ದೊಡ್ಡಗಂಗವಾಡಿ ಗ್ರಾಮದ ಡಿ.ವಿ. ಪರಿಣಿತಮೂರ್ತಿ ಅವರಿಗೆ ‘ವಚನ ಕೋಗಿಲೆ ಪ್ರಶಸ್ತಿ’

ರಾಮನಗರ : ತಾಲ್ಲೂಕಿನ ಕೂಟಗಲ್ ಹೋಬಳಿಯ ದೊಡ್ಡಗಂಗವಾಡಿ ಗ್ರಾಮದ ಡಿ.ವಿ. ಪರಿಣಿತ ಮೂರ್ತಿ ಇವರಿಗೆ ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ನೀಡುವ ವಚನ ಕೋಗಿಲೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಾಲಮಂಗಲದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ. ಮೈಸೂರಿನ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಡಿ. 25 ರಂದು ಕಾರ್ಯಕ್ರಮ ನಡೆಯಲ್ಲಿದ್ದು, ತರಳುಬಾಳು ಜಗದ್ಗುರು, ಸಾಣೆಹಳ್ಳಿ ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ದಿವ್ಯ ಸಾನಿಧ್ಯದಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ದಿನಚರಿ, ಸಂಚಿಕೆ ಮತ್ತು ಕೃತಿ ಬಿಡುಗಡೆ ಮಾಡುವರು. ಶರಣು ವಚನ ಫೌಂಡೇಷನ್ ಸಂಸ್ಥಾಪಕರಾದ ಡಾ.ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ ಹಾಗೂ ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಾಹಿತಿ ಡಾ. ಅರುಣ ಕುಮಾರ ಚಂದ್ರಶೇಖರ ರಾಜಮಾನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಡಿ.ವಿ. ಪರಿಣಿತಮೂರ್ತಿ ಅವರು ಬಾಳಲಿಂಗೇಗೌಡನದೊಡ್ಡಿ ಶಾಲೆಯ ಶಿಕ್ಷಕ ವೀರೇಶ್‍ಮೂರ್ತಿಯವರ ಪುತ್ರಿ.ಯಾಗಿದ್ದು ಪ್ರತಿಭಾನ್ವಿತ ವಿದ್ಯಾರ್ಥಿನಿಯೂ ಕೂಡ ಆಗಿದ್ದಾರೆ.

Leave a Reply

Your email address will not be published. Required fields are marked *