ನ್ಯಾಯಾಲಯದ ತೀರ್ಪುಗಳು ಕನ್ನಡ ಭಾಷೆಯಲ್ಲಿರಲಿ : ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಆಂಜನಪ್ಪ ಆಗ್ರಹ
ರಾಮನಗರ (hairamanagara.in) : ಕರ್ನಾಟಕ ನ್ಯಾಯಾಲಯಗಳಲ್ಲಿ ಯಾವುದೇ ವ್ಯಾಜ್ಯಗಳನ್ನು ತೀರ್ಪೂ ನೀಡಬೇಕಾರೆ ಆಂಗ್ಲ ಭಾಷೆಯಲ್ಲಿ ತೀರ್ಪೂ ನೀಡುತ್ತಿದ್ದು, ಕೂಡಲೇ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ನ್ಯಾಯಾಲಯವು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಇನ್ನು ಮುಂದೆ ಕನ್ನಡಲ್ಲೇ ತೀರ್ಪೂ ನೀಡುವ ಆದೇಶ ಮಾಡಲಿ ಎಂದು ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಆಂಜನಪ್ಪ ಆಗ್ರಹಿಸಿದರು.
ಹಾರೋಹಳ್ಳಿ ಇಂಡಸ್ಟ್ರೀಯಲ್ ಏರಿಯದಲ್ಲಿ ಕರ್ನಾಟಕ ಕಸ್ತೂರಿ ರಕ್ಷಣಾ ಸೇನೆ ವತಿಯಿಂದ 66ನೇ ಕನ್ನಡ ರಾಜ್ಯೊತ್ಸವ ಮತ್ತು ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೇ ಅಂಗವಾಗಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ನ್ಯಾಯಲಯಗಳಲ್ಲಿ ತೀರ್ಪೂ ನೀಡಬೇಕಾದರೆ ಕನ್ನಡವೇ ಮೂಲಕ ತೀರ್ಪೂ ನೀಡಬೇಕೆಂದು ನಿಯಮ ಮಾಡಲಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆ ಕಾಮಗಾರಿ ಬಗ್ಗೆ ರಾಜ್ಯ ಸರ್ಕಾರ ಎಚ್ಚೆತ್ತು ಕೋಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೇಕೆದಾಟು ಯೋಜನೆ ಕಾಮಗಾರಿ ನಿರ್ಮಾಣ ಮಾಡುವವರೆಗೂ ಹೋರಟ ನಿಲ್ಲದು ಎಂದು ಎಚ್ಚರಿಸಿದರು.
ಕನ್ನಡ ಸಿನಿಮಾ ರಂಗಕ್ಕೆ ಪುನೀತ್ ರಾಜ್ ಕುಮಾರ್ ತನ್ನದೆ ಆದ ನಟನೆಯ ಮೂಲಕ ಬೆಳಕು ಚೆಲ್ಲಿದ್ದಾರೆ ಅವರ ನೆನಪು ಆಜರಾಮರವಾಗಿದೆ ಎಂದರು.
ಮಾರುತಿ ಪ್ರೀಸ್ಟಿಸ್ಸ್ ಕಂಪನಿ ಮಾಲೀಕರಾದ ಸಿ.ಆರ್ ನಾರಾಯಣ್, ಮಾತನಾಡಿದ ಪುನೀತ್ ಅವರು ರಕ್ತದಲ್ಲೇ ಅವರಿಗೆ ಬಂದಿದೆ ಎನ್ನುವುದು ಪ್ರತೀ ಬಾರಿ ಅವರ ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕ ಹೇಳುವ ಮಾತು. ತಂದೆಯ ಸಿನಿಮಾದಲ್ಲೇ ಬಾಲ್ಯ ನಟನಾಗಿ ಚಿತ್ರೋದ್ಯಮದಲ್ಲಿ ಬೆಳೆದು ಪ್ರೀತಿಯಿಂದ ‘ಅಪ್ಪು’ ಎಂದು ಕರೆಯಲ್ಪಡುತ್ತಿದ್ದ ಪುನೀತ್ ನಮ್ಮಗಲಿದ್ದಾರೆ ಎನ್ನುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾದ ಮಾತಗಿದೆ ಎಂದರು.
ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜ್ಕುಮಾರ್ ಅವರು ಚಿಕ್ಕ ವಯಸ್ಸಿನಲ್ಲೇ ದೊಡ್ಡಸಾಧನೆ ಮಾಡಿ ಕನ್ನಡ ಚಿತ್ರರಂಗದ ಜೊತೆಗೆ ಸಮಾಜ ಸೇವೆಯಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಎಲೆಮರೆಕಾಯಿಯಂತೆ ಅನಾಥಾಶ್ರಮ, ವೃದ್ಧಾಶ್ರಮ, ಶಾಲೆಗಳನ್ನು ನಡೆಸುತ್ತಾ ಬಂದಿದ್ದರು. ಜೊತೆಗೆ ನೇತ್ರ ದಾನದ ಬಗ್ಗೆ ರಾಜ್ಯದಲ್ಲಿ ಅರಿವು ಮೂಡಿಸುವ ಜೊತೆಗೆ ತಾವೂ ನೇತ್ರದಾನ ಮಾಡಿ ಹಲವರಿಗೆ ಪ್ರೇರೇಪಣೆಯಾಗಿದ್ದರು. ಅವರ ನಿಧನ ಚಿತ್ರರಂಗಕ್ಕೆ ತುಂಬಲಾಗದ ನಷ್ಠ ಉಂಟಾಗಿದೆ ಎಂದು ಹೇಳಿದರು.
ಬಾಲನಟನಾಗಿ ಚಿತ್ರರಂಗ ಪ್ರವೇಶ ಮಾಡಿದ ಪುನೀತ್ ಅವರು ಬಾಲ್ಯದಲ್ಲೇ ನಟನೆಗೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಕನ್ನಡ ನಾಡು ನುಡಿಯ ವಿಚಾರದಲ್ಲಿ ಮುಂದೆ ನಿಲ್ಲುತ್ತಿದ್ದರು ಅವರನ್ನು ಕಳೆದುಕೊಂಡು ನಾಡು ಅನಾಥವಾಗಿದೆ.
ಪುನೀತ್ ರಾಜ್ಕುಮಾರ್ ಅವರು ಪ್ರಚಾರ ಬಯಸದೆ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದರು. ಅವರು 26 ಅನಾಥಾಶ್ರಮಗಳು, 45 ಉಚಿತ ಶಾಲೆಗಳು, 16 ವೃದ್ಧಾಶ್ರಮಗಳು, 19 ಗೋಶಾಲೆ, 1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿಧಾಮ ಹೆಸರಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದರು.
ಈ ಸಂದರ್ಭದಲ್ಲಿ ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ಗೌರವಧ್ಯಕ್ಷರು ಕೃಷ್ಣಪ್ಪ ಎ.ಎಸ್.ಐ ಹಾರೋಹಳ್ಳಿ ಪೊಲೀಸ್ ಠಾಣೆ ಪ್ರಭುಸ್ವಾಮಿ, ವೆಂಕಟೇಶ್ ಜಿಲ್ಲಾಧ್ಯಕ್ಷರು ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ, ವೆಂಕಟರಮಣ ಜಿಲ್ಲಾಧ್ಯಕ್ಷರು ಕರ್ನಾಟಕ ಕಾರ್ಮಿಕ ಸೇನೆ, ಗಿರೀಶ್.ಕೆ ಜಿಲ್ಲಾಧ್ಯಕ್ಷರು ಕಾರ್ಮಿಕ ಘಟಕ , ಬೈರಾಜು ಸಂಘಟನ ಕಾರ್ಯದರ್ಶಿ, ಶಿವಕುಮಾರ್ ತಾಲೂಕು ಅಧ್ಯಕ್ಷರು ಕನಕಪುರ, ಸಂಘಟನೆಯ ಮುಖಂಡರುಗಳಾದ ಬಸವರಾಜು, ಟಿ.ಜೆ.ರವಿ (ಜೋಳಿ), ಹರೀಶ್ ಹಾಜರಿದ್ದರು.




