ಬಾಡೂಟ ತಯಾರು ಮಾಡುವಾಗ ಸುವರ್ಣಗೆಡ್ಡೆಯಲ್ಲಿ ಕಂಡುಬಂದ ಆಮೆ !
ಚನ್ನಪಟ್ಟಣ : ತಾಲೂಕಿನ ಅರಳಾಪುರ ಗ್ರಾಮದಲ್ಲಿ ನಿವೃತ್ತ ಸರ್ಕಾರಿ ನೌಕರೆ ವಿ.ಪ್ರೇಮಕುಮಾರಿರವರ 75 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಕ್ಕೆ ಕುಟುಂಬಸ್ಥರಿಗೆ ಬಾಡೂಟ ಏರ್ಪಡಿಸಲಾಗಿತ್ತು. ಬಾಡೂಟ ತಯಾರಿಕೆಗೆ ಎಲ್ಲಾ ರೀತಿಯ ಅಡುಗೆ ಪದಾರ್ಥಗಳನ್ನ ತರಲಾಗಿತ್ತು. ಈ ಸಂದರ್ಭದಲ್ಲಿ ಸುವರ್ಣಗೆಡ್ಡೆಯೊಂದರಲ್ಲಿ ಥೇಟ್ ಆಮೆಯಂತೆಯೇ ಕಂಡುಬಂದದ್ದು ಮಾತ್ರ ವಿಶೇಷ. ಆಮೆಯಂತೆಯೇ ದಪ್ಪ ಹೊಟ್ಟೆ, ಕತ್ತು, ಬಾಲ ಹೀಗೆ ಆಮೆಯನ್ನೇ ಹೋಲುವ ಸುವರ್ಣಗೆಡ್ಡೆಯೊಂದು ಅಡುಗೆ ತಯಾರು ಮಾಡುವಾಗ ಕಂಡುಬಂತು. ಇದನ್ನ ನೋಡಿ ಕುಟುಂಬಸ್ಥರು ಆಶ್ಚರ್ಯಚಕಿತರಾದರು.