *