ನುರಿತ ಮಹಿಳಾ ತರಬೇತುದಾರರಿಂದ ಅರ್ಜಿ : ಆಹ್ವಾನ

ರಾಮನಗರ : ರಾಮನಗರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿನ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆಯ ಕೌಶಲ್ಯ ತರಬೇತಿ ನೀಡಲು (ಕರಾಟೆ/ಜುಡೋ/ಟೈಕ್ವಾಂಡೋ) ಅರ್ಹ ಮತ್ತು ನುರಿತ ಮಹಿಳಾ ತರಬೇತುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿರುತ್ತದೆ.
ಆಯ್ಕೆಯಾದ ತರಬೇತುದಾರರು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಒಂದು ವಾರಕ್ಕೆ 02 ದಿನಗಳಲ್ಲಿ 60 ನಿಮಿಷ ಸಮಯದಂತೆ ಒಟ್ಟು 01 ತಿಂಗಳಿಗೆ 08 ಬೋಧನಾ ಅವಧಿಗಳಲ್ಲಿ ತರಬೇತಿಯನ್ನು ವಿದ್ಯಾರ್ಥಿನಿಯರಿಗೆ ನೀಡುವುದು.
ಪ್ರತಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ತರಬೇತುದಾರರಿಗೆ, ತರಬೇತಿಯ ಅವಧಿಯು ತಾತ್ಕಾಲಿಕವಾಗಿದ್ದು, ಪ್ರತಿ ತಿಂಗಳು 01 ಅವಧಿಗೆ ರೂ. 500/- ರಂತೆ, 08 ಅವಧಿಗೆ ಒಟ್ಟು ರೂ. 4,000/-ಗಳನ್ನು ಮಾಹೆಯಾನ ಪಾವತಿಸಲಾಗುವುದು. ತರಬೇತುದಾರರ ಪ್ರಯಾಣ ವೆಚ್ಚ ಹಾಗೂ ಇತರೆ ವೆಚ್ಚ 01 ಅವಧಿಗೆ ರೂ. 100/- ರಂತೆ 08 ಅವಧಿಗೆ ಒಟ್ಟು ರೂ. 800/-ಗಳನ್ನು ಮಾಹೆಯಾನ ಪಾವತಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, 2ನೇ ಮಹಡಿ, ಜಿಲ್ಲಾ ಪಂಚಾಯತ್ ಭವನ ರಾಮನಗರ ಜಿಲ್ಲೆ ದೂರವಾಣಿ ಸಂಖ್ಯೆ: 9743777959 ನ್ನು ಸಂಪರ್ಕಿಸುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *