ಜೆಡಿಎಸ್ ಅನ್ನು ಮುಗಿಸುತ್ತೇವೆಂದು ಹೋದ ಬಾಲಕೃಷ್ಣ ಗೆ ನಮ್ಮ ಚಿಂತೆ ಏಕೆ : ಕುಮಾರಸ್ವಾಮಿ ಪ್ರಶ್ನೆ

ರಾಮನಗರ : ಪಾಪ ಅವರಿಗೆ ನನ್ನ ಪಕ್ಷ ಚಿಂತೆ ಯಾಕೆ ಜೆಡಿಎಸ್ ನ ಮುಗಿಸುತ್ತೇವೆ ಎಂದು ಟೋಪಿ ಹಾಕಿ ಹೋದ್ರಲ್ಲ ಎಂದು ಮಾಜಿ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಡದಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬಿಡದಿ ಪುರಸಭೆ ಚುನಾವಣೆಯಲ್ಲಿ ಮತಭೇಟೆ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿ, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಆ ವೇಳೆ ಅವರಿಗೆ ಜನರು ಕೊಟ್ಟಿರುವ ತೀರ್ಪನ್ನು ಮೊದಲು ಹರಗಿಸಿಕೊಳ್ಳಲಿ. ಆಮೇಲೆ ಜೆಡಿಎಸ್ ಉಳಿಯತ್ತೋ ಬಿಡತ್ತೋ ಎಂಬದನ್ನ ಜನರು ತಿರ್ಮಾನ ಮಾಡ್ತಾರೆ.
ಮೇಕೆದಾಟು ಕಾಂಗ್ರೆಸ್ ಕೊಡುಗೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, 1996 ರಲ್ಲಿ ದೇವೇಗೌಡರು ಸಿಎಂ ಆದಾಗ ಮೇಕೆದಾಟು ಯೋಜನೆಗೆ ನೀಲಿ ನಕ್ಷೆ ತಯಾರು ಮಾಡಿದ್ರು. ಈ ಯೋಜನೆ ಕಾಂಗ್ರೆಸ್ ಕೊಡುಗೆ ಅಲ್ಲ. ನಾನು ಮುಖ್ಯಮಂತ್ರಿಯಾದಾಗ ಮೇಕೆದಾಟು ಯೋಜನೆಯ ಡಿಪಿಆರ್ ನ ಸಿದ್ದ ಮಾಡಿದ್ದು. ನಾನು ಹಲವಾರು ಭಾರಿ ಪ್ರಧಾನ ಮಂತ್ರಿ, ಕೇಂದ್ರ ಸಚಿವರನ್ನ ಭೇಟಿ ಮಾಡಿದ್ದೇನೆ.
1962 ರಲ್ಲಿ ಪಕ್ಷೇತರ ಶಾಸಕರಾಗಿ ವಿಧಾನ ಸಭೆಯಲ್ಲಿ ರೆಜುಲೇಶನ್ ಪಾಸ್ ಮಾಡಲು ನಿಲುವು ತೆಗೆದು ಕೊಂಡಿದ್ದರು. ಈಗಾಗಿ ಹಾರಂಗಿ, ಹೇಮಾವತಿ, ಇಗ್ಗಲೂರು ಸೇರಿದಂತೆ ಹಲವು ಜಲಾಶಯಗಳಾಗಿವೆ. ಇದು ದೇವೆಗೌಡ್ರು ರಾಜಕೀಯ ಜೀವನದಲ್ಲಿ ಕೊಟ್ಟಿರುವ ಕೊಡುಗೆಯಾಗಿದೆ.
ನೀರಾವರಿ ಬಗ್ಗೆ ಜನತಾದಳಕ್ಕೆ ಇರುವ ಕಮಿಟ್ಮೆಂಟ್ ಇನ್ನಾವ ಪಕ್ಷಗಳಿಗೂ ಇಲ್ಲ. ಈ ಬಗ್ಗೆ ಇತ್ತೀಚೆಗೆ ಬಿಡುಗಡೆಯಾದ ದೇವೇಗೌಡರ ಬಯೋಗ್ರಾಫಿಕ್ ಪುಸ್ತಕ ಬಿಡುಗಡೆಯಾಗಿದೆ. ಅದರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಏನು ಹೇಳಿದ್ದಾರೆ ಎಂಬುದನ್ನ ನೀವೇ ನೋಡಿ ಎಂದರು.
2013 ರಲ್ಲಿ ಮತ ಹಾಕಿಸಿಕೊಳ್ಳಲು ಕಾಂಗ್ರೆಸ್ ನಡೆ ಕೃಷ್ಣೇ ಕಡೆಗೆ ಎಂದು ಮಾಡಿದ್ದರು. ಈಗ ಮೇಕೆದಾಟು ಹಿಡಿದುಕೊಂಡು 176 ಕಿ.ಮೀ ಪಾದಯಾತ್ರೆ ಮಾಡುತ್ತಿರುವುದು ಓಟ್ ಹಾಕಿಸಿಕೊಳ್ಳಲು ಅಷ್ಟೇ. ಕೆಲಸ ಮಾಡೋಕೆ ಇರೋದು ಜನತಾ ದಳ. ಕಾಂಗ್ರೆಸ್ ನಾಯಕರ ವಿರುದ್ದ ವಿರುದ್ಧ ಮಾಜಿ ಸಿಎಂ ಗುಡುಗಿದರು.
ಸತ್ಯಗಾಲ ನೀರಾವರಿ ಯೋಜನೆ ಸಂಸದ ಡಿ.ಕೆ.ಸುರೇಶ್ ಮಾಡಿಸಿದ್ದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹೋ ಹೋ.. ಅವರು ದೊಡ್ಡ ನೀರಾವರಿ ತಜ್ಞರು ಅವರು. ಯಾಕೆ 5 ವರ್ಷ ಸರ್ಕಾರ ಇತ್ತಲ್ಲ ಆಗ್ಲೆ ಮಾಡ್ಲಿಲ್ಲ. ಸಿಎಂ ಆಗಿ ಆರ್ಥಿಕ ಸಚಿವನಾಗಿ 580 ಕೋಟಿ ಕೆಲಸ ಪ್ರಾರಂಭ ಮಾಡಿಸಿದ್ದು ನನ್ನ ಕಾಲದಲ್ಲಿ. ನಮ್ಮ ರೈತರಿಗೆ ಅನುಕೂಲ ಮಾಡಲು ಸಿಕ್ಕ ಅವಕಾಶದಲ್ಲಿ ಪ್ರಮಾಣಿಕವಾಗಿ ದುಡಿಮೆ ಮಾಡಿದ್ದೇವೆ. ಇವರ ಹಾಗೆ ಬೊಗಳೆ ಬಿಟ್ಟು ಸುಳ್ ಸುಳ್ ಹೇಳಿಕೊಂಡು ಜನರ ಪರಿತಪ್ಪಿಸುತ್ತಾರೆ. ಪಾಪ ಇವರಿಗೆ ಕಂಡರ ಜಮೀನುಗಳಿಗೆ ಬೇಲಿ ಹಾಕಿಸಲು ಟೈಮ್ ಇಲ್ಲ. ನಾನು ಕಾಣದೇ ಇರೋದ ಬೆಂ- ಮೈ ರಸ್ತೆಯಲ್ಲಿರೋದು ಎಂದು ಸಂಸದ ಡಿ.ಕೆ.ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *