ಸೇಕ್ರೇಡ್ ಸಂಸ್ಥೆ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ನೋಟ್ ಬುಕ್ ವಿತರಣೆ
ರಾಮನಗರ (hairamanagara.in) : ತಾಲ್ಲೂಕಿನ ಕೈಲಾಂಚ ಹೋಬಳಿಯ ಇರುಳಿಗರದೊಡ್ಡಿ ಕಾಲೋನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮ್ಕಕಳಿಗೆ ಸೇಕ್ರೇಡ್ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಉಚಿತ ಶಾಲಾ ಬ್ಯಾಗ್, ನೋಟ್‍ಪುಸ್ತಕ, ಲೇಖನ ಸಾಮಗ್ರಿಗಳನ್ನು ಶಾಲೆಯ 35 ಮಕ್ಕಳಿಗೆ ನೀಡಲಾಯಿತು.
ಹುಣಸನಹಳ್ಳಿ ಗ್ರಾಪಂ ಉಪಾಧ್ಯಕ್ಷ ಪುಟ್ಟಸ್ವಾಮಿಮಾತನಾಡಿಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಉಚಿತ ಶಿಕ್ಷಣ ಜೊತೆಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಜೊತೆಗೆ ಸಂಘ ಸಂಸ್ಥೆಗಳೂ ಕೂಡ ಉತ್ತಮ ರೀತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಕೊಡುಗೆ ನೀಡುತ್ತಿವೆ. ಸರ್ಕಾರ ಕೂಡ ಮಕ್ಕಳ ಕಲಿಕೆಗೆ ಉಚಿತ ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡುತ್ತಿದೆ.
ಮಕ್ಕಳು ಈ ದೇಶದ ಆಸ್ತಿಯಾಗಿದ್ದು ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಶಿಕ್ಷಣ ಕೊಟ್ಟಾಗ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗುತ್ತದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಭೋಧನೆ ಮಾಡಿ ದಾನಿಗಳು, ಸಂಘ ಸಂಸ್ಥೆಗಳು, ಸರ್ಕಾರದ ಪ್ರಯೋಜನಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ನೀಡಿ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗಬೇಕಿದೆ ಎಂದು ತಿಳಿಸಿದರು.
ಸೆಕ್ರೇಡ್ ಸಂಸ್ಥೆ ನಿರ್ದೇಶಕಿ ಮೇರಿ ಫಿಲೋಮಿನಾ, ಹುಣಸನಹಳ್ಳಿ ಗ್ರಾಪಂ ಪಿಡಿಓ ಬಿ.ಪಿ. ಕುಮಾರ್, ಅಧ್ಯಕ್ಷೆ ಮಂಜುಳ ವರದರಾಜು, ಸದಸ್ಯರಾದ ಬೈರೇಗೌಡ, ರಾಮಣ್ಣ, ಸುನೀತಾಬಾಯಿ, ಮುತ್ತರಾಜು, ಹೇಮಾವತಿ ನಂಜುಂಡಯ್ಯ, ಗೋಪಾಲ್, ಸೋಮೇಶ್, ಬಿಲ್ ಕಲೆಕ್ಟರ್ ರಾಜೇಶ್, ಮುಖ್ಯಶಿಕ್ಷಕ ಚಂದ್ರಪ್ಪ, ಸಂಸ್ಥೆಯ ರೀಟಾ, ಸ್ಟೆಲ್ಲಾ, ವಿ ಪದ್ಮ, ಪವಿತ್ರ, ಇಂದುಮತಿ ಮುಂತಾದವರಿದ್ದರು.