ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ವತಿಯಿಂದ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು
ರಾಮನಗರ : ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠ ವತಿಯಿಂದ ದೀನ ದಲಿತರನ್ನು, ಆರ್ಥಿಕವಾಗಿ ಹಿಂದುಳಿದವರನ್ನು ಆಮಿಷ, ಷಡ್ಯಂತ್ರದ ಮೂಲಕ ಬಲವಂತವಾಗಿ ಮತಾಂತರಿಸುವವರ ವಿರುದ್ಧ ಕಾನೂನು ರೂಪಿಸಲು ದಿಟ್ಟ ಹೆಜ್ಜೆಯಿಟ್ಟ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳುನ್ನು ಸಲ್ಲಿಸಲಾಯಿತು.
ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠ ಸಂಚಾಲಕರಾದ ಯೋಗೇಂದ್ರ ಹೊಡಾಘಟ್ಟ, ರಾಜ್ಯ ಸಮಿತಿ ಸದಸ್ಯರಾದ ವಸಂತ ಕುಮಾರ್,ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ, ಜಿಲ್ಲಾ ಕಾರ್ಯದರ್ಶಿಯಾದ ದರ್ಶನ್ ದೇವೇಗೌಡ, ಶಿವ ಪ್ರಸಾದ್ ಜಿಲ್ಲಾ ಕಾನೂನು ಬಿಜೆಪಿ ಸಂಚಾಲಕ, ವಿನೋದ್ ಭಗತ್ ಸಹ ಸಂಚಾಲಕ, ಜಿಲ್ಲಾ ಬಿಜೆಪಿ ಕಾನೂನು ಸಮಿತಿಯ
ಸದಸ್ಯರಾದ ಶಿವ ಸ್ವಾಮೀ, ಸಂಗಮೇಶ್ ಮಾಗಡಿ, ಶಶಿ ಕುಮಾರ್ ಚನ್ನಪಟ್ಟಣ, ಕೆಂಪೇಗೌಡ ಕನಕಪುರ,ರವಿಕುಮಾರ್,ಸಂತೋಷ್ ಕುಮಾರ್ ಪಾಲ್ಗೊಂಡರು.
ಆಮಿಷ, ಒತ್ತಾಯದ ಮೂಲಕ ಮತಾಂತರ ಮಾಡುವುದನ್ನು ನಿಗ್ರಹಿಸಲು ರಾಜ್ಯ ಬಿಜೆಪಿ ಸರ್ಕಾರ ಸದನದಲ್ಲಿ “ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ – 2021” ಮಸೂದೆ ಮಂಡನೆ ಮಾಡಿದೆ.