ಸುಗ್ಗನಹಳ್ಳಿಯಲ್ಲಿ ಪೌಷ್ಟಿಕ ಆಹಾರ ಮೇಳ

ರಾಮನಗರ (hairamanagara.in) : ತಾಲೂಕಿನ ಕಸಬಾ ಹೋಬಳಿಯ ಸುಗ್ಗನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಂಗಮ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮ ನಡೆಯಿತು.
ವೈದ್ಯಾಧಿಕಾರಿ ಡಾ. ವರದ ಪ್ರಿಯಾಂಕ ಮಾತನಾಡಿ ಗ್ರಾಮೀಣ ಭಾಗದಲ್ಲಿ ನಮ್ಮ ಹತ್ತಿರದಲ್ಲೇ ಅನೇಕ ಪೌಷ್ಟಿಕಾಂಶ ಆಹಾರ ಪದಾರ್ಥಗಳು ದಿನನಿತ್ಯದೊರೆಯುತ್ತವೆ ಸ್ಥಳೀಯವಾಗೇ ಯಾವುದೇರಾಸಾಯನಿಕ ಬೆರೆಸದೆಕಡಿಮೆಖರ್ಚಿನಲ್ಲಿ ಬೆಳೆಯಬಹುದಾದ ಸೊಪ್ಪು, ಕಾಯಿಪಲ್ಯೆ ಗಿಡಗಳು, ತರಕಾರಿಗಳನ್ನು ನಾವು ಬೆಳೆಬಹುದಾದರೂಅದನ್ನು ನಾವು ಮಾಡುತ್ತಿಲ್ಲಇದರಿಂದ ನಾವು ತಿನ್ನುವಆಹಾರ ಪದಾರ್ಥಗಳಲ್ಲಿ ಪೌಷ್ಟಿಕಾಂಶ ದೊರೆಯುತ್ತಿಲ್ಲಉತ್ತಮಆರೋಗ್ಯ ಹೊಂದಲುಜನರು ಸ್ಥಳೀಯ ಆಹಾರ ಪದಾರ್ಥಗಳ ಬಳಕೆಗೆ ಒತ್ತು ನೀಡಬೇಕುಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನಾಧಿಕಾರಿ ಸೂರ್ಯನಾರಾಯಣ್ ಮಾತನಾಡಿ ಪೌಷ್ಟಿಕಾಂಶ ಆಹಾರ ಪದಾರ್ಥಗಳ ಸೇವನೆಯಿಂದ ಮಕ್ಕಳನ್ನು ಅಪೌಷ್ಟಿಕತೆಯಿಂದಪಾರು ಮಾಡಬಹುದು.ಎಲ್ಲಾತರಹದ ಸೊಪ್ಪು, ಮೊಳಕೆ ಕಾಳು, ಹಣ್ಣುಗಳು, ಕಾಳು, ರಾಗಿ ಮುದ್ದೆ, ರೊಟ್ಟಿ, ಮೊಟ್ಟೆ ಪದಾರ್ಥಗಳನ್ನು ಸರಿಯಾದಆಹಾರಕ್ರಮದಲ್ಲಿಸೇವಿಸಿದರೆ ಪೌಷ್ಟಿಕಾಂಶ ಕೊರತೆಉಂಟಾಗುವುದಿಲ್ಲಇದರಿಂದಉತ್ತಮಆರೋಗ್ಯ ಹೊಂದಲು ಸಾಧ್ಯವಾಗುತ್ತದೆಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಪೌಷ್ಟಿಕಾಂಶ ಪದಾರ್ಥಗಳ, ಹಣ್ಣು, ಮೊಟ್ಟೆ, ಸೊಪ್ಪು, ತರಕಾರಿಗಳನ್ನು ಪ್ರದರ್ಶನಕ್ಕೆಇಡಲಾಗಿತ್ತು.ಸಂಸ್ಥೆಯ ವತಿಯಿಂದಜನರಿಗೆ ಈ ಶ್ರಮಕಾರ್ಡ್‍ಅಗತ್ಯತೆ ಬಗ್ಗೆ ಮಾಹಿತಿ ನೀಡಲಾಯಿತು.
ಜ್ಞಾನವಿಕಾಸ ಸಮನ್ವಯಾಧಿಕಾರಿಚಂದ್ರಮ್ಮ, ಸೇವಾ ಪ್ರತಿನಿಧಿ ಶೋಭಾ, ಪದಾಧಿಕಾರಿಗಳಾದ ಭಾರತಿ, ಮಂಜುಳ, ಪ್ರೇಮ, ಸುಶೀಲಮ್ಮ, ಭಾಗ್ಯ, ಸರಿತಾ, ಶಶಿಕಲಾ, ರಾಧ, ಪಾರ್ವತಮ್ಮಇದ್ದರು

Leave a Reply

Your email address will not be published. Required fields are marked *