ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೃಷ್ಣ ಅವರಿಗೆ ಗೆಲುವಿನ ವಿಶ್ವಾಸ
ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿ ಬನ್ನಿಕುಪ್ಪೆ (ಬಿ) ಗ್ರಾಮ ಪಂಚಾಯತಿಯ ಮುತ್ತುರಾಯನಗುಡಿ ಪಾಳ್ಯ ವಾರ್ಡ್ ಗೆ ಸೋಮವಾರ ನಡೆದ ಚುನಾವಣೆ ವೇಳೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಕೆ.ಕೃಷ್ಣ ಅವರು ತಮ್ಮ ಬೆಂಬಲಿಗರು ಹಾಗೂ ಮುತ್ತುರಾಯನಗುಡಿ ಪಾಳ್ಯ, ಸಿದ್ದಭೋವಿಪಾಳ್ಯ, ಮರಳೇಗೌಡನದೊಡ್ಡಿ ಮುಖಂಡರೊಂದಿಗೆ ಮತಗಟ್ಟೆ ಸಮೀಪ ಕಾಣಿಸಿಕೊಂಡು ತಮ್ಮ ಗೆಲುವು ಖಚಿತ ಎಂದು ತಿಳಿಸಿದರು.