ಡಿ. 26ರ ಭಾನುವಾರ ಜಾನಪದ ಲೋಕದಲ್ಲಿ ಗ್ರಾಮೀಣ ಆಟಗಳ ಉತ್ಸವ
ರಾಮನಗರ : ನಾಡೋಜ ಡಾ.ಜಿ.ನಾರಾಯಣ ಅವರ ನೆನಪಿನಲ್ಲಿ ದಿನಾಂಕ 26-12-2021 ಭಾನುವಾರ ಜಾನಪದ ಲೋಕದಲ್ಲಿ ಗ್ರಾಮೀಣ ಆಟಗಳ ಉತ್ಸವ–2021 ನಡೆಯಲಿದೆ. ಗ್ರಾಮೀಣ ಪರಿಸರದಲ್ಲಿ ಕಣ್ಮರೆಯಾಗುತ್ತಿರುವ ಹಳ್ಳಿ ಆಟಗಳಾದ ಕುಂಟಬಿಲ್ಲೆ, ಗೋಲಿ, ಬುಗರಿ, ಚಂಡಾಟ, ಅಣ್ಣೆಕಲ್ಲಾಟ, ಚಕ್ರಬಂಡಿ ಹೊಡೆಯುವ ಆಟ, ಹಗ್ಗ ಜಗ್ಗಾಟಲ, ಲಗೋರಿ ಚಂಡು, ಚಿನ್ನಿದಾಂಡು, ರತ್ತೋರತ್ತೋ ರಾಯನ ಮಗಳೆ, ಕಣ್ಣಾಮುಚ್ಚಾಲೆ, ಬಳೆಚೂರಾಟ, ಗೋಲಿ ಆಟ, ಬುಗುರಿ ಆಟ, ಚೌಕಾಬಾರ, ಅಳಿಗುಳಿಮನೆ, ಕಲ್ಲುಕುಟ್ಕುಟ ದಂತಹ ಆಟಗಳು ಆಧುನಿಕತೆಯ ಭರಾಟೆಯಲ್ಲಿ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿವೆ. ಈ ಸಂದರ್ಭದಲ್ಲಿಜನಪದರ ಕಲೆ, ಸಾಹಿತ್ಯ, ಸಂಸ್ಕøತಿ ಸಂರಕ್ಷಿಸುವ ಮಹತ್ತರ ಕಾರ್ಯವನ್ನು ಕರ್ನಾಟಕ ಜಾನಪದ ಪರಿಷತ್ತು ಮಾಡುತ್ತಿದೆ. ಜೊತೆಗೆಮಕ್ಕಳಲ್ಲಿ ಉತ್ಸಾಹ ಲವಲವಿಕೆ ತುಂಬುವ ಮನೋಭೂಮಿಕೆ, ಹದವಾದ ವ್ಯಾಯಾಮ ನೀಡುವಂತಹ, ಕಾಸುಕೊಟ್ಟು ಕೊಂಡುಕೊಳ್ಳಬೇಕಾದ ಅಗತ್ಯಗಳೇ ಇಲ್ಲದ ನಮ್ಮ ಸುತ್ತ ಸಹಜವಾಗಿ ದೊರೆಯುವ ಪರಿಕರಗಳನ್ನು ಬಳಸಿ ಮನರಂಜನೆಯನ್ನು ಪಡೆಯುತ್ತಿದ್ದ ಆಟಗಳನ್ನು ಆಡಿಸಲಾಗುತ್ತಿದೆ. ಮನಸ್ಸಿಗೆ ಸಂತಸ ತುಂಬುವ ಗ್ರಾಮೀಣ ಆಟಗಳತ್ತ ಈ ತಲೆಮಾರಿನ ಮಕ್ಕಳನ್ನು ತೊಡಗಿಸುವ ಉದ್ದೇಶದಿಂದ ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕದಲ್ಲಿ ಗ್ರಾಮೀಣ ಆಟಗಳ ಉತ್ಸವ ಸ್ಪರ್ಧೆಹಾಗೂ ಪ್ರದರ್ಶನಗಳನ್ನು ಹಮ್ಮಿಕೊಳ್ಳುಲಾಗಿದೆ. ಕೆಲವು ಆಯ್ದ ಆಟಗಳಿಗೆ ನಗದು ಬಹುಮಾನ, ಒಂದೇ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿಹೆಚ್ಚು ಅಂಕ ಪಡೆದರೆ ಪರ್ಯಾಯ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸುತ್ತಿದೆ. ಆಸಕ್ತ ಮಕ್ಕಳನ್ನು ಶಿಕ್ಷಕರು, ಪೋಷಕರುಗ್ರಾಮೀಣ ಆಟಗಳ ಸ್ಪರ್ಧೆಗಳಲ್ಲಿ ಭಾಗವಹಿಸಲು ಪೋತ್ಸಾಹಿಸಲು ಕರ್ನಾಟಕ ಜಾನಪದ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 7795632294, 8197037299, 7975661363 ಸಂಪರ್ಕಿಸಲು ಕೋರಲಾಗಿದೆ. ವಯಸ್ಸಿನ ದಾಖಲೆಗಾಗಿ ಕಡ್ಡಾಯವಾಗಿ ಆಧಾರ್ ಕಾರ್ಡ್ ತರುವುದು.
ಗ್ರಾಮೀಣ ಆಟಗಳ ಸ್ಪರ್ಧೆಗಳು
ಅಣ್ಣೆಕಲ್ಲಾಟ:13 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ,ಕುಂಟೋಬಿಲ್ಲೆ :13 ರಿಂದ 16 ವರ್ಷದ ಹೆಣ್ಣು ಮಕ್ಕಳಿಗೆ
ಲಗೋರಿ ಚಂಡು: 13 ವರ್ಷದ ಒಳಗಿನ ಗಂಡುಮಕ್ಕಳಿಗೆ ಚಿನ್ನಿದಾಂಡು: 15 ರಿಂದ 35 ವರ್ಷದ ಯುವಕರಿಗೆ
ಚಕ್ರಬಂಡಿ ಹೊಡೆಯುವ ಆಟ:13 ರಿಂದ 20 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಹಾಗೂ 16 ರಿಂದ 25 ವರ್ಷದ ಒಳಗಿನ ಗಂಡು ಮಕ್ಕಳಿಗೆ
ಹಗ್ಗ ಜಗ್ಗಾಟ: 16 ರಿಂದ 20 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆಹಾಗೂ 16 ರಿಂದ 25 ವರ್ಷದ ಒಳಗಿನ ಗಂಡುಮಕ್ಕಳಿಗೆ
ಪ್ರದರ್ಶನ ಆಟಗಳು
ರತ್ತೋರತ್ತೋ ರಾಯನ ಮಗಳೆ, ಕಣ್ಣಾಮುಚ್ಚಾಲೆ, ಬಳೆಚೂರಾಟ, ಗೋಲಿ ಆಟ, ಬುಗುರಿ ಆಟ, ಚೌಕಾಬಾರ, ಅಳಿಗುಳಿಮನೆ, ಕಲ್ಲುಕುಟ್ಕುಟ
