ಸಮಾಜ ಎಚ್ಐವಿ/ಏಡ್ಸ್ ಪೀಡಿತ ರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು: ನವೀನ್ ಕುಮಾರ್

ಚನ್ನಪಟ್ಟಣ: ಎಚ್ಐವಿ/ಏಡ್ಸ್ ಪೀಡಿತರು ಮನುಷ್ಯನ ಯಾವುದೊಂದು ದೌರ್ಬಲ್ಯದಿಂದ ಸ್ಥಿತಿಗೆ ಒಳಗಾಗುತ್ತಾರೆ. ಎಷ್ಟೋ ಪ್ರಕರಣಗಳು ದೌರ್ಬಲ್ಯಕ್ಕೆ ಒಳಗಾಗಿ ಅರಿವಿಗೆಬಾರದೆ ಈಡಾಗುವುದು ನಮ್ಮಲ್ಲಿ ಕಂಡುಬರುವ ಸಾಮಾನ್ಯ ಸಂಗತಿಗಳು. ಇಂತಹ ವ್ಯಕ್ತಿಗಳಿಗೆ ಸಮಾಜವು ಸಾಂತ್ವನದ ನೆಲೆಯಲ್ಲಿ ಸಹಜ ಮನುಷ್ಯನಂತೆ ಬಾಳ್ವಿಕೆ ನಡೆಸಲು ಅನುವು ಮಾಡಿಕೊಡುವುದು ಆರೋಗ್ಯವಂತ ಸಮಾಜದ ಉತ್ತಮವಾದ ಮನಸ್ಥಿತಿಯೆಂದು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಸಮಾಲೋಚಕರಾದ ಶ್ರೀ ನವೀನ್ ಕುಮಾರ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆಯ ಪ್ರಯುಕ್ತ ಎಚ್ಐವಿ/ಏಡ್ಸ್ ತಡೆಗಟ್ಟುವಲ್ಲಿ ಯುವಜನಾಂಗದ ಪಾತ್ರ ಕುರಿತಂತೆ ಉಪನ್ಯಾಸವನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನವೀನ್ ಕುಮಾರ್ ಪ್ರಸ್ತುತ ಸಂದರ್ಭದಲ್ಲಿ ಯುವಕರೇ ಎಚ್ಐವಿ/ ಏಡ್ಸ್ ರೋಗಕ್ಕೆ ತುತ್ತಾಗುತ್ತಿರುವುದು ವಿಷಾದದ ಸಂಗತಿ. ಯುವಕರಲ್ಲಿ ಈ ಕುರಿತು ಜಾಗೃತಿ ಮೂಡಿದರೆ ಭಾರತದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತೆದೆ. ಭಾರತ ಸರ್ಕಾರ ಏಡ್ಸ್ ಪೀಡಿತ ರೋಗಿಗಳನ್ನು ಸಮಾನವಾಗಿ ಕಾಣಬೇಕು ಎಂಬ ಉದ್ದೇಶದಿಂದ 2017ರ ಕಾಯ್ದೆಯನ್ನು ಜಾರಿಗೆ ತಂದಿರುತ್ತದೆ. ಈ ಆಕ್ಟ್ ನ ಪ್ರಕಾರ ಏಡ್ಸ್ ಪೀಡಿತ ರೋಗಿಗಳನ್ನು ಅವಮಾನಿಸುವ ಅಥವಾ ಅವರನ್ನು ಬಹಿಷ್ಕರಿಸುವ ಅಥವಾ ಸಾರ್ವಜನಿಕವಾಗಿ ಅವರನ್ನು ನಿಂದಿಸುವ ಇತರ ಯಾವುದೇ ತಪ್ಪುಗಳನ್ನು ಸಾರ್ವಜನಿಕರು ಮಾಡಿದ್ದಾರೆ ಅಂತವರಿಗೆ 20000 ದಿಂದ 200000 ಲಕ್ಷದವರೆಗೆ ದಂಡ ವಿಧಿಸುವಂತಹ ಕಾನೂನುಗಳ ಬಗ್ಗೆ ಯುವಕರು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಈ ವಿಚಾರವಾಗಿ ಮುಕ್ತವಾಗಿ ತಿಳಿದುಕೊಳ್ಳಲು 1097 ಮಾಹಿತಿ ಕೇಂದ್ರಕ್ಕೆ ಕರೆ ಮಾಡಿದರೆ ನಿಮಗೆ ಎಂತಹ ಸಂದೇಹ ಬಂದರು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು ಹಾಗೆಯೇ ಹೆಚ್ಐವಿ ಹರಡುವಿಕೆ ತಪ್ಪಿಸುವಂತೆ ಮಾರ್ಗೋಪಾಯಗಳ ಬಗ್ಗೆ ಸ್ವಯಂಸೇವಕರು ಸಮಾಜದಲ್ಲಿ ತಿಳಿಸಿದರೆ, ಅದು ನಿಜವಾದ ಸೇವೆಯಾಗುತ್ತದೆ ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟನೆಯನ್ನು ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಾದವಿ ಕೆ.ವೈ ನೆರವೇರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ವಿ ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಯುವಕರು ಸೇವಾ ಮನೋಭಾವನೆ ರೂಢಿಸಿಕೊಳ್ಳಬೇಕು. ಈ ಸೇವಾಮನೋಭಾವದಿಂದ, ಇಂತಹ ತಿಳುವಳಿಕೆಯ ಮಾಹಿತಿಗಳು ಸಮಾಜಕ್ಕೆ ಪರಿಣಾಮಕಾರಿ. ಇದೇ ನಿಜವಾದ ರಾಷ್ಟ್ರೀಯ ಸೇವಾ ಯೋಜನೆಯ ಗುರುತರವಾದ ಜವಾಬ್ದಾರಿ ಇಂತಹ ಕೆಲಸಗಳನ್ನು ನಮ್ಮ ಕಾಲೇಜಿನ ಸ್ವಯಂಸೇವಕರು ಮಾಡಿದ್ದರೆ ಸಮಾಜಕ್ಕೂ, ಕಾಲೇಜಿಗೂ, ನಿಮ್ಮನ್ನು ಹೆತ್ತ ತಂದೆ-ತಾಯಿಗಳಿಗೂ ಸಾರ್ಥಕತೆ ದೊರೆಯುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ರಾಷ್ಟ್ರೀಯ ಸೇವಾ ಯೋಜನೆಯ ಘಟಕವೊಂದರ ಕಾರ್ಯಕ್ರಮ ಅಧಿಕಾರಿಯಾದ ಡಾ. ಮುರಳಿ ಕೂಡ್ಲೂರು ನಡೆಸಿಕೊಟ್ಟರು. ಸ್ವಯಂಸೇವಕಿಯರಾದ ಹಿಮಶ್ರೀ ಮತ್ತು ಲಾವಣ್ಯ ನಿರೂಪಿಸಿದರು, ಸಮುದಿತ ರಾಣಿ ಎಚ್ ಎಸ್ ಸ್ವಾಗತಿಸಿದರೆ, ಗೌತಮಿ ಆರ್ ವಂದಿಸಿದರು.ಕಾರ್ಯಕ್ರಮದಲ್ಲಿ ಘಟಕ -2 ಕಾರ್ಯಕ್ರಮಾಧಿಕಾರಿ ಶ್ರೀ ರಾಘವೇಂದ್ರ, ನೆಹರು ಆರೋಗ್ಯ ಕೇಂದ್ರದ ರಾಮನಗರ, ಆರೋಗ್ಯ ಸಮಾಲೋಚಕರಾದ ಸವಿತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *