22 ವಿಧಾನ ಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಮತದಾರರೆ ನಿರ್ಣಾಯಕ : ಸಚ್ಚಿದಾನಂದ ಮೂರ್ತಿ

ಮಾಗಡಿ : 22 ವಿದಾನ ಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಸಮೂದಾಯದ ಮತದಾರರೆ ನಿರ್ಣಾಯಕ ಪಾತ್ರ ವಹಿಸಲಿದ್ದು ಬ್ರಾಹ್ಮಣರು ಒಗ್ಗಟ್ಟಾದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಲಿ ಅಧ್ಯಕ್ಷ ಹೆಚ್.ಎಸ್. ಸಚ್ಚಿದಾನಂದ ಮೂರ್ತಿ ಹೇಳಿದರು.
ಪಟ್ಟಣದ ಶ್ರೀರಾಮಮಂದಿರದಲ್ಲಿ ತಾಲೂಕು ಬ್ರಾಹ್ಮಣ ಅಭಿವೃದ್ದಿ ಸಮಿತಿ ಉದ್ಘಾಟನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ಜನಗಣತಿ ಮಾಡಿದಾಗ ಬ್ರಾಹ್ಮಣ ಎಂದು ನಮೂದು ಮಾಡದೆ ಉಪಜಾತಿ ಹೆಸರನ್ನು ಬರೆದಿರುವ ಕಾರಣ ನಮ್ಮ ಜನಾಂಗದ ಜನಸಂಖ್ಯೆ ಕಡಿಮೆಯಾಗಿದೆ ರಾಜ್ಯದಲ್ಲಿ 43 ಲಕ್ಷ ಬ್ರಾಹ್ಮಣ ಜನಸಂಖ್ಯೆಯಿದೆ 44 ಉಪಪಂಗಡಗಳನ್ನಾಗಿ ವಿಂಗಡನೆ ಮಾಡಿರುವುದರಿಂದಲೇ ಜನಸಂಖ್ಯೆ ಕಡಿಮೆ ತೋರಿಸುತ್ತಿದೆ, ಮತ್ತೊಮ್ಮೆ ಜನಗಣತಿಯನ್ನು ನಮ್ಮ ಜನಾಂಗದೆ ಪ್ರತ್ಯೇಕ ಜಾತಿ ಗಣತಿ ಮಾಡಬೇಕೆಂದು ಮನವಿ ಮಾಡಿದ್ದೇವೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬ್ರಾಹ್ಮಣ ಅಭಿವೃದ್ದಿ ಮಂಡಲಿ ರಚನೆ ಮಾಡಿ ಅನುದಾನ ಕೊಟ್ಟಿದ್ದಾರೆ. ಆದರೆ ಸರ್ಕಾರದ ಹಂತದಲ್ಲಿ ನೊಂದಾಣಿ ಇಲ್ಲದ ಕಾರಣ ಸೌಲಭ್ಯಗಳನ್ನು ಪಡೆಯಲು ಆಗಿಲ್ಲ, ಕೊರೊನ ಸಂದರ್ಭದಲ್ಲಿ ಪುರೋಹಿತರು, ಅಡುಗೆ ಭಟ್ಟರು ಹಾಗೂ ಬಡ ಬ್ರಾಹ್ಮಣ ಕುಟುಂಬಕ್ಕೆ ಸೌಲಭ್ಯ ಕೊಡಲು ಅಂಕಿಯೇ ಸರ್ಕಾರದ ಬಳಿಯಿಲ್ಲ ಹೇಗೆ ಇವರನ್ನು ಗುರುತಿಸುವುದು ಎನ್ನುವುದೇ ದೊಡ್ಡ ಸಮಸ್ಯೆಯಾಗಿತ್ತು, ಈಗ ರಾಜ್ಯಾಧ್ಯಂತ ಸಂಚಾರ ಮಾಡಿ ಅಭಿವೃದ್ದಿ ಸಮಿತಿ ಮೂಲಕ ಅವರನ್ನು ಗುರುತಿಸುವ ಕೆಲಸ ಮಾಡಿದ್ದು ನಾವೆಲ್ಲಾರೂ ಒಗ್ಗಟ್ಟಾದಾಗ ಮಾತ್ರ ಸೌಲಭ್ಯಗಳನ್ನು ಪಡೆಯಬಹುದೆಂದು ತಿಳಿಸಿದರು.
