ಪೇಟೆ ಕುರುಬರಹಳ್ಳಿಯ 16 ಅಡಿಯ ಏಕಶಿಲಾ ಆಂಜನೇಯಸ್ವಾಮಿಗೆ 400 ಕೆ.ಜಿ. ಹಣ್ಣಿನ ಅಲಂಕಾರ
ರಾಮನಗರ : ತಾಲ್ಲೂಕಿನ ಕಸಬಾ ಹೋಬಳಿಯ ಪೇಟೆ ಕುರುಬರಹಳ್ಳಿಯಲ್ಲಿರುವ 16 ಅಡಿ ಎತ್ತರದ ಏತ್ತರದ ಏಕಶಿಲಾ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ವಿಶೇಷ ಅಲಂಕಾರ ಸೇವೆ ಮತ್ತು ಅನ್ನ ಸಂತರ್ಪಣೆ ಸೇವೆಯನ್ನು ಹಮ್ಮಿಕೊಳ್ಳಲಾಗಿತ್ತು.
ಲಿಖಿತ್ ಎಂ ವೈಷ್ಣವ್, ಮನ್ನಾರ್ ಸ್ವಾಮಿ, ರಾಮು, ವೇಣು, ರಾಜು ಸುನೀಲ್, ಪ್ರಭು ಮತ್ತು ತಂಡ ಗುರುವಾರ ಬೆಳಿಗ್ಗೆಯಿಂದಲೇ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಗಿತ್ತು. 16 ಅಡಿ ಎತ್ತರದ ಆಂಜನೇಯನಿಗೆ ಭಕ್ತರೊಬ್ಬರು ಕೊಟ್ಟಿದ್ದ 400 ಕ್ಕೂ ಹೆಚ್ಚು ಕೆ.ಜಿ. ತೂಕದ ಹಣ್ಣುಗಳೊಂದಿಗೆ ಹನುಮನಿಗೆ ಅಲಂಕಾರ ಮಾಡಲಾಗಿತ್ತು.
ಸೀಬೆಕಾಯಿ, ಕಲ್ಲಂಗಡಿ, ಕರ್ಬೂಜ, ಅನಾನಸ್, ಕಿತ್ತಳೆ, ಮೋಸಂಬಿ, ಸೇಬು, ದ್ರಾಕ್ಷಿ, ಸಪೋಟಗಳಿಂದ ತಯಾರಿಸಿದ್ದ ಹಾರಗಳನ್ನು 16 ಅಡಿ ಎತ್ತರದ ಆಂಜನೇಯಸ್ವಾಮಿ ಮೂರ್ತಿಗೆ ಅಲಂಕರಿಸಲಾಗಿತ್ತು. ತುಳಸಿದಳಗಳಿಂದ ತಯಾರಿಸಿದ್ದ ಹಾರದಿಂದ ಹನುಮನಿಗೆ ಕಚ್ಚೆಯನ್ನು ತೊಡಿಸಿದ್ದು ಮತ್ತೊಂದು ವಿಶೇಷವಾಗಿತ್ತು. ಗ್ರಾಮದ ಭಕ್ತಾದಿಗಳು ವೀಳ್ಯದೆಲೆ ಹಾರ ಮತ್ತು ಹೂವಿನ ಹಾರಗಳನ್ನು ಸಮರ್ಪಿಸಿದ್ದರು. “18 ವರ್ಷಗಳ ಹಿಂದೆ ದೇವಾಲಯದ ಮುಂಭಾಗ ಇರುವ ಜಮ್ನೇರಳೆ ಮರದಲ್ಲಿ ಆಂಜನೇಯ ರೂಪ ಮೂಡಿದೆ. ಇದನ್ನು ಕಂಡ ಗ್ರಾಮಸ್ಥರು ಅತ್ಯಂತ ಭಕ್ತಿಯಿಂದ ಇಲ್ಲೊಂದು ದೇವಾಲಯ ನಿರ್ಮಿಸಲಾಯಿತು” ಎನ್ನುತ್ತಾರೆ ಗ್ರಾಮಸ್ಥರು.
ಮಾಜಿಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಹಕಾರದಿಂದ ಈ ದೇವಾಲಯ ನಿರ್ಮಾಣವಾಗಿದೆ. ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಅವರು ತಮ್ಮ ಶಾಸಕರ ನಿಧಿಯಿಂದ ದೇವಾಲಯಕ್ಕೆ ಕಾಂಪೌಂಡ್ ನಿರ್ಮಿಸಲು 5 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಈ ಕಾಮಗಾರಿ ಇನ್ನಷ್ಟೇ ಆಗಬೇಕಾಗಿದೆ ಎಂದು ದೇವಾಲಯ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಪ್ರಭು, ಕಾರ್ಯದರ್ಶಿ ಚನ್ನಂಕಯ್ಯ ಮಾಹಿತಿ ನೀಡಿದರು.
