ಶ್ರೀ ನಿರ್ವಾಣೇಶ್ವರ ಹಿರಿಯ ವಿದ್ಯಾರ್ಥಿಗಳ ಮತ್ತು ನೌಕರರ ಸೌಹಾರ್ದ ಸಹಕಾರಿ ನಿಯಮಿತದ ಸರ್ವ ಸದಸ್ಯರ ಮಹಾಸಭೆ

ಕನಕಪುರ ಶ್ರೀ ದೇಗುಲ ಮಠದ ಶ್ರೀ ನಿರ್ವಾಣೇಶ್ವರ ಸದರಿ ಸಹಕರಿಯ 15 ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಶ್ರೀ ನಿರ್ವಾಣಸ್ವಾಮಿ ಸಮುದಾಯ ಭವನದಲ್ಲಿ ನೆರವೇರಿತು ಕಾರ್ಯಕ್ರಮದ ಉದ್ಘಾಟಿಸಿ ದಿವ್ಯ ಸಾನಿಧ್ಯವಹಿಸಿವಹಿಸದ ಶ್ರೀ ಶ್ರೀ ಚನ್ನಬಸವಸ್ವಾಮಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಈ ಸರ್ಕಾರಿ ಬ್ಯಾಂಕು ಹಿರಿಯ ವಿದ್ಯಾರ್ಥಿಗಳು ಹಾಗೂ ನೌಕರರು ಬೇರೆ ಎಲ್ಲೆಲ್ಲೋ ಹೋಗಿ ಸಾಲಸೋಲ ಮಾಡಬಾರದು ಹಿರಿಯ ವಿದ್ಯಾರ್ಥಿಗಳು ಹಾಗೂ ನೌಕರರು ಕೈಗೆಟುಕುವ ರೀತಿಯಲ್ಲಿ ಅವರಿಗೆ ಸಾಲ ಸೌಲಭ್ಯಗಳು ಸಿಕ್ಕಿ ಜೀವನವನ್ನು ಅಭಿವೃದ್ಧಿ ಹೊಂದಲಿ ಎಂದು ನಮ್ಮ ಹಿರಿಯ ಪರಮಪೂಜ್ಯ ಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಹಾಗೂ ಲಿಂಗೈಕ್ಯ ಶ್ರೀ ಮುಮ್ಮಡಿ ಮಹಾಲಿಂಗ ಸ್ವಾಮಿಗಳ ಕನಸಿನ ಕೂಸಾಗಿದ್ದು ಅದಕ್ಕಾಗಿ ನಾವು ನಿಮ್ಮ ಜೊತೆ ಇರಬೇಕಾಗಿದೆ ಇದರಿಂದ ಶ್ರೀಮಠಕ್ಕೆ ಆಗಲಿ ಇದರಿಂದ ಯಾವುದೇ ಲಾಭ ಇಲ್ಲ ಆದರೆ ಕರೋನೋ ಸಂದರ್ಭದಲ್ಲೂ ಸಂಘ ಸುಮಾರು ಮೂರು ಲಕ್ಷ ಲಾಭದಲ್ಲಿರುವ ಸಂತೋಷದ ವಿಚಾರವೇ ಆದರೆ ಇಷ್ಟು ಸಾಕಾಗುವುದಿಲ್ಲ ಮುಮ್ಮಡಿ ಮಹಾಲಿಂಗ ಸ್ವಾಮಿಗಳು ಹಾಗೂ ಹಿರಿಯ ಪೂಜ್ಯರ ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಕನಸನ್ನು ಕಂಡಿದ್ದರು ಅವರ ಕನಸನ್ನು ನೆರವೇರಿಸಲು ಸಾಕಷ್ಟು ಪ್ರಮಾಣದಲ್ಲಿ ನಾವೆಲ್ಲ ಕೆಲಸ ಮಾಡಬೇಕಿದೆ ಅದಕ್ಕಾಗಿ ಮತ್ತು ಈ ಸೌಹಾರ್ದ ಸಹಕಾರಿ ಸಂಸ್ಥೆಯ ಉನ್ನತಿಗಾಗಿ ಇದರಿಂದ ಸಾಲ ಸೌಲಭ್ಯಗಳನ್ನು ಪಡೆದವರು ಹಾಗೆ ಹಿಂದಿರುಗಿಸಬೇಕು ಮತ್ತು ಬ್ಯಾಂಕನ್ನು ಅಭಿವೃದ್ಧಿಪಡಿಸಲು ಸದಸ್ಯರೆಲ್ಲರೂ ಸಹಕಾರಿ ನಿಯಮದ ಸಕ್ರಿಯ ಸದಸ್ಯರಾಗಿ ಬೇಕಿದೆ ನಮಗೆ ಎರಡು ಕೈ ಸೇರಿದರೆ ಹೇಗೆ ಚಪ್ಪಾಳೆಯೊ ಹಾಗೆ ಸದಸ್ಯರು ಹಾಗೂ ಆಡಳಿತ ಮಂಡಳಿ ಸೇರಿ ಸಹಕಾರಿ ಬ್ಯಾಂಕ್ ಆಗಿದೆ ಹಾಗೆ ಸಹಕರಿಯ ಏಳಿಗೆಗೆ ನಮ್ಮ ಎಲ್ಲಾ ಸದಸ್ಯರು ಹಾಗೂ ಆಡಳಿತ ಮಂಡಳಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ದುಡಿಯುವಂತೆ ಕಿವಿ ಮಾತು ಹೇಳುವ ಮುಖಾಂತರ ಆಶೀರ್ವಾಚನ ನೀಡಿದರು. ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ರಾಜೇಶ್ ಕೆ ಎಂ ರವರು ಸಭೆಯನ್ನು ಉದ್ದೇಶಿಸಿ ಸೌಹಾರ್ದ ಸಹಕಾರಿಯ ಕಾಯ್ದೆ ತಿದ್ದುಪಡಿ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ವೇದಿಕೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಪರಮೇಶಯ್ಯ ನವರು ಲಾಭದ ವಿವರಗಳನ್ನು ತಿಳಿಸಿ ಎಲ್ಲರೂ ಬ್ಯಾಂಕಿನಲ್ಲಿ ಖಾತೆ ತೆರೆದು ಪಡೆಯಬೇಕು ಹಾಗು ಎಲ್ಲಾ ಸದಸ್ಯರ ಸಹಕಾರವನ್ನು ಕೋರಿದರು. ವೇದಿಕೆಗೆ ಆಗಮಿಸಿದ್ದ ಕಾನೂನು ಸಲಹೆಗಾರರದ ಶ್ರೀ ರಾಮಚಂದ್ರಯ್ಯ ರವರು ಸಹಕಾರಿಯ ಅಭಿವೃದ್ಧಿಗೆ ಸದಸ್ಯರೇ ಮುಖ್ಯ ಕಾರಣ ಎಂದು ಸಭೆಯಲ್ಲಿ ತಿಳಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಶ್ರೀ ನಿವಾಸ್ ಟಿ, ನಿರ್ದೇಶಕರು ಗಳಾದ ಶ್ರೀ ಎಚ್ ಶಿವಮೂರ್ತಿ, ಶ್ರೀ ಮಹಾದೇವಪ್ರಸಾದ್, ಶ್ರೀ ಮಹಾದೇವಪ್ರಸಾದ್ ಎ ಎಸ್, ಶ್ರೀ ಜಗದೀಶ್ ಕುಮಾರ್ ಸಿ, ಶ್ರೀ ನಾಗೇಂದ್ರಸ್ವಾಮಿ ಆರ್ ಎಂ, ಶ್ರೀ ಮಂಜುನಾಥ್ ಬಿ ಜೆ, ಶ್ರೀ ಕಬ್ಬಾಳೆಗೌಡ, ಶ್ರೀ ರಾಜು ಎಂ, ಶ್ರೀ ಮತಿ ನಾಗಮಣಿ, ಶ್ರೀ ಮತಿ ಅಕ್ಕಮಹಾದೇವಮ್ಮ ಹಾಗೂ ಕಾರ್ಯದರ್ಶಿ ಶ್ರೀ ಹರ್ಷ ಕೆ ಎಂ, ಚಂದನ್ ರವರು ಉಪಸ್ಥಿತರಿದ್ದರು ಸಭೆಯಲ್ಲಿ ಸರ್ವ ಸದಸ್ಯರು ಉಪಸ್ಥಿತರಿದ್ದರು.. ಈ ಸಂದರ್ಭದಲ್ಲಿ ದೇಗುಲ ಮಠದ ಹಿರಿಯ ವಿದ್ಯಾರ್ಥಿ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು ಹಾಗೂ ಸಹಕಾರಿ ಸಂಘದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಕೋವಿಡ್ ನಿಯಾಮಾನುಸಾರ ಸಭೆ ನಡೆಸಲಾಯಿತು

Leave a Reply

Your email address will not be published. Required fields are marked *