ದೇಶ ದ್ರೋಹಿ ಕೆಲಸ ಮಾಡುವ ಸಂಘಟನೆಗಳನ್ನು ನಿಷೇಧಿಸಲು ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಹಾಗೂ ಜಿಲ್ಲಾ ಕ್ಷತ್ರೀಯ ಮರಾಠ ಸೇವಾ ಟ್ರಸ್ಟ್ ಮನವಿ

ರಾಮನಗರ : ರಾಜ್ಯದಲ್ಲಿರುವ ಎಂ.ಇ.ಎಸ್ ಮತ್ತು ಶಿವಸೇನೆಯಂತಹ ಸಂಘಟನೆ ಮತ್ತು ದೇಶದ್ರೋಹಿ ಕೆಲಸ ಮಾಡುವ ವ್ಯಕ್ತಿಗಳನ್ನು ಶಿಕ್ಷಿಸಬೇಕು. ಜೊತೆಗೆ ಇಂತಹ ಸಂಘಟನೆಗಳನ್ನು ರಾಜ್ಯದಿಂದ ನಿಷೇಧಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಹಾಗೂ ಜಿಲ್ಲಾ ಕ್ಷತ್ರೀಯ ಮರಾಠ ಸೇವಾ ಟ್ರಸ್ಟಿನ ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದರು.
ಭಾರತ ದೇಶದ ಹಿಂದುತ್ವಕ್ಕಾಗಿ ಹೋರಾಡಿದ ವೀರ ಪರಮ ದೇಶ ಭಕ್ತ, ವಿಶ್ವದ ಆದರ್ಶ ವ್ಯಕ್ತಿ ಎಂದು ಹೆಸರು ಪಡೆದು ಹಿಂದವಿ ಸ್ವರಾಜ್ಯ ಸಂಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳೆದಿದ್ದು ಮತ್ತು ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ್ದು, ಕರ್ನಾಟಕದ ಬಾವುಟವನ್ನು ಸುಡುವುದು, ರಾಜ್ಯದಲ್ಲಿ ಅಶಾಂತಿಯನ್ನು, ಅರಾಜಕತೆಯನ್ನು ಉಂಟು ಮಾಡುವುದು, ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ಅವಮಾನಿಸಿ, ರಾಜಕೀಯವಾಗಿ ಉಪಯೋಗಿಸಿಕೊಳ್ಳುವುದನ್ನು ನಾವು ಒಟ್ಟಾರೆಯಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.
ಕನ್ನಡ ನಾಡಿನಲ್ಲಿ ಕನ್ನಡಿಗರು-ಮರಾಠರು ಅನ್ಯೋನ್ಯವಾಗಿದ್ದಾರೆ. ಇದನ್ನು ಇತರೇ ಉದ್ದೇಶಕ್ಕಾಗಿ ಬಳಸಿ ರಾಜ್ಯದಲ್ಲಿ ಅಶಾಂತಿಯನ್ನು ಉಂಟು ಮಾಡುವ ಯಾವುದೇ ವ್ಯಕ್ತಿ ಮತ್ತು ಸಂಘ, ಸಂಘಟನೆಗಳನ್ನು ದೇಶದ್ರೋಹಿ ಕೆಲಸ ಮಾಡುವ ಕಿಡಿಗೇಡಿಗಳನ್ನು ಶಿಕ್ಷಿಸಬೇಕು. ಎಂ.ಇ.ಎಸ್ ಮತ್ತು ಶಿವಸೇನೆಯಂತಹ ಸಂಘಟನೆಗಳನ್ನು ನಿಷೇಧಿಸಬೇಕು. ಮುಂದೆ ಇಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು ಎಂದು ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಹಾಗೂ ಜಿಲ್ಲಾ ಕ್ಷತ್ರೀಯ ಮರಾಠ ಸೇವಾ ಟ್ರಸ್ಟಿನ ಪದಾಧಿಕಾರಿಗಳು ಮನವಿ ಮಾಡಿದರು.
ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತಿನ ಅಧ್ಯಕ್ಷ ಸೋಮಶೇಖರ ರಾವ್ ಕಾಂಬ್ಳೆ, ಜಿಲ್ಲಾ ಕ್ಷತ್ರೀಯ ಮರಾಠ ಸೇವಾ ಟ್ರಸ್ಟಿನ ಅಧ್ಯಕ್ಷ ಎಲ್. ನಾರಾಯಣ ರಾವ್ ಚೌವ್ಜಣ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ನಲಿಗೆ, ಖಜಾಂಚಿ ಶಂಕರರವಾ ಚೌವ್ಹಾಣ್, ಟ್ರಸ್ಟಿಗಳಾದ ಸಿದ್ದೋಜಿರಾವ್ ಮಾಂಗ್ಲೆ, ಚಂದನ್ ಮೋರೆ, ಶಿವಾಜಿರಾವ್, ಲೋಕೇಶ್ ರಾವ್ ಮಾಂಗ್ಲೆ ಇದ್ದರು.

Leave a Reply

Your email address will not be published. Required fields are marked *