ಪುನೀತ್ ರಾಜ್ ಕುಮಾರ್ ರವರಿಗೆ ಶಾಂತಿ ಸಿಗಲೆಂದು 18 ಕಿ.ಮೀ.ಪಾದಯಾತ್ರೆ

ಮಾಗಡಿ : ತಾಲೂಕಿನ ಚಕ್ರಬಾವಿ ಗ್ರಾಮದ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ರವರಿಗೆ ಚಿರಶಾಂತಿ ಸಿಗಲಿ ಹಾಗೂ ರಾಜ್ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲೆಂದು ಮಲೆಮಹದೇಶ್ವರ ಸ್ವಾಮಿ ಸನ್ನಿಧಿಯಲ್ಲಿರುವ ನಾಗಮಲೆ ಮಾದಪ್ಪ ಸ್ವಾಮಿ 18 ಕಿ.ಮೀ. ಬೆಟ್ಟವನ್ನು ಪಾದಯಾತ್ರೆ ಮೂಲಕ ಹತ್ತಿದ್ದಾರೆ.
ಪುನೀತ್‍ರಾಜ್ ಕುಮಾರ್ ಅಭಿಮಾನಿ ಸೀಮೆಣ್ಣೆ ರಾಜಣ್ಣ ಹಾಗೂ ಅವರ ಯುವಕರುಗಳು ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಿಂದ ನಾಗಮಲೆ ಮಾದಪ್ಪ ದೇವಸ್ಥಾನಕ್ಕೆ 18 ಕಿ.ಮೀ.ಪಾದಯಾತ್ರೆಯನ್ನು ಮಾಡಿದ್ದು ಪುನೀತ್ ರಾಜ್‍ಕುಮಾರ್ ರವರ ಭಾವಚಿತ್ರ ಹಾಕಿಕೊಂಡು ಪುನೀತ್ ರಾಜ್ ಕುಮಾರ್ ರವರಿಗೆ ಶಾಂತಿ ಸಿಗಲಿ ಅವರು ಮಾಡಿರುವ ಅಪಾರ ಜನಪರ ಸೇವೆಗಳು ಎಲ್ಲಾರಿಗೂ ಮಾದರಿಯಾಗಿದ್ದು ಚಲನಚಿತ್ರದಲ್ಲಿ ನಾಯಕರಾಗಿ ವಿಜೃಂಭಿಸಿದರು, ಅದೇ ರೀತಿ ನಿಜ ಜೀವನದಲ್ಲು ನಾಯಕನಟನಾಗಿಯೇ ಸಾಕಷ್ಟು ಜನಪರ ಸೇವೆ ಮಾಡಿದ್ದು ಅವರನ್ನು ಕಳೆದುಕೊಂಡ ಕರುನಾಡು ಅನಾಥವಾಗಿದ್ದು ನಾಗಮಲೆ ಮಾದಪ್ಪನಿಗೆ ವಿಶೇಷ ಅಭಿಷೇಕ, ಪೂಜೆಯನ್ನು ಮಾಡಿಸಿದ್ದು ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಕುಟುಂಬಕ್ಕೆ ದುಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಅವರ ಮೂಲಕ ಪುನೀತ್ ರಾಜ್ ಕುಮಾರ್ ರವರ ಕನಸುಗಳನ್ನು ಇಡೇರಿಸುವಂತಾಗಲಿ ಎಂದು ಪಾದಯಾತ್ರೆ ಮಾಡಿರುವುದಾಗಿ ತಿಳಿಸಿದರು.
ಪುನೀತ್ ಅಭಿಮಾನಿ ಮಲ್ಲನಪಾಳ್ಯ ನಾಗೇಶ್ ಮಾತನಾಡಿ, ಪುನೀತ್ ರಾಜ್‍ಕುಮಾರ್ ರವರ ಅಪ್ಪಟ ಅಭಿಮಾನಿಯಾಗಿದ್ದು ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದೇವೆ ಚಿಕ್ಕ ವಯಸ್ಸಿನಲ್ಲೆ ಮೃತಪಟ್ಟಿರುವುದು ನಮ್ಮೆಲ್ಲಾರಿಗೂ ನೋವು ಉಂಟುಮಾಡುವಂತಾಗಿದೆ, ಮಾದಪ್ಪ ಸ್ವಾಮಿ ಪುನೀತ್ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹರಕೆ ಕಟ್ಟಿಕೊಂಡು ಪಾದಯಾತ್ರೆ ಮಾಡಿರುವುದಾಗಿ ತಿಳಿಸಿದರು.
ಪಾದಯಾತ್ರೆ ವೇಳೆ ಪುನೀತ್ ಅಭಿಮಾನಿಗಳಾದ ಲೋಕೇಶ್, ಸತೀಶ್ (ಗುಂಡ), ಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *