ಪ್ರಧಾನ ಮಂತ್ರಿಯವರ ಉದ್ಯೋಗ ಸೃಜನ ಯೋಜನೆ
ರಾಮನಗರ : ರಾಮನಗರ ಜಿಲ್ಲೆಯ ನಿರುದ್ಯೋಗಿ ಯುವಕ/ಯುವತಿಯರು, ಕುಶಲಕರ್ಮಿಗಳ ಸೇವಾ ಘಟಕಗಳ ಸ್ಥಾಪನೆಗೆ ಬ್ಯಾಂಕ್‍ಗಳ ಮೂಲಕ ಆರ್ಥಿಕ ನೆರವು ಹಾಗೂ ಸಹಾಯಧನ ಒದಗಿಸಲು “ಪ್ರಧಾನ ಮಂತ್ರಿಯವರ ಉದ್ಯೋಗ ಸೃಜನ ಯೋಜನೆ (PMEGP) ” ಅಡಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಡಿಸೆಂ¨ರ್ 29.12.2021 ರಂದು ಬೆಳಿಗ್ಗೆ: 11.00 ಘಂಟೆಗೆ ಬಿಡದಿ ಕೈಗಾರಿಕಾ ಪ್ರದೇಶ ಅಬ್ಬನಕುಪ್ಪೆ ಕಾಲೋನಿಯಲ್ಲಿ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ದಿನಾಂಕ: 30.12.2021 ರಂದು ಬೆಳಿಗ್ಗೆ: 10.30ಕ್ಕೆ ರಾಮನಗರ ಜಿಲ್ಲೆಯ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆ ವಿವೇಕಾನಂದ ನಗರದಲ್ಲ್ಲಿ ಆಯೋಜಿಸಲಾಗಿದೆ.
ಹೆಚ್ಚಿನ ಜನರು ಕಾರ್ಯಕ್ರಮದÀಲ್ಲಿ ಭಾಗವಹಿಸಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಗೂ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸದರಿ ಕಛೇರಿಯನ್ನ ಸಂಪರ್ಕಿಸತಕ್ಕದ್ದು.