ಮಾಜಿಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಶುಭಾಶಯ ಕೋರಿದ ಏಳು ತಿಂಗಳ ಮಗು
ರಾಮನಗರ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜನ್ಮ ದಿನದ ಪ್ರಯುಕ್ತ ಅವರ ಅಭಿಮಾನಿಯೊಬ್ಬರು ತಮ್ಮ ಮಗುವಿನ ಮೂಲಕ ವಿಶಿಷ್ಟ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ.
ತಾಲೂಕಿನ ಕಸಬಾ ಹೋಬಳಿಯ ಕೇತೋಹಳ್ಳಿ ಗ್ರಾಮದ ಯೋಗೇಶ್ ರವರು ಕುಮಾರಸ್ವಾಮಿರವರ ಅಪ್ಪಟ ಅಭಿಮಾನಿ. ಹೀಗಾಗಿ ತಮ್ಮ ಏಳು ತಿಂಗಳ ಮಗುವಿನಿಂದ ಕುಮಾರಸ್ವಾಮಿ ಅವರಿಗೆ ವಿಭಿನ್ನ ರೀತಿಯಲ್ಲಿ ಶುಭಾಶಯ ತಿಳಿಸಿ ಗಮನ ಸೆಳೆದಿದ್ದಾರೆ.
ಕುಮಾರಸ್ವಾಮಿರವರ ಸಾಧನೆಗಳನ್ನು ಬರೆದಿರುವ ಬಟ್ಟೆಯ ಮೇಲೆ ಮಗುವನ್ನು ಮಲಗಿಸಿ ಸುತ್ತಲೂ ಕುಮಾರಸ್ವಾಮಿರವರ ಜನಪರ ಕೆಲಸಗಳ ಪೋಟೋ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಅಲ್ಲದೆ, ಗ್ರಾಮವಾಸ್ತವ್ಯ, ಸುವರ್ಣ ಗ್ರಾಮ, ಲಾಟರಿ ನಿಷೇಧ, ಮಾತೃಶ್ರೀ ಯೋಜನೆ, ಸುವರ್ಣ ಸೌಧ, ಮಹಿಳಾ ಸಬಲೀಕರಣ, ವಿಧವಾ ವೇತನ, ಅಂಬುಲೇ£್ಸï ಸೇವೆ, ಸಾಲಮನ್ನಾ ಸೇರಿದಂತೆ ಅನೇಕ ಜನಪರ ಕಾರ್ಯಗಳ ಉ¯್ಲÉೀಖದ ಪೆÇೀಸ್ಟರ್ ಗಳನ್ನು ಇಟ್ಟು ಮಗುವಿನ ಮೂಲಕ ವಿಶಿಷ್ಟವಾಗಿ ಶುಭ ಕೋರಿದ್ದಾರೆ.
