ತೆಂಗು, ಅಡಕೆ ಸಸಿ ವಿತರಿಸುವ ಮೂಲಕ ರಾಷ್ಟ್ರೀಯ ರೈತ ದಿನಾಚರಣೆ

ರಾಮನಗರ: ಕರ್ನಾಟಕ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ಬಾಂಧವರಿಗೆ ತೆಂಗು ಹಾಗೂ ಅಡಕೆ ಸಸಿಗಳನ್ನು ವಿತರಿಸುವ ಮೂಲಕ ನಗರದ ಎಪಿಎಂಸಿ ಆವರಣದಲ್ಲಿ ಗುರುವಾರ ರಾಷ್ಟ್ರೀಯ ರೈತ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಕರ್ನಾಟಕ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್ ಮಾತನಾಡಿ, ರೈತರು ಹಾಗು ರೈತರ ಉತ್ಪನ್ನಗಳನ್ನು ಸೃಷ್ಟಿಸುವ ಯಾವುದೇ ಕೈಗಾರಿಕೆ ಇದುವರೆಗೂ ಬಂದಿಲ್ಲ, ಬರುವುದೂ ಇಲ್ಲ. ರೈತರು ನಮ್ಮ ದೇಶದ ಅಮೂಲ್ಯ ಸಂಪತ್ತು ಈ ನಿಟ್ಟಿನಲ್ಲಿ ಆಳುವ ಸರ್ಕಾರಗಳು ಅನ್ನದಾತ ರೈತರನ್ನು ಗೌರವಯುತವಾಗಿ ಉಳಿಸಿಕೊಳ್ಳಬೇಕಿದೆ ಎಂದು ಎಚ್ಚರಿಸಿದರು.
ವೈದ್ಯರ ಮಗ ವೈದ್ಯ ಇಂಜೀನಿಯರ್ ಮಗ ಇಂಜಿನಿಯರ್ ಆಗುವ ಕಾಲಘಟ್ಟದಲ್ಲಿ ರೈತನ ಮಗ ರೈತನಾಗಲು ನಿರಾಕರಿಸುತ್ತಿರುವುದು ವಿಷಾದನೀಯ ಎಂದರು.
ರೈತರ ಹಿತರಕ್ಷಣೆ ಮಾಡುವ ದಿಕ್ಕಿನಲ್ಲಿ ರೈತರ ಬೆಳೆಗಳಿಗೆ ಸೂಕ್ತ ಹಾಗು ಬೆಂಬಲ ಬೆಲೆ ನಿಗದಿ ಪಡಿಸುವುದು ಕಡಿಮೆ ಬಡ್ಡಿ ದರದ ಸಾಲ ವಿತರಣೆ ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ರೈತನ ಮಗ ರೈತನಾಗದಿರಲು ಪ್ರಮುಖ ಕಾರಣ ಹಾಕಿದ ಹಣ ವಾಪಸ್ ಬರದಂತಹ ಸ್ಥಿತಿ ನಿರ್ಮಾಣವಾಗಿದೆ ಅದನ್ನು ತಡೆದು ರೈತ ಕುಲ ರಕ್ಷಣೆ ಮಾಡಬೇಕಿದೆ ತುಂಬೇನಹಳ್ಳಿ ಶಿವಕುಮಾರ್ ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಮಾಡಿದರು.
ಸಂಘದ ಗೌರವಾಧ್ಯಕ್ಷ ಎಸ್.ಎನ್. ದೇವರಾಜು, ರಾಜ್ಯ ಕಾರ್ಯದರ್ಶಿ ತಿಮ್ಮಯ್ಯನದೊಡ್ಡಿ ಚಿಕ್ಕಮ್ಮಣಿ, ರಾಮನಗರ ತಾಲೂಕು ಉಪಾಧ್ಯಕ್ಷ, ಗ್ರಾಪಂ ಸದಸ್ಯ ಗೋವಿಂದರಾಜು, ಬಿಡದಿ ಯುವ ಘಟಕದ ಅಧ್ಯಕ್ಷ, ಗ್ರಾಪಂ ಸದಸ್ಯ ಹೆಜ್ಜಾಲ ರವಿಗೌಡ, ಬಿಡದಿ ಘಟಕದ ಅಧ್ಯಕ್ಷ ಜಯರಾಮು, ಉಪಾಧ್ಯಕ್ಷ ಮುತ್ತುರಾಯನಪುರ ರಂಗಸ್ವಾಮಿ, ಹೆಜ್ಜಾಲ ಘಟಕದ ಅಧ್ಯಕ್ಷ ಎಚ್.ನರಸಿಂಹಮೂರ್ತಿ, ಮಾಗಡಿ ತಾಲೂಕು ಅಧ್ಯಕ್ಷ ಎನ್. ನರಸಿಂಹಮೂರ್ತಿ, ಬನ್ನಿಕುಪ್ಪೆ ಅಧ್ಯಕ್ಷ ತಿಮ್ಮಯ್ಯ, ಮಾರಪ್ಪ, ಮಂಜು, ರುದ್ರ ಮಹದೇವ್ ಹಾಗೂ ಸಂಘದ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *