ಯರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2020-2021ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ರಾಮನಗರ : ಕೂಟಗಲ್ ಹೋಬಳಿಯ ಯರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2020-2021ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.
ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಮಾತನಾಡಿ ಸಹಕಾರಿ ಸಂಘಗಳ ವಾರ್ಷಿಕ ಸಭೆಯಲ್ಲಿ ಸದಸ್ಯರು ಭಾಗವಹಿಸುವುದು ಎಷ್ಟು ಮುಖ್ಯವೋ, ಅಗೆಯೆ ಸಂಘದ ಪ್ರಗತಿಯ ಬಗ್ಗೆ ಚರ್ಚೆ ನಡೆಸುವುದು ಅಷ್ಟೆ ಮುಖ್ಯ. ಇತ್ತೀಚೆಗೆ ಮತದಾನಕ್ಕಾಗಿ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿ ಸದಸ್ಯರು ಸಹಿ ಮಾಡುವುದಕ್ಕೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಆ ಮನಸ್ಥಿತಿಯನ್ನು ಬದಲಾಯಿಸಿಕೊಂಡು ಸಂಘದ ಆಸ್ತಿ, ಬಂಡವಾಳ ಮತ್ತು ಖರ್ಚು ವೆಚ್ಚಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ಆಗ ಸಂಘದ ಹಣ ಅನವಶ್ಯಕವಾಗಿ ಖರ್ಚಾಗುವುದಕ್ಕೆ ಕಡಿವಾಣ ಹಾಕಬಹುದು ಎಂದು ತಿಳಿಸಿದರು.
ಬೆಳಗಾಂ ಮತ್ತು ಬಿಜಾಪುರ ಜಿಲ್ಲೆಗಳÀ ಸಾಲ ವಿತರಣಾ ಮಾದರಿಯಲ್ಲಿ ಪಹಣಿದಾರ ರೈತರಿಗೆ ವಿಸ್ತೀರ್ಣದ ಆಧಾರದ ಮೇಲೆ ತಾಲೂಕಿನ 20 ಸಂಘಗಳಿಗೆ 32 ಕೋಟಿ ರೂ. ಹೆಚ್ಚುವರಿ ಕೆಸಿಸಿ ಸಾಲ ವಿತರಣೆ ಮಾಡಲಾಗಿದೆ. ಸುಗ್ಗನಹಳ್ಳಿ ಮತ್ತು ಕ್ಯಾಸಾಪುರ ಪಿಎಸಿಎಂಎಸ್‍ಗಳ ನಂತರ ರೈತರಿಗೆ ಅತೀ ಹೆಚ್ಚು ಸಾಲ ವಿತರಣೆ ಮಾಡಿರುವ ಸಂಘ ಯರೇಹಳ್ಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಆ ಮೂಲಕ 2020-21ನೇ ಸಾಲಿಗೆ ಸಂಘ ಹಿಂದಿನ ಸಾಲಿನ ನಷ್ಟ ಜಾಥಾ ಕಳೆದು 1.31.472 ರೂ. ಲಾಭ ಗಳಿಸಿದೆ ಎಂದು ತಿಳಿಸಿದರು.
ಸ್ತ್ರೀಶಕ್ತಿ ಸ್ವಸಹಾಯ ಸಂಘಕ್ಕೂ ಬ್ಯಾಂಕ್ ನಿಂದ ಸಾಲ ವಿತರಣೆ ಮಾಡುತ್ತಿದ್ದೇವೆ. ಸಿಇಓಗಳು ಈ ಬಗ್ಗೆ ಹೆಚ್ಚಿನ ಆಶಕ್ತಿ ವಹಿಸಿ ಎಂದು ಕರೆ ನೀಡಿದ ಅವರು ಈ ಸಂಘದ ಕೌಂಪೌಂಡ್ ನಿರ್ಮಾಣಕ್ಕೆ ರಾಜ್ಯ ಸಭಾ ಸದಸ್ಯ ಹರಿಪ್ರಸಾದ್ ಅವರ ನೆರವಿನಲ್ಲಿ 5ಲಕ್ಷ ಅನುದಾನ ಸಿಕ್ಕಿದೆ. ರಾಷ್ಟ್ರೀಕೃತ ಬ್ಯಾಂಕ್ ತೆರೆಯುವುದು, 1 ಎಕರೆ ಜಾಗ ಗುರ್ತಿಸಿ ಬಡ ಮಧ್ಯಮ ವರ್ಗದವರಿಗೆ ಸಂಘದ ವತಿಯಿಂದ ಸುಸಜ್ಜಿತ ಸಮುದಾಯ ಭವನ ನಿರ್ಮಾಣ ಮಾಡುವ ಉದ್ದೇಶ ಸಂಘಕ್ಕಿದೆ. ಸಂಘದ ಸದಸ್ಯರು ಮೃತ ಪಟ್ಟರೆ ಅವರ ಕುಟುಂಭಕ್ಕೆ ನೆರವಾಗುವ ಯೋಜನೆಯನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರು, ನಿರ್ದೇಶಕರು ಚರ್ಚೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದೇವೆ ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಕಿರಣ್‍ಕುಮಾರ್ ಮಾತನಾಡಿ ಸಾಲ ಮನ್ನಾ ಅರ್ಹತೆಗೆ ವಿಧಿಸಿದ ನಿಯಮಗಳಿಂದ ಎಲ್ಲ ಸೊಸೈಟಿಗಳಲ್ಲಿ 80 ಲಕ್ಷ ಸಾಲಮನ್ನಾ ಆಗದ ರೈತರಿದ್ದಾರೆ. ಇನ್ನೆರಡು ತಿಂಗಳಲ್ಲಿ ಸರ್ಕಾರ ಹಣ ನೀಡಲಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು. ಇದೇ ವೇಳೆ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹದನ ಮತ್ತು ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.
ಸಂಘದ ಅಧ್ಯಕ್ಷ ಅಶೋಕ ಎಂ.ಸಿ.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ಬಿ.ಪಿ.ನವೀನ್‍ಕುಮಾರ್, ಸಮಾಜ ಸೇವಕ ಕಾಸೀಪ್, ಉಪಾಧ್ಯಕ್ಷ ನಿಂಗಾಚಾರಿ, ನಿರ್ದೇಶಕರಾದ ಮರಿಸ್ವಾಮಯ್ಯ, ಚೆಲುವಯ್ಯ, ವೆಂಕಟಶೆಟ್ಟಿ, ನಿಂಗಮ್ಮ, ವರಲಕ್ಷ್ಮಮ್ಮ, ಪುಟ್ಟೀರಯ್ಯ, ರವೀಂದ್ರ ಜಿ. ಮುಖ್ಯ ಕಾರ್ಯನಿರ್ವಾ ಹಣಾಧಿಕಾರಿ ಚಿಕ್ಕವೀರಭದ್ರೇಗೌಡ (ದಿನೇಶ್), ಮಾಜಿ ಅಧ್ಯಕ್ಷ ರಾಮಕೃಷ್ಣಯ್ಯ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *