20 ವರ್ಷದಿಂದ ಆಗಿದ್ದ ನಷ್ಟವನ್ನು ಭರಿಸಿ ಈಗ ಲಾಭದಾಯಕವಾಗಿ ಮಾಡಿದ್ದೇವೆ : ವೇಣುಗೋಪಾಲ್
ಮಾಗಡಿ : 20 ವರ್ಷದಿಂದ ಪಿಎಲ್‍ಡಿ ಬ್ಯಾಂಕ್ ನಷ್ಟದ ಸ್ಥಿತಿಯಲ್ಲಿತ್ತು, ನಿರ್ದೇಶಕರುಗಳ ಸಹಕಾರದಿಂದ ಈ ವರ್ಷ ಲಾಭದಾಯಕವಾಗಿ ಬ್ಯಾಂಕ್ ಇರುವಂತೆ ಮಾಡಲಾಗಿದೆ ಎಂದು ಪಿಎಲ್‍ಡಿ ಬ್ಯಾಂಕ್ ಆದ್ಯಕ್ಷ ವೇಣುಗೋಪಾಲ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ 2020-21ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದಲೂ ಬ್ಯಾಂಕ್‍ನಲ್ಲಿ ಪಡೆದಿದ್ದ ಸಾಲವನ್ನು ಹಿಂದಿರುಗಿಸದೆ ಬ್ಯಾಂಕ್ ನಷ್ಟದ ಸ್ಥಿತಿಯಲ್ಲಿತ್ತು, ನಾನು ಅಧ್ಯಕ್ಷನಾದ ಮೇಲೆ ನಿರ್ದೇಶಕರ ಸಹಕಾರದಿಂದ ಶೇ.70 ರಷ್ಟು ಸಾಲ ವಸೂಲಿ ಮಾಡಲಾಗಿದೆ, ಇನ್ನು ಕೇವಲ 5 ರಿಂದ 6 ಮಂದಿ ಸಾಲವನ್ನು ಮರು ಪಾವತಿ ಮಾಡಿದರೆ ಶೇ.100 ರಷ್ಟು ವಸೂಲಾತಿ ಆಗಲಿದೆ, ಇದು ರೈತರ ಬ್ಯಾಂಕ್ ಆಗಿರುವುದರಿಂದ ಸಾಲ ಪಡೆದ ರೈತರು ಹಣವನ್ನು ಹಿದಿರುಗಿಸಿ ಬ್ಯಾಂಕ್‍ನ ಅಭಿವೃದ್ದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ 3ನೇ ಸ್ಥಾನ : ಬ್ಯಾಂಕ್‍ನ ನಿರ್ದೇಶಕರುಗಳ ಸಹಕಾರದಿಂದ ರಾಮನಗರ ಜಿಲ್ಲೆಯಲ್ಲಿ ನಮ್ಮ ಬ್ಯಾಂಕ್ 3ನೇ ಸ್ಥಾನಕ್ಕೆ ಬಂದಿದ್ದೇವೆ, ಕಡೆಯ ಬ್ಯಾಂಕ್‍ಇತ್ತು, ಈಗ 2ವರೆ ಕೋಟಿ ಸಾಲ ವಸೂಲಿ ಮಾಡಿದ ಪರಿಣಾಮ ಈ ಸ್ಥಾನಕ್ಕೆ ಬಂದಿದ್ದು ಈ ವರ್ಷ 11 ವರೆ ಲಕ್ಷ ಲಾಭದಾಯಕವಾಗಿದ್ದು ಇದೇ ರೀತಿ ಬ್ಯಾಂಕ್ ಲಾಭದಾಯಕವಾಗಿ ಹೋಗುವ ರೀತಿ ಮಾಡಲಾಗುತ್ತದೆ, ಸರ್ಕಾರದ ಯಾವುದೇ ಯೋಜನೆಗಳು ಬಂದರು ಕೂಡ ನಮ್ಮ ಬ್ಯಾಂಕ್ ಮೂಲಕವೇ ವಿಲೇವಾರಿಯಾಗಬೇಕು, ಈಗ ಇರುವ ಬ್ಯಾಂಕ್ ಕಟ್ಟಡ ತುಂಬಾ ಶಿಥಿಲಾವಸ್ಥೆಯಲ್ಲಿದ್ದು ಮಾಜಿ ಮತ್ತು ಹಾಲಿ ಶಾಸಕರು ಮನವಿ ಮಾಡಿ ಕಟ್ಟಡಕ್ಕೆ ಪಟ್ಟಣದಲ್ಲಿ ಜಾಗ ನೀಡುವ ಮೂಲಕ ರೈತ ಬ್ಯಾಂಕ್‍ನ್ನು ಉಳಿಸುವ ಕೆಲಸ ಮಾಡಬೇಕೆಂದು ವೇಣುಗೋಪಾಲ್ ಮನವಿ ಮಾಡಿದರು.
2020-21ನೇ ಸಾಲಿನ ಆಡಿಟ್ ವರದಿ ಅನುಮೋದನೆ ಪಡೆಯಲಾಯಿತು, 20-21ನೇ ಸಾಲಿನ ಅಂದಜು ಬಜೆಟ್ ಮಂಡಿಸಲಾಯಿತು, ಹಾಗೂ ಬ್ಯಾಂಕ್‍ನ ಸುಸ್ತಿದಾರರಾಗಿದ್ದಲ್ಲಿ ಸುಸ್ತಿ ಮೊತ್ತ ಪಾವತಿಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ನಿರ್ದೇಶಕರುಗಳಾದ ಗಂಗರಾಜು, ಚಂದ್ರುಶೇಖರ್, ಚಕ್ರಬಾವಿ ರವೀಂದ್ರ, ದೇವೇಂದ್ರ ಕುಮಾರ್, ಹನುಮಯ್ಯ, ಸರೋಜಮ್ಮ, ಸರ್ಕಾರಿ ನಾಮ ನಿರ್ದೇಶಕಿ ಜಯಮ್ಮ, ಪ್ರಭಾರ ವ್ಯವಸ್ಥಾಪಕ ಸೋಮಶೇಖರ್ ಸೇರಿದಂತೆ ಇತರರು ಭಾಗವಹಿಸಿದ್ದರು.