ಮಾದೇಗೌಡನದೊಡ್ಡಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ 1.5 ರೂ. ಲಕ್ಷ ಸಹಾಯಾಸ್ತ

ಚನ್ನಪಟ್ಟಣ : ಅನ್ನದಾಸೋಹ, ಸಮಾಜಿಕ,ಶೈಕ್ಷಣಿಕ ಹಾಗೂ ಪ್ರತಿಯೊಂದು ಕ್ಷೇತ್ರಕ್ಕೂ ತನ್ನದೇ ಆದ ಕೊಡುಗೆ ನೀಡಿರುವ ಪುಣ್ಯಕ್ಷೇತ್ರ ಧರ್ಮಸ್ಥಳದಿಂದ ಬಿಡುಗಡೆಯಾಗಿರುವ ಆರ್ಥಿಕ ಸಹಕಾರವನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಜೀವನವನ್ನು ಮಾಡಬೇಕೆಂದು ಕ್ಷೇತ್ರದ ಸಂಯೋಜನಾಧಿಕಾರಿ ರೇಷ್ಮಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲ್ಲೂಕಿನ ವಿರುಪಾಕ್ಷಿಪುರ ವಲಯದ ಮಾದೇಗೌಡನ ದೊಡ್ಡಿಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ, ಮಾದೇಗೌಡನದೊಡ್ಡಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಆಶ್ರಯದಲ್ಲಿ, ಶ್ರೀ ಕ್ಷೇತ್ರದ ಪೂಜ್ಯರಾದ ಧರ್ಮಾಧಿಕಾರಿ ವಿರೇಂದ್ರಹೆಗ್ಗಡೆರವರು ಸಹಾಯಸ್ತದ ಒಂದುವರೆ ಲಕ್ಷರೂಗಳ ಅನುದಾನದ ಚಕ್ ವಿತರಣೆ ಮಾಡಿ ಮಾತನಾಡಿದರು.
ಪುಣ್ಯಕ್ಷೇತ್ರದಿಂದ ಬಿಡುಗಡೆಯಾಗಿರುವ ಹಣವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಸಂಘದ ಅಭಿವೃದ್ದಿಯ ಜೊತೆಯಲ್ಲಿ ತಾವು ಕೂಡ ಅಭಿವೃದ್ದಿ ಹೊಂದುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯೊನ್ಮುಖರಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ನವೀನ್‍ಶಟ್ಟಿ, ಸೇವಾಪ್ರತಿನಿಧಿ ವರಲಕ್ಷ್ಮಿ ಹಾಜರಿದ್ದರು.

Leave a Reply

Your email address will not be published. Required fields are marked *