ಮಂಡ್ಯದಲ್ಲಿ ಸತ್ವ ಗ್ರೂಪ್ ನಿಂದ ಕಾವೇರಿ ಸಿರಿ ಪ್ಲಾಟೆಡ್ ಡೆವಲಪ್ ಮೆಂಟ್ ಯೋಜನೆಗೆ ಚಾಲನೆ

ಮಂಡ್ಯ : ಭಾರತದ ಪ್ರಮುಖ ಪ್ರಾಪರ್ಟಿ ಡೆವಲಪ್ ಮೆಂಟ್, ನಿರ್ವಹಣೆ ಮತ್ತು ಸಲಹಾ ಸಂಸ್ಥೆಯಲ್ಲಿ ಒಂದಾದ ಸತ್ವ ಗ್ರೂಪ್ ತನ್ನ ಬಹುನಿರೀಕ್ಷಿತ ಹೆಗ್ಗುರುತಾದ ಕರ್ನಾಟಕದ ಕಬ್ಬಿನ ರಾಜಧಾನಿ ಮಂಡ್ಯದಲ್ಲಿ ತನ್ನ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿದೆ. ಮೈಸೂರು-ಬೆಂಗಳೂರು ದಶಪಥ ಎಕ್ಸ್ ಪ್ರೆಸ್ ವೇನಲ್ಲಿ ಆದರ್ಶವಾಗಿ ನೆಲೆಗೊಂಡಿರುವ ಸತ್ವ ಕಾವೇರಿ ಸಿರಿಯು 35 ಎಕರೆ ಹಚ್ಚ ಹಸಿರಿನಿಂದ ಹರಡಿರುವ 652 ಉತ್ತಮ ವಾದ ಪ್ಲಾಟ್ ಗಳನ್ನು ಒದಗಿಸುತ್ತದೆ. ಪ್ರಶಾಂತವಾದ ಆಂಬಿಯನ್ಸ್ ನಡುವೆ ಇದು ನಿಮ್ಮ ಕನಸಿನ ಜೀವನದ ಗಮ್ಯಸ್ಥಾನವಾಗುವ ಗುರಿಯನ್ನು ಹೊಂದಿದೆ. ಪ್ರಕೃತಿ ಪ್ರಿಯರಲ್ಲಿ ಬೇಡಿಕೆಯ ಹೆಚ್ಚಳ ಮತ್ತು ಲೋ ಡೆನ್ಸಿಟಿ ಲೈಫ್ ಸ್ಟೈಲ್ ಅಗತ್ಯವನ್ನು ಪೂರೈಸಲು ಹಾಗೂ ಕಾವೇರಿ ಸಿರಿ ಕುಟುಂಬವು ತಮ್ಮ ಪ್ರೀಮಿಯಂ ಜೀವನ ಶೈಲಿಯನ್ನು ಎತ್ತಿಹಿಡಿಯಲು ಅಗತ್ಯವಿರುವ ಎಲ್ಲ ಸೌಲಭ್ಯವನ್ನು ನೀಡಲಿದ್ದು, ಪ್ರಕೃತಿಯೊಂದಿಗೆ ಹೊಂದಿಕೊಳ್ಳುತ್ತದೆ. ನಿಖರವಾದ ಯೋಜನೆ, ಉತ್ತಮ ಚಿಂತನೆಯ ಮೂಲಸೌಕರ್ಯ ಮತ್ತು ಮನರಂಜನಾ ಸೌಕರ್ಯಗಳೊಂದಿಗೆ, ಈ ಪ್ಲಾಟ್ ಗಳು ಉತ್ತಮ ಪ್ಯಾಕೇಜ್ ಹೊಂದಿವೆ, ಸರಿ ಸಾಟಿಯಿಲ್ಲದ ಗುಣಮಟ್ಟ ಮತ್ತು ಮಂಡ್ಯದ ಶ್ರೀಮಂತ ಭೂಮಿಯಲ್ಲಿ ಸುಸ್ಥಿರ ದೃಷ್ಟಿಕೋನವನ್ನು ಈ ಯೋಜನೆ ಹೊಂದಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸತ್ವ ಗ್ರೂಪ್ ನ ಎಂಡಿ ಶ್ರೀ ಬಿಜಯ್ ಅಗರ್ವಾಲ್ ಅವರು, “ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಪ್ಲಾಟ್ ಗಳು ಯಾವಾಗಲೂ ಮನೆ ಖರೀದಿದಾರರ ಮೊದಲ ಆದ್ಯತೆಯಾಗಿದೆ. ಸಾಂಕ್ರಾಮಿಕ ರೋಗದ ಕಾರಣ ಇಂಹತ ಅಭಿವೃದ್ಧಿ ಯೋಜನೆಗಳಿಗೆ ಬೇಡಿಕೆ ವೇಗ ಪಡೆಯಿತು. ಜನರು ತಮ್ಮ ಸ್ವಂತ ಮನೆಗಳನ್ನು ನಿರ್ಮಿಸಲು ಫ್ಲೆಕ್ಸಿಬಿಲಿಟ್ ಅನ್ನು ಹೊಂದುವ ಮೌಲ್ಯವನ್ನು ಅರಿತುಕೊಂಡರು, ಜೊತೆಗೆ ಹೆಚ್ಚುವರಿ ಸೌಕರ್ಯಗಳು ಮತ್ತು ಸುರಕ್ಷಿತ ಸಮುದಾಯ ಜೀವನವನ್ನು ಹೊಂದುವ ಪ್ರಾಮುಖ್ಯತೆಯನ್ನು ಅರಿತುಕೊಂಡರು. ಸತ್ವ ಕಾವೇರಿ ಸಿರಿಯೊಂದಿಗೆ, ನಾವು ಮನೆ ಖರೀದಿದಾರರ ಬೇಡಿಕೆಯನ್ನು ಪೂರೈಸಲು ಆಶಿಸುತ್ತೇವೆ ಮತ್ತು ಮಹತ್ವಾಕಾಂಕ್ಷೆಯ ಆಸ್ತಿ ಖರೀದಿದಾರರು ಮತ್ತು ಹೂಡಿಕೆದಾರರಿಗೆ ಪರಿಪೂರ್ಣ ಆಯ್ಕೆ ಇದಾಗಲಿದೆ. ಮಂಡ್ಯ ವು ಮೈಸೂರು-ಬೆಂಗಳೂರು ನಡುವೆ ಮಧ್ಯದಲ್ಲಿರುವುದರಿಂದ ಮತ್ತು ಇಂದು ದೇಶದ ಅತ್ಯುತ್ತಮ ಎಕ್ಸ್ ಪ್ರೆಸ್ ವೇಗಳಲ್ಲಿ ಒಂದಾಗಿರುವುದರಿಂದ ಯೋಜನೆಗೆ ಮಂಡ್ಯ ವು ಪರಿಪೂರ್ಣ ಸ್ಥಳವಾಗಿದೆ ಎಂದು ನಾವು ಬಲವಾಗಿ ನಂಬುತ್ತೇವೆ ಎಂದರು.

ಕಾವೇರಿ ಸಿರಿಯ ವಿಶೇಷವಾಗಿ ಕ್ಯುರೇಟೆಡ್ ಅನನ್ಯ ಹಸಿರು ವೈಶಿಷ್ಟ್ಯಗಳಾದ ಥೀಮ್ ಗಾರ್ಡನ್ ಗಳು, 6 ಹಸಿರು ಉದ್ಯಾನವನಗಳು, ಜಾಗಿಂಗ್ ಟ್ರ್ಯಾಕ್ ಗಳು, ಹೊರಾಂಗಣ ಜಿಮ್, ಯೋಗ ಹುಲ್ಲು ಹಾಸು, ಮತ್ತು ಬಹು ಪುನರುಜ್ಜೀವನ, ಫಿಟ್ನೆಸ್, ಸೋಷಿಯಲೈಸಿಂಗ್ ಮತ್ತು ವಿರಾಮ ವಲಯಗಳು ಕುಟುಂಬಗಳಿಗೆ ನಗರ ಸೌಕರ್ಯಗಳೊಂದಿಗೆ ಪ್ರಕೃತಿಯೊಂದಿಗೆ ಬದುಕುವ ಆದರ್ಶ ಮಿಶ್ರಣವನ್ನು ಒದಗಿಸುತ್ತವೆ. ಈ ಯೋಜನೆಯು 25,000 ಚದರ ಅಡಿ ವಸಾಹತು ಶಾಹಿ ಶೈಲಿಯ ಕ್ಲಬ್ ಹೌಸ್ ಅನ್ನು ಒಳಗೊಂಡಿದೆ, ಅನೆನ್ಕ್ಲೋಸ್ಡ್ ಈಜುಕೊಳ, ಭವ್ಯವಾದ ವಾಚ್ ಟವರ್ ಮತ್ತು ಹಸಿರು ಎಲೆಗಳು ಮತ್ತು ಹೂಬಿಡುವ ಮರಗಳೊಂದಿಗೆ ವಿಶೇಷ ಲ್ಯಾಂಡ್ ಸ್ಕೇಪಿಂಗ್ ಹೊಂದಿದೆ. ಈ ಮನರಂಜನಾ ಸೌಕರ್ಯಗಳು ನಿವಾಸಿಗಳಿಗೆ ಆಹ್ಲಾದಕರ ಮತ್ತು ಕಾಳಜಿಯ ಜೀವನ ಶೈಲಿಯನ್ನು ಒದಗಿಸುವ ಗುರಿಯನ್ನು ಹೊಂದಿವೆ.

Leave a Reply

Your email address will not be published. Required fields are marked *