ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಎಸ್‍ಡಿಪಿಐ ಸಂಘಟನೆ ವತಿಯಿಂದ ಪ್ರತಿಭಟನೆ

ರಾಮನಗರ (hairamanagara.in) : ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಎಸ್.ಡಿ.ಪಿ.ಐ ಸಂಘಟನೆ ವತಿಯಿಂದ ನಗರದ ಭವನ ಮಿನಿ ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿರುವ ಸಂವಿಧಾನ ವಿರೋಧಿ ಮತಾಂತರ ನಿಷೇಧ ಮಸೂದೆಯನ್ನು ತಡೆಯುವಂತೆ ರಾಮನಗರ ತಶೀಲ್ಹಧರ್ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ನಂತರ ವಕೀಲ ಚಾನ್ ಪಾಷಾ ಮಾತನಾಡಿ ಪ್ರಜಾಪ್ರಭುತ್ವ ನಾಶ ಮಾಡಲು, ಸಂವಿಧಾನದ ಮೌಲ್ಯಗಳನ್ನು ಕೊಲೆ ಮಾಡಲು ಹೊರಟಿದೆ ಅಲ್ಲದೆ ಬಿಜೆಪಿಗೆ ಕನ್ನಡ ನಾಡು, ಕನ್ನಡಿಗರು ಅವಕಾಶ ಮಾಡಿ ಕೊಡುವುದಿಲ್ಲ ಕೋಮುವಾದಿ ಬಿಜೆಪಿ ಎಂದು ಆಕ್ರೋಶ ವ್ಯಕ್ಯಪಡಿಸಿದರು.
ಬಿಜೆಪಿಯವರಿಗೆ ಚತುವರ್ಣ ವ್ಯವಸ್ಥೆಯಲ್ಲಿ ನಂಬಿಕೆ ಹೆಚ್ಚು. ಹೀಗಾಗಿಯೇ ಕಾಯ ಇಂಥವುಗಳು ಜಾರಿಗೆ ಬಂದಿವೆ. ಇದರಲ್ಲಿ ಆರ್ ಎಸ್ ಎಸ್ ನ ಹುನ್ನಾರವೂ ಅಡಗಿದೆ. ದಯೆಯೇ ಧರ್ಮದ ಮೂಲ ಎಂದು ಬಸವಣ್ಣ ಅವರು ಹೇಳಿದ್ದಾರೆ. ಆದರೆ, ಅದಕ್ಕೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಮಸೀದಿಗಳ, ಚರ್ಚ್ ಗಳ ಮೇಲೆ ಅನಗತ್ಯವಾದ ದಾಳಿಯಾಗುತ್ತಿದೆ. ಸಿ ಎ ಎ, ಎನ್ ಆರ್ ಸಿ ಅಂತಹ ಕಾಯ್ದೆಗಳ ಮೂಲಕ ಮುಸಲ್ಮಾನರನ್ನು ಸರ್ವನಾಶ ಮಾಡಲು ಹೋರಟಿದೆ ಬಿಜೆಪಿ ಸರ್ಕಾರ ಎಂದು ಆರೋಪಿಸಿದರು.
ನಂತರ ಹಿರಿಯ ದಲಿತ ಮುಖಂಡ ಶಿವಶಂಕರ್ ಮಾತನಾಡಿ ಈ ದೇಶದ ಸಂವಿಧಾನವೇ ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕು ಕೊಟ್ಟಿದೆ. ಪ್ರತಿಯೊಬ್ಬರೂ ಅವರಿಗಿಷ್ಟವಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬಹುದು. ಬಲವಂತ, ಆಮಿಷವೊಡ್ಡಿ ಮತಾಂತರ ಮಾಡಬಾರದು ಎಂದೂ ಹೇಳಿದೆ. ಹೀಗಿರುವಾಗ ರಾಜ್ಯ ಸರ್ಕಾರ ಜನರ ದಿಕ್ಕು ತಪ್ಪಿಸಿ ಕಾಯ್ದೆ ಜಾರಿಗೆ ಹೊರಟಿರುವುದು ಸರಿಯಲ್ಲ,
ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ಖಂಡನಾರ್ಹವಾದುದು. ತನ್ನ ಗುಪ್ತ ಕಾರ್ಯಸೂಚಿ ಪ್ರಕಾರ ಕಾಯ್ದೆ ಜಾರಿಗೆ ಹೊರಟಿದೆ. ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ಒತ್ತು ಕೊಡಬೇಕು. ಜಾನುವಾರು ಹತ್ಯೆ ಪ್ರಬಂಧಕ ಕಾಯ್ದೆ ಕೂಡ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಜೀವಿಕಾ ಸಂಸ್ಥೆಯ ಗೋವಿಂದರಾಜು ಪಟ್ಲು ಮಾತನಾಡಿ ಮತಾಂತರ ನಿಷೇಧ ಜಾರಿಗೆ ತಂದಿರುವ ಸರ್ಕಾರದ ನಿರ್ಧಾರದ ಹಿಂದೆ ದುರುದ್ದೇಶ ಅಡಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರ ಜಾರಿಗೆ ತರಲು ಹೊರಟಿರುವ ಕಾಯಿದೆ ಹಿಂದೆ ಜನರ ಹಿತವೇನೂ ಇಲ್ಲ. ದೇಶದ ಕೋಮು ಸೌಹಾರ್ದ ಹಾಳು ಮಾಡುವುದೇ ಇದರ ಉದ್ದೇಶವಾಗಿದೆ.
ಸಂವಿಧಾನದ ಪ್ರಕಾರ ದೇಶದ ಪ್ರಜೆ ತನ್ನ ಆಸಕ್ತಿ ಹಾಗೂ ಇಚ್ಚೆಗೆ ಸೂಕ್ತವಾದ ಧರ್ಮವನ್ನು ಆರಿಸಿಕೊಳ್ಳುವ, ಪಾಲಿಸುವ ಮತ್ತು ಸಂಭ್ರಮಿಸುವ ಹಕ್ಕು ಇದೆ. ಇದಕ್ಕೆ ವಿರುದ್ಧವಾಗಿ ಸರ್ಕಾರ ಕಾನೂನು, ಕಾಯಿದೆ ತರುವುದು ಸಂವಿಧಾನಬಾಹಿರ. ತಮಗೆ ಬಹುಮತ ಇದೆ ಎನ್ನುವ ಕಾರಣಕ್ಕೆ ಸಂವಿಧಾನದ ಮೇಲೆ ಸವಾರಿ ಮಾಡುವ ಹಾಗೂ ತನಗೆ ಬೇಕಾದ ಕಾಯಿದೆಗಳನ್ನು ಜಾರಿಗೆ ತರುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದಿತ್ತು ಎಂದು ಕಿಡಿಕಾರಿದರು.
ತಮಗೆ ಇಷ್ಟವಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ದೇಶದ ಪ್ರಜೆಗಳಿಗೆ ಇದೆ. ಯಾವುದೋ ಒಂದು ಧರ್ಮವನ್ನು ಆಧಾರವಾಗಿಟ್ಟುಕೊಂಡು ಸಂವಿಧಾನ ರಚನೆ ಮಾಡಿಲ್ಲ. ಸಂವಿಧಾನದಿಂದ ಒಳ್ಳೆಯದು ಆಗಬೇಕು ಎಂದಾದರೆ ಆಡಳಿತ ಒಳ್ಳೆಯವರ ಕೈಯ್ಯಲ್ಲೇ ಇರಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದಾರೆ.
ಸಂದರ್ಭದಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟ ಅಧ್ಯಕ್ಷ ಎಂ.ಜಗದೀಶ್, ಜಿಲ್ಲಾ ಉಪಜಾಗೃತಿ ಸದಸ್ಯ ವೆಂಕಟೇಶ್ ಗುಡ್ಡೆ, ಎಸ್.ಡಿ.ಪಿ.ಐ, ಜಿಲ್ಲಾ ಅಧ್ಯಕ್ಷರು ಶಕೀಲ್, ಅಜಿಜುಲ್ಲಾ ಷರೀಫ್, ಪಿ.ಎಫ್.ಐ ತಾಲ್ಲೂಕು ಅಧ್ಯಕ್ಷರು ಹುಮಯೂನ್, ಎಸ್.ಡಿ.ಪಿ.ಐ ತಾಲೂಕು ಅಧ್ಯಕ್ಷರು ಅಸದುಲ್ಲಾ, ಉಪಾಧ್ಯಕ್ಷರು ಆರೀಫ್, ದಲಿತ ಮುಖಂಡ ರಮೇಶ್, ರೈತ ಸಂಘದ ಕೃಷ್ಣಪ್ಪ, ಪ್ಯಾರುಜಾನ್, ಅಮ್ಜದ್ ಷರೀಫ್, ಮುಂತಾದವರು ಇದ್ದರು.

Leave a Reply

Your email address will not be published. Required fields are marked *