ಜಡೇಶ್ವರ ಶ್ರೀ ಪ್ರಶಸ್ತಿ ಪ್ರದಾನ, ಗುದ್ದುಗೆಯ ದೀಪೋತ್ಸವ ಮತ್ತು ಬಸವರಾಜ ಸ್ವಾಮೀಜಿಗಳ 16ನೇ ವರ್ಷದ ಸಂಸ್ಮರಣೋತ್ಸವ ಸಮಾರಂಭ

ಮಾಗಡಿ : ತಾಲ್ಲೂಕಿನ ಜಡೇದೇವರ ಮಠದಲ್ಲಿ ಜಡೇಶ್ವರ ಶ್ರೀ ಪ್ರಶಸ್ತಿ ಪ್ರದಾನ, ಗುದ್ದುಗೆಯ ದೀಪೋತ್ಸವ ಮತ್ತು ಬಸವರಾಜ ಸ್ವಾಮೀಜಿಗಳ 16ನೇ ವರ್ಷದ ಸಂಸ್ಮರಣೋತ್ಸವ ಸಮಾರಂಭ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ಮಾತನಾಡಿ ಸಮಾಜಕ್ಕೆ ಸೇವೆಸಲ್ಲಿಸುತ್ತಿರುವರು ಮತಷ್ಟು ಸೇವೆ ಮಾಡಲು ಹುರಿದುಂಬಿಸಲು 5 ಮಂದಿಗೆ ಈ ವರ್ಷದಿಂದ ಶ್ರೀಮಠದ ವತಿಯಿಂದ ಜಡೇಶ್ವರ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸನ್ಯಾಸತ್ವ ಪಡೆಯುವ ವೇಳೆ ಶ್ರೀಮಠದ ಜಮೀನು ಮಳೆ ಇಲ್ಲದೆ ಬೆಂಗಾಡಾಗಿತ್ತು ಇಲ್ಲಿ ಏಗೆ ಮಠವನ್ನು ನಡೆಸುತ್ತಾರೆ ಎಂದು ಭಕ್ತರು ಕಣ್ಣಿರು ಹಾಕಿದರು, ಮಠದ ಬಳಿ ಹಗಲು ವೇಳೆಯೆ ನಡೆದುಕೊಂಡು ಬರಲು ಭಯಬೀತಯರಾಗುತ್ತಿದ್ದರು ಏಕದಳ ಬಿಲ್ವಬಂಡೇಮಠ ಸಚ್ಚಿದಾನಂದ ಸ್ವಾಮೀಜಿ ಅವರ ಕೃಪೆ, ವೀರಶೈವ ಮುಖಂಡ ಕೆ.ಪಿ.ಮಹದೇವ ಶಾಸ್ತ್ರಿ ಮತ್ತು ವೀರಶೈವ ಮಂಡಳಿಯವರ ಸಹಕಾರದಿಂದ ಅಭಿವೃದ್ದಿಗೊಂಡು ಜಡೇಶ್ರೀಗಳ ಶಕ್ತಿಯಿಂದ ಮಠ ಬೆಳಕಾಗಿದೆ, ಮನುಷ್ಯನಿಗೆ ನಿಂಧಿಸುವರು ಇರಬೇಕು ಆ ರೀತಿ ನನಗೂ ನಿಂಧಿಸಿದ್ದಾರೆ ಈ ಪ್ರೇರೆಪಣೆಯಿಂದಲ್ಲೇ ಮಠದ ಅಭಿವೃದ್ದಿ ಕಂಡಿದೆ ಎಂದು ಮಾಹಿತಿ ನೀಡಿದರು.
ಪೋಷಕರು ಮಕ್ಕಳಿಗೆ ಸಂಸ್ಕಾರ, ಸಂಸ್ಕøತಿ ನೀಡುವಲ್ಲಿ ಎಡವಿದ್ದು ಅಂಥಹ ಕೆಲಸ ಧರ್ಮದ ಗುರುಗಳಾದ ನಾವು ಮಾಡುತ್ತಿದ್ದೇವೆ, ಭಕ್ತರು ಗುರುಗಳ ಮೇಲೆ ನಿಷ್ಠೆ ಇಡಬೇಕು, ದ್ವೇಷ,ಅಸೂಯೆಗಳು ಸಮಾಜಕ್ಕೆ ಮಾರಕವಾಗಿದ್ದು ಪ್ರತಿಯೊಬ್ಬರು ಪ್ರೀತಿ, ವಿಶ್ವಾಸ, ಐಕ್ಯತೆಯಿಂದ ಬದುಕು ಸಾಧಿಸಿ ಆಗ ಭಗವಂತನು ಮೆಚ್ಚಿ ಶಕ್ತಿ, ಆಯಸ್ಸು, ಸಂಪತ್ತು ನೀಡುತ್ತಾನೆ, ಶ್ರೀಮಠದವತಿಯಿಂದ ಗ್ರಾಮೀಣ ಭಾಗದ ಮಂದಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆ ಪ್ರಾರಂಭಿಸುವುದಾಗಿ ತಿಳಿಸಿದರು.
ವೀರಶೈವ ಮುಖಂಡ ಡಾ. ಕೆ.ಪಿ.ಮಹದೇವಶಾಸ್ತ್ರಿ ಜಡೇಶ್ವರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಾಡ ಪ್ರಭು ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾಗಿರುವ ಶ್ರೀಮಠದಲ್ಲಿ ಜಡೇಶ್ವರರು ತಪ್ಪಸ್ಸುಮಾಡಿದ್ದಾರೆ, ಶ್ರೀಗಳು ಕಾಯಕ ನಿಷ್ಠೆಗೆ ಪ್ರಾಮುಖ್ಯತೆ ನೀಡಿ ಸಾಕಷ್ಟು ಬದಲಾವಣೆ ತಂದಿದ್ದಾರೆ, ಗ್ರಾ.ಪಂ. ಅಧ್ಯಕ್ಷ ಪುರುಷೋತ್ತಮ್ ಮತಷ್ಟು ಅಭಿವೃದ್ದಿಗೆ ಕೈಜೋಡಿಸಲಿ, ನಾನು ಒಬ್ಬ ಸಮಾಜದ ಮುಖಂಡನಾಗಿ ನನ್ನಿಂದಾಗುವ ಅಳಿಲು ಸೇವೆ ಮಾಡಿಕೊಂಡು ಬಂದಿದ್ದೇನೆ ಎಂದರು.
ಪುರಸಭಾ ಸದಸ್ಯೆ ಶಿವರುದ್ರಮ್ಮ ವಿಜಯ್ ಕುಮಾರು ಮಾತನಾಡಿ, ಶ್ರೀಗಳು ಮಠಕ್ಕೆ ಬಂದವೇಳೆ ಮಠ ಮುಂದೆ ಅಭಿವೃದ್ದಿಗೊಳ್ಳಲಿದಿಯೆ ಎಂಬ ಅನುಮಾನ ಕಾಡುತಿತ್ತು ಆವರು ಬಂದ 5 ವರ್ಷದಲ್ಲಿ ಯಾವ ರಾಜಕಾರಣಿಗಳು 5 ವರ್ಷದಲ್ಲಿ ಮಾಡದಂತಹ ಕೆಲಸ ಮಾಡಿ ಸಾಧನೆ ಮಾಡಿ, ಸಾಕಷ್ಟು ಮಂದಿ ಮಕ್ಕಳಿಗೆ ಸಂಸ್ಕøತ ಕಲಿಸಿ ಅವರು ತಮ್ಮ ಜೀವನ ರೂಪಿಸಿದ್ದಾರೆ. ಅವರು ಸನ್ಯಾಸತ್ವ ಪಡೆಯುವ ವೇಳೆ ಹೊನ್ನುಡಿಕೆ ಗ್ರಾಮದ ಮಂದಿ ಕಣ್ಣಿರು ದುಖ: ದಿಂದ ಕಳುಹಿಸಿಕೊಟ್ಟರು ಈಗ ಆ ಗ್ರಾಮಸ್ಥರಿಗೆ ಸಂತೋಷ ತಂದಿದೆ. ಯಾವುದೆ ಜಾತಿ, ಧರ್ಮ ಎನ್ನದೆ ಜ್ಯಾತ್ಯಾತೀತವಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ, ವೀರಶೈವ ಮಂಡಳಿ ಸಹ ಅವರೊಂದಿಗೆ ಸದಾ ಕಾಲ ನಿಂತು ಶ್ರೀಗಳು ಹೇಳುವ ಕಾರ್ಯಕ್ಕೆ ನಿಲ್ಲುವುದಾಗಿ ತಿಳಿಸಿದರು.
ಏಕದಳ ಬಿಲ್ವ ಬಂಡೇ ಮಠದ ಸಚ್ಚಿದಾನಂದ ಸ್ವಾಮೀಜಿ, ರಾಮೇನಹಳ್ಳಿ ಮಠದ ಶಿವಪಂಚಾಕ್ಷರಿ ಸ್ವಾಮೀಜಿ, ವೀರಭದ್ರ ಮಠದ ವೀರಭದ್ರ ಸ್ವಾಮೀಜಿ,ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ತಮಡಿಹಳ್ಳಿ ಮಠದ ಸಿದ್ದಲಿಂಗ ಶಿವಕೇಂದ್ರ ಸ್ವಾಮೀಜಿ, ಪುರಸಭಾಧ್ಯಕ್ಷೆ ವಿಜಯ ರೂಪೇಶ್, ಸದಸ್ಯರಾದ ಎಂ.ಆರ್.ರೇಖಾ ನವೀನ್, ಅನಿಲ್ ಕುಮಾರು, ನೇತೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಪುರುಷೋತ್ತಮ್, ವೀರಶೈವ ಮಂಡಳಿ ಅಧ್ಯಕ್ಷ ರುದ್ರಮೂರ್ತಿ, ರೋಟರಿ ಮಾಗಡಿ ಅಧ್ಯಕ್ಷ ವಿಷ್ಣು ಮಹಂತೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ರವಿಶಂಕರ್, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರೇಣುಕಾರಾಧ್ಯ, ರಾಜಣ್ಣ, ಅನಿಲ್, ಹೇಮಂತ್ ಕುಮಾರು, ಶಿವಪ್ಪ, ದಯಾನಂದ್, ಕೊರಮಂಗಲ ಗಂಗಾಧರ್, ಲಂಡನ್ ಬಸವ ಇಂಟರ್ ನ್ಯಾಷನಲ್ ಫೌಂಡೇಷನ್ ಅಧ್ಯಕ್ಷ ಎಸ್.ಮಹದೇವಯ್ಯ, ಡಾ.ಗುರುಪ್ರಸಾದ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *