ರೈತ ಮಹಿಳೆಯರಿಂದ ‘ವಿಜಯವಾಣಿ’ ದಿನದರ್ಶಿಕೆ ಬಿಡುಗಡೆ

ರಾಮನಗರ : ‘ವಿಜಯವಾಣಿ’ ದಿನ ಪತ್ರಿಕೆ ಹೊರ ತಂದಿರುವ 2022ರ ದಿನದರ್ಶಿ ಕ್ಯಾಲೆಂಡರ್ ಅನ್ನು ರೈತ ದಿನಾಚರಣೆ ವಿಶೇಷ ಅಂಗವಾಗಿ ರೈತ ಮಹಿಳೆಯರಿಂದ ತಾಲ್ಲೂಕಿನ ಕೈಲಾಂಚ ಹೋಬಳಿಯ ಚನ್ನಮಾನಹಳ್ಳಿ ರೈತ ಹೊಲದಲ್ಲಿ ಬಿಡುಗಡೆಗೊಳಿಸಲಾಯಿತು.
ರೈತ ದಿನಾಚರಣೆ ವಿಶೇಷವಾಗಿ ಆಚರಿಸಿದ ವಿಜಯವಾಣಿ ಪತ್ರಿಕೆ ಜಮೀನಿನಲ್ಲಿ ರಾಗಿ ಒಕ್ಕಣೆಯಲ್ಲಿ ತೊಡಗಿದ್ದ ರೈತರಿಗೆ ಶುಭಕೋರಿ ಅವರ ಕೈಯಿಂದಲೇ ವಿಜಯವಾಣಿ 2022 ರ ಹೊಸವರ್ಷದ ದಿನಚರಿ ಬಿಡುಗಡೆ ಮಾಡಿಸಲಾಯಿತು.
ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ ವಿಜಯವಾಣಿ ಪತ್ರಿಕೆ ಸಮಾಜಮುಖಿಯಾಗಿ ವಸ್ತುನಿಷ್ಠ ವರದಿಯಿಂದ ಎತ್ತರಕ್ಕೆ ಬೆಳೆದಿದೆ. ನಗರ, ಗ್ರಾಮ ಮಟ್ಟದಲ್ಲಿ ಜನರ ಸಾಮಾಜಿಕ ಸಮಸ್ಯೆಗಳನ್ನು ಗುರ್ತಿಸಿಜೊತೆಗೆ ವಿಶೇಷವಾಗಿ ರೈತರ ಸಮಸ್ಯೆ, ರೈತರಿಗೆ ಸರ್ಕಾರದಿಂದದೊರೆಯುವ ಸವಲತ್ತುಗಳನ್ನು ಕಾಲಕಾಲಕ್ಕೆ ತಿಳಿಸುವುದು, ಬೆಳೆಗಳ ಬಗ್ಗೆ ಮಾಹಿತಿಆಧುನಿಕ ಬೇಸಾಯದ ಬಗ್ಗೆ ತಿಳುವಳಿಕೆ ಮೂಡುವ ಲೇಖನ ಪ್ರಕಟಿಸುವ ಮೂಲಕ ರೈತಸ್ನೇಹಿಯಾಗಿ ಪತ್ರಿಕೆ ಕೆಲಸ ಮಾಡುತ್ತಿದೆ.
ದೇಶ, ವಿದೇಶ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಮಟ್ಟದ ವರದಿಗಳನ್ನು ಜನರಕೈಗಿಟ್ಟು ಸಾಮಾಜಿಕ ಸಮಸ್ಯೆಗಳ ಮೇಲೆ ವಿಶೇಷ ಗಮನಹರಿಸಿ ನೈಜವರದಿ ಪ್ರಕಟಿಸುವ ಮುಖೇನ ಜನಪ್ರತಿನಿಧಿಗಳ, ಸರ್ಕಾರದ ಗಮನಸೆಳೆಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ.ಪತ್ರಿಕೆಅಚ್ಚುಕಟ್ಟಾದ ಮುದ್ರಣ ಪುಟ ವಿನ್ಯಾಸದಿಂದ ಉತ್ತಮವಾಗಿ ಮೂಡಿಬರುತ್ತಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೂ ಪೂರಕವಾಗಿದೆ 2022ರ ನೂತನ ದಿನದರ್ಶಿ ಅಚ್ಚುಕಟ್ಟಾಗಿ ವಾರ, ದಿನ, ರಜಾದಿನ ಸಹಿತ ಸುಂದರ ಅಕ್ಷರಗಳಿಂದ ಮುದ್ರಿತವಾಗಿದೆ ವಿಜಯವಾಣಿ ಸಮಾಜಮುಖಿಯಾಗಿಕಾರ್ಯ ಮನ್ನಡೆಯಲು ಎಂದು ಪತ್ರಿಕೆಗೆ ಹಾರೈಸಿದರು.
ವಿಜಯವಾಣಿ ಜಿಲ್ಲಾ ವರದಿಗಾರ ಗಂಗಾಧರ್ ಭೈರಾಪಟ್ಟಣ ಮಾತನಾಡಿ ವಿಜಯವಾಣಿ ಪತ್ರಿಕೆ ರಾಜ್ಯದ ಜನರ ಅಚ್ಚುಮೆಚ್ಚಿನ ಪತ್ರಿಕೆಯಾಗಿದೆ. ರೈತ ದಿನಾಚರಣೆ ಅಂಗವಾಗಿ ಜಿಲ್ಲೆಯ ರೈತರಿಗೆ ಪತ್ರಿಕಾ ಬಳಗ ಶುಭಾಶಯ ಕೋರುತ್ತದೆ. ಈ ಒಂದು ಸಂಧರ್ಭದಲ್ಲಿ ವಿಜಯವಾಣಿ ಪತ್ರಿಕೆಯ 2022 ರ ದಿನದರ್ಶಿಕೆಯನ್ನು ಇಂದು ವಿಶೇಷವಾಗಿ ರೈತತಾಯಂದಿರಿಂದ ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯಾಗಿದೆ. ಪ್ರತೀ ವರ್ಷ ಸುಂದರ ದಿನದರ್ಶಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. 2022ರದಿನದರ್ಶಿ ವಿಶೇಷವಾಗಿದು ್ದಉತ್ತಮ ಮುದ್ರಣ ಶೈಲಿ ಹೊಂದಿದೆ ಬೆಲೆ 30 ರೂಗಳಾಗಿದೆ. ಹತ್ತಿರದಏಜೆಂಟರಲ್ಲಿಕ್ಯಾಲೆಂಡರ್‍ದೊರೆಯುತ್ತವೆ ಎಂದರು.
ಸಮಗ್ರ ಮಾಹಿತಿ, ಪ್ರಮುಖಜಾತ್ರೆ, ಉತ್ಸವಗಳು, ರಜಾ ದಿನಗಳು, ವಿವಿಧ ಆಚರಣೆಗಳ ಸಂಪೂರ್ಣ ಮಾಹಿತಿ, ಮಳೆ ನಕ್ಷತ್ರ, ರಾಶಿ ಭವಿಷ್ಯ, ನಕ್ಷತ್ರ, ಶುಭ ಕಾರ್ಯಗಳ ದಿನಾಂಕ, ಆಧ್ಯಾತ್ಮಿಕ ನಿಖರ ವಿಚಾರಗಳು ದಿನದರ್ಶಿಯಲ್ಲಿ ಮುದ್ರಿತವಾಗಿವೆದಿನದರ್ಶಿಗೆ ಏಜೆಂಟರಲ್ಲಿ ಕೇಳಿ ಪಡೆದುಕೊಂಡು ತಮ್ಮ ಮನೆಗಳಲ್ಲಿ ವಿಜಯವಾಣಿ ದಿನದರ್ಶಿಕೆ ಇರಲಿ ಎಂದು ತಿಳಿಸಿದರು.
ಕೈಲಾಂಚ ವರದಿಗಾರ ವಿಭೂತಿಕೆರೆ ಶಿವಲಿಂಗಯ್ಯ, ವಿಜಯವಾಣಿ ಪ್ರಸರಣ ವಿಭಾಗದ ಹಿರಿಯ ಪ್ರತಿನಿಧಿ ರೋಹಿತ್, ಚನ್ನಪಟ್ಟಣ ವರದಿಗಾರ ಅಭಿಲಾಷ್ ರೈತರಾದ ಲಕ್ಷ್ಮಮ್ಮ, ರಾಜು, ಡೈರಿಮಂಜುನಾಥ್, ವಸಂತಮ್ಮ, ಮೂರ್ತಿ ಚನ್ನಮಾನಹಳ್ಳಿ ಡೈರಿ ಕಾರ್ಯದರ್ಶಿ ಅರ್ಕೇಶ್ ಮುಂತಾದವರಿದ್ದರು.

Leave a Reply

Your email address will not be published. Required fields are marked *