ದೊಡ್ಡ ಸೋಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2020-21ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ

ಮಾಗಡಿ : ತಾಲ್ಲೂಕಿನ ದೊಡ್ಡ ಸೋಮನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿ ದೊಡ್ಡ ಸೋಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2020-21ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ನಡೆಯಿತು.
ದೊಡ್ಡ ಸೋಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಂಜುಂಡಯ್ಯ ಮಾತನಾಡಿ ಸಹಕಾರಿ ಸಂಘದಲ್ಲಿ ಯಾರು ಸಾಲ ಪಡೆದು ಸಂಪೂರ್ಣ ಪಾವತಿ ಮಾಡಿರುತ್ತಾರೋ ಅಂತಹವರಿಗೆ ಷೇರಿನ ಜೊತೆ ಸಂಘದ ಲಾಭಾಂಶವನ್ನು ಹಂಚುವ ಕೆಲಸ ಮಾಡಲಾಗುವುದು. ಷೇರುದಾರರ ಹಣವು ಸಂಘದ ಲಾಭಾಂಶದ ಮೇಲೆ ಹಂಚಿಕೆ ಮಾಡುತ್ತೇವೆ ಎಂದು ತಿಳಿಸಿದರು.
ಈ ಲಾಭಾಂಶವನ್ನು ಯಾರು ಸಂಪೂರ್ಣ ಸಾಲ ಮರುಪಾವತಿ ಮಾಡಿರುತ್ತಾರೋ ಅವರಿಗೆ ಲಾಭಾಂಶ ಕೊಡುತ್ತೇವೆ, ಸಾಲ ಹಾಗೆ ಉಳಿಸಿಕೊಂಡ ರೈತರಿಗೆ ಲಾಭಾಂಶ ಬೆಳೆಯುತ್ತದೆ, ರೈತರ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ತಿಳಿಯಲು ಚೆಕ್ ಬುಕ್‍ಗಳನ್ನು ವಿತರಿಸುವ ಕೆಲಸ ಮಾಡಲಾಗುತ್ತದೆ, ಬ್ಯಾಂಕ್ ಖಾತೆ ಮಾಡುವಾಗ 200 ರೂ. ಠೇವಣಿ ಹಣದಲ್ಲಿ ಖಾತೆ ಆರಂಭ ಮಾಡಿದ್ದು ಅಂತಹವರಿಗೆ 1 ಸಾವಿರ ಠೇವಣಿ ಹಣ ಇಟ್ಟಾಗ ಮಾತ್ರ ಪಾಸ್ ಬುಕ್ ದೊರೆಯುತ್ತದೆ ಎಂದರು.
ಸಂಘವು ಉತ್ತಮ ರೀತಿ ನಡೆಯುತ್ತಿದ್ದು ನಿಮ್ಮ ಸಲಹ ಸೂಚನೆಗಳನ್ನು ಸಂಘಕ್ಕೆ ನೀಡಬಹುದು ಎಂದು ಅವರು ಹೇಳಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಶ್ರೀನಿವಾಸಮೂರ್ತಿ ಮಾತನಾಡಿ, ಅಧ್ಯಕ್ಷರು ಮತ್ತು ನಿರ್ದೇಶಕರುಗಳ ಸಹಕಾರದಿಂದ 2020-21ನೇ ಸಾಲಿನಲ್ಲಿ ಸಂಘವು 5 ಲಕ್ಷದ 45 ಸಾವಿರ ಲಾಭಗಳಿಸಿದೆ, 58 ಟನ್ ರಸಗೊಬ್ಬರವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗಿದೆ, ಇಲ್ಲಿಯವರೆಗೂ ಕೆಸಿಸಿ ಬೆಳೆ ಸಾಲ 4 ಕೋಟಿ 40 ಲಕ್ಷ ನೀಡಿದ್ದು ಸ್ತ್ರೀ ಶಕ್ತಿ 15 ಗುಂಪುಗಳಿಗೆ 26 ಲಕ್ಷದ 55 ಸಾವಿರ ಸಾಲ ನೀಡಲಾಗಿದ್ದು ಆಭರಣ ಸಾಲ 13 ಲಕ್ಷ, ಕೃಷಿಯೇತರ 5 ಲಕ್ಷದ 79 ಸಾವಿರ ಸಾಲವನ್ನು ನೀಡಲಾಗಿದ್ದು ಷೇರುದಾರರಿಗೆ ಲಾಭಾಂಶವನ್ನು ಸಮವಾಗಿ ಹಂಚುವ ಕೆಲಸ ಮಾಡುತ್ತೇವೆ, ಸಂಘವು ಉತ್ತಮವಾಗಿ ನಡೆಯುತ್ತಿದ್ದು ಕೆಲವು ಸಲಹೆಗಳನ್ನು ನೀಡಿದ್ದು ಇದನ್ನು ಅನುಷ್ಠಾನವನ್ನು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜೆಡಿಎಸ್ ತಾಲೂಕು ಘಟಲದ ಅಧ್ಯಕ್ಷ ಪೊಲೀಸ್ ರಾಮಣ್ಣ ಮಾತನಾಡಿ, ಸಂಘದಲ್ಲಿ ರಾಜಕೀಯ ಬೆರೆಸಬಾರದು ವಯಕ್ತಿಕ ದ್ವೇಷವನ್ನು ಬಿಟ್ಟು ಸಂಘದ ಅಭಿವೃದ್ದಿಗೆ ಎಲ್ಲಾರೂ ಸಹಕಾರ ನೀಡಬೇಕು, 50 ಸಾವಿರದಿಂದ 2 ಲಕ್ಷದವರೆಗೂ ಬೆಳೆ ಸಾಲ ಕೊಡುವ ರೀತಿ ಸಂಘ ಬೆಳೆಯಬೇಕು, ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಬಗೆಹರಿಸಿಕೊಳ್ಳುವ ಕೆಲಸ ಮಾಡಲಾಗುತ್ತದೆ, ನಿರ್ದೇಶಕರುಗಳು ಸಂಘದ ಒಳಿತಿಗಾಗಿ ಉತ್ತಮ ಯೋಜನೆಗಳನ್ನು ಜಾರಿಗೆ ತರಬೇಕೆಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಗಂಗಹುಚ್ಚಮ್ಮ, ನಿರ್ದೇಶಕರಾದ ಜಯಮ್ಮ, ಕಾಂತಮ್ಮ, ಧರ್ಮಪಾಲ, ಗಿರೀಶ್, ಚಲುವಯ್ಯ, ಬಸವರಾಜು, ಮಾರೇಗೌಡ, ಧನಂಜಯ್ಯ, ಕಾಳಾರಿ ಕಾವಲ್ ಗ್ರಾ.ಪಂ.ಅಧ್ಯಕ್ಷ ಸುರೇಶ್, ಸದಸ್ಯ ಹನುಮಂತಯ್ಯ, ಚಿಕ್ಕಹಳ್ಳಿ ಗ್ರಾ.ಪಂ.ಅಧ್ಯಕ್ಷ ಗೋವಿಂದಪ್ಪ, ಮಾಜಿ ನಿರ್ದೇಶಕ ಕರೆತಿಮ್ಮಯ್ಯ, ಮುಖಂಡರಾದ ಗಂಗಣ್ಣ, ನಂಜುಂಡಯ್ಯ, ಶಿಕ್ಷಕ ಕೃಷ್ಣಪ್ಪ, ಗಂಗಾಧರ್, ಹನುಮಂತಯ್ಯ, ಗುಮಾಸ್ತ ರಮೇಶ್, ಸಹಾಯಕ ಹೊನ್ನೆಗೌಡ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *