ಬೇಸಾಯ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಆರ್ಥಿಕ ಪ್ರಗತಿ ಸಾಧ್ಯ : ಮರಸಪ್ಪ ರವಿ

ಕನಕಪುರ : ಬೇಸಾಯ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಕೃಷಿ ಕೈಗೊಂಡಲ್ಲಿ ರೈತರ ಆರ್ಥಿಕ ಪ್ರಗತಿ ಸಾಧ್ಯ ಎಂದು ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷ ಮರಸಪ್ಪ ರವಿ ಹೇಳಿದರು.
ಪಟ್ಟಣದ ವಿವಿಧ ಬಡಾವಣೆಯಲ್ಲಿ ವಿಶ್ವ ರೈತ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಹನಿ ನೀರಾವರಿ, ಮಳೆಕೊಯ್ಲು, ಕೃಷಿ ಹೊಂಡ ಪದ್ದತಿ ಅಳವಡಿಸಿಕೊಂಡು ಕೃಷಿ ಕೈಗೊಳ್ಳಬೇಕು ಎಂದರು.
ರೈತರು ಎತ್ತುಗಳ ಸಹಾಯದಿಂದ ಗಳೆ, ಕುಂಟಿ, ಹಂತಿ ಮತ್ತು ಮಟ್ಟಿ ಮುಂತಾದ ಕೃಷಿ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಟ್ರ್ಯಾಕ್ಟರ್ ಮತ್ತು ನಾನಾ ಯಂತ್ರಗಳನ್ನು ಬಳಕೆ ಮಾಡುತ್ತಿರುವುದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ತೆಗೆಯಲು ಬಹಳಷ್ಟು ಸೌಲಭ್ಯಗಳಿವೆ. ರೆತರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಸರಕಾರ ಕಷಿ ಭಾಗ್ಯ ಯೋಜನೆಯಡಿ ಶೇ. 80ರಿಂ90 ರಷ್ಟು ವಿನಾಯತಿ ದರದಲ್ಲಿ ಹನಿ ನೀರಾವರಿ, ಕಷಿ ಹೊಂಡ, ಮಳೆಕೊಯ್ಲು ಮುಂತಾದ ಸೌಲಭ್ಯಗಳನ್ನು ರೆತರಿಗೆ ಒದಗಿಸುತ್ತಿದೆ. ರೆತರು ಸರಕಾರದ ಯೋಜನೆಗಳ ಲಾಭ ಪಡೆದುಕೊಂಡು ಒಳ್ಳೆಯ ಬೆಳೆ ಬೆಳೆದು ಆರ್ಥಿಕ ಮಟ್ಟ ಸುಧಾರಣೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಕೆ.ಎನ್. ವೆಂಕಟೇಶ್ ಮಾತನಾಡಿ, ಬ್ರಹ್ಮಾಂಡದಲ್ಲಿ ಮೂರು ರತ್ನಗಳಿವೆ. ಜಲ,ಅನ್ನ, ಶುಭನುಡಿ ಈ ಮೂರರಿಂದ ಮನುಷ್ಯ ಸಮಾಜದಲ್ಲಿ ಒಳ್ಳೆಯ ಬುದುಕು ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಬೆಳೆಗಳ ಜತೆಗೆ ತರಕಾರಿ ಬೆಳೆದು ರೆತರು ಸ್ವಾವಲಂಬಿ ಬದುಕು ಸಾಗಿಸಲು ಮುಂದಾಗಬೇಕು ಎಂದು ತಿಳಿಸಿದರು.
ನಗರಸಭೆ ಉಪಾಧ್ಯಕ್ಷ ರಾಮದುರ್ಗ, ಸದಸ್ಯರಾದ ಮೋಹನ್, ಕಿರಣ್, ನಾಗರಾಜು, ಪೌರಾಯುಕ್ತೆ ಬಿ. ಶುಭ, ಲ. ವೆಂಕಟೇಶ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *