ಎಂ.ಇ.ಎಸ್ ಪುಂಡಾಟಿಕೆ : ಚನ್ನಪಟ್ಟಣದಲ್ಲಿ ಪ್ರತಿಭಟನೆ
ರಾಮನಗರ : ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡಾಟಿಕೆ ನಡೆಸಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಖಂಡನೆ ವ್ಯಕ್ತವಾಗಿದೆ.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರಿಂದ
ಕಾವೇರಿ ಸರ್ಕಲ್ ನಲ್ಲಿ ಎಂಇಎಸ್ ಪುಂಡಾಡಿಕೆ ವಿರುದ್ಧ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿಯುವ ಮೂಲಕ ಪ್ರತಿಭಟನೆ ನಡೆಸಿ, ಇಡೀ ರಾಜ್ಯ ಸರಕಾರವೆ ಬೆಳಗಾವಿಯಲ್ಲಿ ಇದ್ರು ಕೂಡ ಎಂ.ಇ.ಎಸ್ ಪುಂಡಾಟಿಕೆ ಮಾಡಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಕೂಡಲೇ ರಾಜ್ಯ ಸರಕಾರ ಎಂ.ಇ.ಎಸ್ ಪುಂಡರನ್ನ ಬಂದಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.