ರಾಮನಗರದ ಎಪಿಎಂಸಿ ಆವರಣದಲ್ಲಿ ರೈತ ಬಸವರಾಜುವಿನ ಮೇಲೆ ದಲ್ಲಾಳಿಗಳಿಂದ ಹಲ್ಲೆ

ರಾಮನಗರ : ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಅಂಜನಾಪುರ ಗ್ರಾಮದ ರೈತ ಬಸವರಾಜು ಮೇಲೆ ಹೊರಗಿನಿಂದ ಬಂದ ದಲ್ಲಾಳಿಗಳು ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಗುರುವಾರ ನಡೆದಿದೆ.
ಹಲ್ಲೆಯಿಂದ ಗಾಯಗೊಂಡಿರುವ ರೈತ ರಾಮನಗರದ ರಾಮಕೃಷ್ಣ ಖಾಸಗಿ ಆಸ್ಪತ್ರೆU ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದ ರೈತನಿಗೆ ದಲ್ಲಾಳಿಗಳು ರೈತನ ಜೊತೆ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಆರೇಳು ಜನ ಸೇರಿ ರೈತನ ಮೇಲೆ ಹಲ್ಲೆ ಮಾಡಿದ್ದಾರೆ.
ರೈತನನ್ನು ತೀವ್ರವಾಗಿ ಥಳಿಸಿದ ದಲ್ಲಾಳಿಗಳು ಅವನನ್ನು ಕೆಳಗೆ ಬಿಳಿಸಿ ಹೊಟ್ಟೆ ಭಾಗವನ್ನು ತುಳಿದಿದ್ದಾರೆ. ರೈತ ಕ್ಯಾನ್ಸರ್ ರೋಗಿಯಾಗಿದ್ದು, ಹಲ್ಲೆಯಿಂದ ತೀವ್ರವಾಗಿ ಅಸ್ವಸ್ಥನಾಗಿ ಆಸ್ಪತ್ರೆ ಸೇರಿದ್ದಾನೆ.
ರೈತನ ಮೇಲಿನ ಹಲ್ಲೆ ನೋಡಿ ಜಗಳ ಬಿಡಿಸಲು ಬಂದ ಆತನ ಸಂಬಂಧಿ ವಿರೇಶ್ ಎಂಬುವವರ ಮೇಲೂ ಕೂಡ ದಲ್ಲಾಳಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ವಿಷಯ ತಿಳಿದ ಐಜೂರು ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ರಾಮನಗರದ ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗನರದ ಎಪಿಎಂಸಿ ಮಾರುಕಟ್ಟೆಯಲ್ಲಿ ನೊಂದಾಯಿತ ದಲ್ಲಾಳಿಗಳಲ್ಲದ ಇವರು ಆಗಾಗ್ಗೆ ಮಾರುಕಟ್ಟೆಗೆ ಬಂದು ರೈತರಿಂದ ತರಕಾರಿ ಖರೀದಿ ನಡೆಸಿ ಗ್ರಾಮಗಳಲ್ಲಿ ಲಗೇಜ್ ಆಟೋಗಳಲ್ಲಿ ವ್ಯಾಪಾರ ಮಾಡುತ್ತಿದ್ದ ದಲ್ಲಾಳಿಗಳಾಗಿದ್ದಾರೆ. ರೈತರ ಮೇಲೆ ಹಲ್ಲೆ ಮಾಡಿರುವುದು ರಾಮನಗರದ ಎಪಿಎಂಸಿ ಮಾರುಕಟ್ಟೆಗೆ ಕಪ್ಪುಚುಕ್ಕೆಯಾಗಿದೆ.
ಕೂಡಲೆ ರಾಮನಗರದ ಎಪಿಎಂಸಿ ಅಧಿಕಾರಿಗಳು, ವರ್ತಕರುಗಳು, ಅನಧಿಕೃತವಾಗಿ ವ್ಯವಹಾರ ನಡೆಸುತ್ತಿರುವ ಇಂತಹ ದಲ್ಲಾಳಿಗಳಿಗೆ ನಿರ್ಬಂಧ ವಿಧಿಸುವ ಮೂಲಕ ಇಂತಹ ಅಹಿತಕರ ಘಟನೆಗಳು ನಡೆಯದಂತೆ ತಡೆಯಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.

Leave a Reply

Your email address will not be published. Required fields are marked *