ಹಿತೈಷಿಗಳು, ಮಿತ್ರರಿಂದ ಕನ್ನಡದ ಕಟ್ಟಾಳು ಸಿಂ.ಲಿಂ. ನಾಗರಾಜ್ ಅವರ ಜನುಮ ದಿನಾಚರಣೆ

ಚನ್ನಪಟ್ಟಣ :- ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ,ಸಹಕಾರಿ ಧುರೀಣ, ಹಿರಿಯ ಕನ್ನಡಪರ ಹೋರಾಟಗಾರ ಸಿಂ .ಲಿಂ. ನಾಗರಾಜು ಅವರ 75 ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಅವರ ಹಿತೈಷಿಗಳು ಹಾಗೂ ಮಿತ್ರರು ಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದರು .
ಸಿಂ. ಲಿಂ. ನಾಗರಾಜು ಅವರನ್ನು ಅಭಿನಂದಿಸಿ ಮಾತನಾಡಿದ ಎಸ್ ಡಿಎಂಸಿ ಸಮನ್ವಯ ವೇದಿಕೆಯ ರಾಜ್ಯ ಉಪಾಧ್ಯಕ್ಷ ನಾಗವಾರ ಶಂಭುಗೌಡ ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ ,ಸಹೃದಯತೆ, ಭ್ರಾತೃತ್ವದ, ಬಾಂಧವ್ಯದ ಗುಣಗಳನ್ನು ಮೈಗೂಡಿಸಿಕೊಂಡಿರುವ ನಮ್ಮ ನಡುವಿನ ಅಪರೂಪದ ಆದರ್ಶ ರಾಜಕಾರಣಿಗಳಲ್ಲಿ ಸಿಂ. ಲಿಂ .ನಾಗರಾಜು ರವರು ಒಬ್ಬರು . ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ, ಸಹಕಾರ, ರಾಜಕೀಯ, ಹೋರಾಟ ,ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ತಮ್ಮದೇ ಆದ ಸೇವೆ ಮಾಡಿದ್ದು, ಸಾರ್ವಜನಿಕ ಜೀವನದಲ್ಲಿ ನಿಷ್ಕಳಂಕ ವ್ಯಕ್ತಿಯಾಗಿದ್ದಾರೆ ಇವರ ಕನ್ನಡ ಸೇವೆ ಅಪಾರವಾದುದು ಇವರ ತತ್ವ ಆದರ್ಶ ಹಾಗೂ ಮಾರ್ಗದರ್ಶನ ಮುಂದಿನ ಯುವಪೀಳಿಗೆಗೆ ಅನುಕರಣೀಯ ಎಂದರು .
ಈ ಸಂದರ್ಭದಲ್ಲಿ ಭಾರತ ವಿಕಾಸ ಪರಿಷತ್ ಅಧ್ಯಕ್ಷ ವಸಂತಕುಮಾರ್ , ಸಂಯೋಜಕ ಯೋಗೇಶ್ ಚಕ್ಕೆರೆ, ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಮಾದು, ನಿವೃತ್ತ ಶಿಕ್ಷಕ ರಂಗಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಗುರುಮಾದಯ್ಯ, ನಾಡಪ್ರಭು ಕೆಂಪೇಗೌಡ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಬೆಳಕೆರೆ ಕೆಂಪೇಗೌಡ ,ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ನಿರ್ದೇಶಕ ಮಹೇಶ್ವರ್, ಮಂಗಳವಾರಪೇಟೆ ಅರುಣ ಕುಮಾರ್, ಮೈಲನಾಯಕನ ಹೊಸಹಳ್ಳಿ ಸಿದ್ದಪ್ಪ , ಪತ್ರಕರ್ತ ಅಭಿಲಾಷ್ ಗೌಡ, ಭಾವಿಪ ಕಾರ್ಯದರ್ಶಿ ಬಿ .ಎನ್. ಕಾಡಯ್ಯ,ಸಾಹಿತಿ ಕೂರಣಗೆರೆ ಕೃಷ್ಣಪ್ಪ, ಕುಂತೂರುದೊಡ್ಡಿ ಪುಟ್ಟರಾಜು, ಚಕ್ಕೆರೆ ಸಿದ್ದರಾಜು, ಉಪನ್ಯಾಸಕ ಇಂದ್ರಕುಮಾರ್, ಮರಿಸ್ವಾಮಿ,ಶಿಕ್ಷಕರಾದ ದೇವರಾಜು, ಉಪನ್ಯಾಸಕ ಮಹೇಶ್ , ರಂಗಭೂಮಿ ಕಲಾವಿದ ದಶವಾರ ಮಹೇಶ್ ಸೇರಿದಂತೆ ಹಲವಾರು ಮಂದಿ ಸಿಂ.ಲಿಂ.ನಾಗರಾಜ್ ರವರ ಅಭಿಮಾನಿಗಳು ಉಪಸ್ಥಿತರಿದ್ದು ನಾಗರಾಜುರವರನ್ನು ಗೌರವಿಸಿ ಅಭಿನಂದಿಸಿದರು .

Leave a Reply

Your email address will not be published. Required fields are marked *