ಲಾಳಗಟ್ಟ : ಜಲ ಜೀವನ್ ಮಿಷನ್ ಕಳಪೆ ಕಾಮಗಾರಿ : ಗ್ರಾಮಸ್ಥರ ಆರೋಪ

ಚನ್ನಪಟ್ಟಣ : ತಾಲ್ಲೂಕಿನ ಲಾಳಗಟ್ಟ ಗ್ರಾಮದಲ್ಲಿ ಭಾರತ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಜಲ್ ಜೀವನ್ ಮಿಷನ್ ಕಾಮಗಾರಿ ಸಂಪೂರ್ಣವಾಗಿ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಜಲ್ ಜೀವನ್ ಮಿಷನ್ ಯೋಜನೆಯನ್ನು ಲಾಳಗಟ್ಟ ಗ್ರಾಮದಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ವಿಫಲರಾಗಿದ್ದಾರೆ.
ಜಲ್ ಜೀವನ್ ಮಿಷನ್ ಯೋಜನೆಯ ಪೈಪ್ ಲೈನ್ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು ಹೊಸ ಪೈಪ್ ಲೈನ್ ಅಳವಡಿಸದೆ ಹಳೆ ಪೈಪ್ಲೈನ್ ಹೊಸ ಕೊಳವೆಗಳನ್ನು ಜೋಡಿಸಿ ಮನೆಗಳಿಗೆ ನೀರಿನ ಸಂಪರ್ಕ ನೀಡಿದ್ದು ಈ ಗ್ರಾಮದ ಹಲವಾರು ಮನೆಗಳಿಗೆ ನೀರಿನ ಸಮಸ್ಯೆ ಉಂಟಾಗಿದ್ದು ಒಂದು ಬಿಂದಿಗೆ ನೀರು ತುಂಬಲು ಅರ್ಧಗಂಟೆಗೂ ಹೆಚ್ಚು ಸಮಯ ಬೇಕು ಎಂದು ಇಲ್ಲಿನ ಮಹಿಳೆಯರು ಆರೋಪಿಸಿದ್ದಾರೆ.
ನಾಳೆ ಘಟ್ಟದ ಹೊಸ ಬಡಾವಣೆಯ ಕೆಲವು ಮನೆಗಳಿಗೆ ನೀರು ಸರಬರಾಜು ಸಂಪೂರ್ಣವಾಗಿ ನಿಂತಿದ್ದು ಈ ಭಾಗದ ಜನರು ವಾಟರ್ ಟ್ಯಾಂಕ್ ಗಳ ನೀರನ್ನು ಬಳಸುವಂತ ಆಗಿದೆ.
ಪೈಪ್ ಲೈನ್ ಕಾಮಗಾರಿ ಸರಿಯಾದ ರೀತಿ ಮಾಡಿದರೆ ನೀರಿನ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎಲ್ಲ ಅವಾಂತರಗಳಿಗೆ ಗುತ್ತಿಗೆದಾರ ಹಾಗೂ ಜಲಜೀವನ್ ಮಿಷನ್ ಯೋಜನೆಯ ಅಧಿಕಾರಿಗಳೇ ನೇರ ಕಾರಣರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

Leave a Reply

Your email address will not be published. Required fields are marked *