‘ಬೀದಿ ಬದಿ ವ್ಯಾಪಾರಿಗಳ ರಕ್ಷಣೆ – ಜೀವನೋಪಾಯ’ ಕುರಿತಂತೆ ಕಾರ್ಯಾಗಾರ

ರಾಮನಗರ: ‘ಬೀದಿ ಬದಿ ವ್ಯಾಪಾರಿಗಳ ರಕ್ಷಣೆ ಮತ್ತು ಜೀವನೋಪಾಯ’ ಕುರಿತಂತೆ
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ರಾಮನಗರ ನಗರಸಭೆ ಜಂಟಿಯಾಗಿ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ನಗರದ ಅರ್ಚಕರಹಳ್ಳಿಯಲ್ಲಿ ಇರುವ ಕೌಶಲ್ಯಾಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಬೀದಿ ಬದಿ ವ್ಯಾಪಾರಿಗಳ ರಕ್ಷಣೆ ಮತ್ತು ಜೀವನೋಪಾಯ, ಸಾಮಾಜಿಕ ಭದ್ರತಾ ಯೋಜನೆ, ವಿವಿಧ ಇಲಾಖೆ ಹಾಗೂ ಬ್ಯಾಂಕ್ ಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಿಗುವ ಸಾಲ ಸವಲತ್ತು, ವಯಕ್ತಿಕ ಸ್ವಚ್ಛತೆ ಹಾಗೂ ಕುಟುಂಬದ ಆರೋಗ್ಯ, ಬೀದಿ ಬದಿ ವ್ಯಾಪಾರಿಗಳ ಬಗೆಗಿನ ಕಾನೂನು-ಕಾಯ್ದೆಗಳ ಅರಿವು ಸೇರಿದಂತೆ ಮೂಲಭೂತ ವಿಚಾರಗಳನ್ನು ಆಪ್ತ ಸಂವಾದದ ಮೂಲಕ ಸಂಪನ್ಮೂಲಗಳ ವ್ಯಕ್ತಿಗಳು ಫಲಾನುಭವಿಗಳಿಗೆ ವಿವರವಾಗಿ ತಿಳಿಸಿಕೊಟ್ಟರು.
ನಗರಸಭೆ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ,ನಗರಸಭೆ ಪೌರಾಯುಕ್ತ ನಂದಕುಮಾರ್, ನಗರಸಭೆ ವ್ಯವಸ್ಥಾಪಕ ಡಿ.ನಟರಾಜೇಗೌಡ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಂಜುನಾಥ್, ಎಇಇ ಸುಬ್ರಹ್ಮಣ್ಯ,
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಾಯಕ ನಿರ್ದೇಶಕಿ ಸಿ.ಎನ್. ಲತಾ, ಜಿಲ್ಲಾ ಅಭಿಯಾನ ವ್ಯವಸ್ಥಾಪಕ ಸಿ.ರಾಮಕೃಷ್ಣ, ಸಹಾಯಕ ಸಾಂಖ್ಯಿಕ ಅಧಿಕಾರಿ ಎ.ಎಸ್.ಕುಮಾರ್, ವಿವೇಕಾನಂದ ನಗರ ಮಟ್ಟದ ಒಕ್ಕೂಟದ ಅಧ್ಯಕ್ಷೆ ಸರಸ್ವತಿ ರಂಗಸ್ವಾಮಿ, ಎನ್ ಜಿಒ ಪ್ರತಿನಿಧಿಗಳಾದ ಕೆ.ರಾಜೀವ್,ಎನ್.ಎಸ್.ಸಿದ್ದರಾಜು, ಸೈಯದ್ ಇಮ್ರಾನ್, ಪಟ್ಟಣ ಮಾರಾಟ ಸಮಿತಿ ಸದಸ್ಯರಾದ ಬೈರಲಿಂಗಯ್ಯ, ಮಹದೇವಯ್ಯ, ಶ್ರೀನಿವಾಸ್, ಬಾಬು, ಯಲ್ಲಪ್ಪ, ಚಿಕ್ಕತಾಯಮ್ಮ, ವಿಜಯಮ್ಮ, ಹಿಂದುಳಿದ ವರ್ಗಗಳ ಮುಖಂಡ ಆರ್.ರಂಗಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಂಣಣಚಿಛಿhmeಟಿಣs ಚಿಡಿeಚಿ

Leave a Reply

Your email address will not be published. Required fields are marked *