ಯುವ ಲೇಖಕ ಲಕ್ಷ್ಮೀ ಕಿಶೋರ್ ಅರಸ್ ಅವರಿಗೆ ಕನ್ನಡ ವಿಕಾಸ ರತ್ನ ಪ್ರಶಸ್ತಿ
ಚನ್ನಪಟ್ಟಣ : ತಾಲೂಕಿನ ಕೂಡ್ಲೂರು ಗ್ರಾಮ ಯುವಕವಿ, ಲೇಖಕ ಲಕ್ಷ್ಮಿ ಕಿಶೋರ್ ಅರಸ್ ಅವರಿಗೆ ರಾಜ್ಯಮಟ್ಟದ “ಕನ್ನಡ ವಿಕಾಸ ರತ್ನ” ಪ್ರಶಸ್ತಿ ಲಭಿಸಿದೆ.
ಯುವ ಲೇಖಕ ಲಕ್ಷ್ಮಿ ಕಿಶೋರ್ ಅರಸ್ ರವರು ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಕೊಡ ಮಾಡಲ್ಪಡುವ ರಾಜ್ಯಮಟ್ಟದ ಕನ್ನಡ ವಿಕಾಸ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಗುರುತಿಸಿ ಅವರಿಗೆ ಅತಿ ಹೆಚ್ಚು ಪ್ರೋತ್ಸಾಹ ನೀಡುವ ಸಲುವಾಗಿ ರಾಜ್ಯ ಒಕ್ಕಲಿಗರ ವಿಕಾಸ ವೇದಿಕ ವತಿಯಿಂದ ರಾಜ್ಯ ಮಟ್ಟದ ಕನ್ನಡ ವಿಕಾಸ ರತ್ನ ಪ್ರಶಸ್ತಿ ನೀಡಲಾಗುತ್ತದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷರಾದ ಯಮುನಾ ಎಚ್ .ಎಲ್ ರವರು ತಿಳಿಸಿದ್ದಾರೆ .
ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉತ್ಸಾಹ ಯುವ ಲೇಖಕ, ಅಂಕಣಕಾರ ಲಕ್ಷ್ಮಿ ಕಿಶೋರ್ ಅರಸ್ ಅವರನ್ನು ಈ ಬಾರಿ ಕನ್ನಡ ವಿಕಾಸ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ .
ಇದೇ ಡಿ. 25 ರಂದು ಮೈಸೂರಿನ ಕಿರು ರಂಗಮಂದಿರದಲ್ಲಿ ಜರುಗಲಿರುವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
