ಹಿರಿಯ ಗಾಯಕ ಆಂತೋಣಿ ದಾಸ್ (ದಾಸಣ್ಣ) ನಿಧನ

“ಬಹುದೂರ ಹಾರಿತಮ್ಮ ಈ ಗಿಣಿಯು ಆ ದೇವರ ಕೋಟೆ ಸೇರಿತಮ್ಮ ಈ ಗಿಣಿಯು” …. ಈ ಹಾಡನ್ನು ಅದ್ಬುತವಾಗಿ ಹಾಡುತ್ತಿದ್ದ ಮತ್ತು ಇನ್ನೂ ಅನೇಕ ಶೋಕ ಗೀತೆ ಗಳು , ಮನರಂಜನೆ ಹಾಡುಗಳು ಹಾಡುವ ಮೂಲಕ ಎಷ್ಟೋ ಮನಸ್ಸನ್ನು ಗೆದ್ದಿದ್ದ ರಾಮನಗರದ ಟೌನ್ ಮೂಲ ಗಾಯಕರು ಮತ್ತು ಪ್ರಪ್ರಥಮ “ಕಲಾ ವಾಣಿ”ಎಂಬ ವಾದ್ಯಗೋಷ್ಠಿಯನ್ನು ರಾಮನಗರ ದಲ್ಲಿ ಆರಂಬಿಸಿದ ಕೀರ್ತಿ ಹಾಗೂ ಯಾವುದೇ ಮನೆಯಲ್ಲಿ ಸಾವುಗಳು ಸಂಭವಿಸಿದರೆ ಮೊದಲು ಇವರ ಮನೆಯ ಬಾಗಿಲು ತಟ್ಟುತ್ತಾರೆ, ಏಕೆಂದರೆ ಕೆಲವು ಸಂದರ್ಭ ರಾತ್ರಿ ವೇಳೆ ಸಾವಾದರೆ ಪೂರ್ತಿರಾತ್ರಿ ಭಜನೆ ಹಾಡುಗಳು ಹಾಡುವ ಮೂಲಕ ಸತ್ತ ಮನೆಯವರ ದುಃಖದಲ್ಲಿ ನಾವು ಭಾಗಿ ಗಳು ಅನ್ನುವ ಸಂದೇಶ ಕೊಡುತ್ತಿದ್ದ, ಶ್ರೀಯುತ “ಅಂತೋಣಿ ದಾಸ್” (ದಾಸಣ್ಣ) ಅವರು ಇಂದು ನಿಧನ ರಾಗಿದ್ದು, ರಾಮನಗರ ಕಲಾವಿದರಿಗೆ ತುಂಬ ಲಾಗದ ನಷ್ಟ ಮತ್ತು ನೋವು ಉಂಟಾಗಿದೆ. ಇಂದಿನ ಪ್ರಸ್ತುತ ಕಲಾವಿದರಿಗೆ ಅವರ ಕಲೆ ಸ್ಫೂರ್ತಿ ಮಾದರಿಯಾಗಲಿ, ಮತ್ತು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಬಯಸೋಣ.
ವರದಿ : ಹರೀಶ್
ಬಿ.ವಿ.ಎಸ್
ಜಿಲ್ಲಾ ಪೋಷಕರು
ರಾಮನಗರ.
ಮೊ : 8197135282

Leave a Reply

Your email address will not be published. Required fields are marked *