ಸಂಸ್ಕಾರ ಬಿಡಬಾರದು : ಬ್ರಾಹ್ಮನ ಸಮೂದಾಯದವರು ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿ ಇದ್ದೇವೆ, ನಮ್ಮನ್ನು ಎತ್ತರದ ಸ್ಥಾನದಲ್ಲಿ ನೋಡಲು ಬಯಸುತ್ತಾರೆ, ಬ್ರಾಹ್ಮಣ್ಯತ್ವವನ್ನು ಉಳಿಸಿಕೊಂಡು ಸಂಸ್ಕಾರವನ್ನು ಬಿಡಬಾರದು, ದೇಶದ ಅತ್ಯಂತ ಉನ್ನತವಾದ ಐಎಎಸ್, ಐಪಿಎಸ್ ಎಂಬ ಹುದ್ದೆಗಳಲ್ಲಿ ಅತೀ ಹೆಚ್ಚು ನಮ್ಮ ಜನಾಂಗದವರೆ ಇದ್ದು ದೇಹಲಿಯಲ್ಲಿ ಚಾಣ್ಯಕ ಎಂಬ ಹೆಸರಿನಲ್ಲಿ ಐಪಿಎಸ್ ತರಬೇತಿ ಕೊಡುತ್ತಿದ್ದು ಅತೀ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಈಗ ಬೇರೆ ಬೇರೆ ಜಿಲ್ಲೆಗಳಲ್ಲಿ ಡಿಸಿಯಾಗಿ ಕಾರ್ಯ ನಿರ್ವಹಿಸುತ್ತಾರೆ, ಕೇಂದ್ರ ಸರ್ಕಾರ ನಮ್ಮ ಜನಾಂಗಕ್ಕೆ ಕೇವಲ 10 ರಷ್ಟು ಮೀಸಲಾತಿ ತಂದಿದ್ದು ಇದರ ಸೌಲಭ್ಯವನ್ನು ನಾವು ಪಡೆಯಬೇಕು, ಮಾಗಡಿಯಲ್ಲಿರುವ ಶ್ರೀರಾಮಮಂದಿರ ಕಟ್ಟಡದ ದುರಸ್ಥಿತಿಗೆ ಅಭಿವೃದ್ದಿ ಮಂಡಲಿಯಿಂದ ಹಣ ಕೊಡುವುದಾಗಿ ಭರವಸೆ ನೀಡಿದರು.
ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಬ್ರಾಹ್ಮಣರು ಅಲ್ಪ ಸಂಖ್ಯಾತರಾಗಿ ಹೋಗುತ್ತಿದ್ದಾರೆ, ಯಾವುದೇ ಅನುದಾನವನ್ನು ಬಳಸಿಕೊಳ್ಳಲು ಮುಂದೆ ಬರುತ್ತಿಲ್ಲ, ತ್ರಿಮಸ್ತರು ಒಂದೆ ಎಂಬ ಭಾವನೆಯನ್ನು ಬೆಳೆಸಿಕೊಂಡು ಒಗ್ಗಟ್ಟಾಗಿ ಇರಬೇಕು, ಎಷ್ಟೆ ಕೆಲಸದ ಒತ್ತಡವಿದ್ದರೂ ಸಂಧ್ಯಾವಂದನೆ ಹಾಗೂ ಹಿರಿಯರ ಕಾರ್ಯವನ್ನು ತಪ್ಪದೆ ಮಾಡಬೇಕು, ಆಗ ಮಾತ್ರ ಏಳಿಗೆ ಆಗಲು ಸಾಧ್ಯ, ನಾವು ತೆರಿಗೆ ಕಟ್ಟುವುದರಿಂದ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಬೇಕಿದೆ ಎಂದು ತಿಳಿಸಿದರು.
ತಾಲೂಕು ಬ್ರಾಹ್ಮಣ ಅಭಿವೃದ್ದಿ ಸಮಿತಿ ಅಧ್ಯಕ್ಷ ಗೋಪಾಲದೀಕ್ಷಿತ್ ಮಾತನಾಡಿ, ಸಮಿತಿ ರಚನೆ ಮಾಡಿರುವುದು ಸಂಘಟನೆ ಮಾಡುವುದೇ ಮೂಲಮಂತ್ರವಾಗಿ ಇಟ್ಟಿಕೊಂಡಿದ್ದು 500 ಕ್ಕೂ ಹೆಚ್ಚು ಬ್ರಾಹ್ಮಣ ಸದಸ್ಯರನ್ನು ನೊಂದಾವಣಿ ಮಾಡಿದ್ದು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೊಡಿಸಲಾಗಿದೆ, ಸಮಿತಿ ಮೂಲಕ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದೇವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ರಾಹ್ಮಣ ಅಭಿವೃದ್ದಿ ಮಂಡಲಿ ನಿರ್ದೇಶಕಿ ವತ್ಸಲ ನಾಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಯ್ಯ ಮಾತನಾಡಿದರು, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅತ್ಯುತ್ತಮ ಕ್ರೀಡಾ ವರದಿಗೆ ಕೆ.ಎ.ನೆಟ್ಟಕಲಪ್ಪ ಪ್ರಶಸ್ತಿಗೆ ಆಯ್ಕೆಯಾಗಿರುವ ತಿಪ್ಪಸಂದ್ರ ಹೋಬಳಿಯ ವರದಿಗಾರ ಪದ್ಮನಾಭ್ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ರಘುನಾಥ್, ತಾಲೂಕು ಅರ್ಚಕ ಮತ್ತು ಪುರೋಹಿತ ಸಮಿತಿ ಅಧ್ಯಕ್ಷ ರಂಗನಾಥ್, ತಾಲೂಕು ಬ್ರಾಹ್ಮಣ ಅಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಪದ್ಮಜಗನ್ನಾಥ್, ಪ್ರಾಣೇಶ್ ರಾವ್, ಕಾರ್ಯದರ್ಶಿ ವೆಂಕಟೇಶ್ ಮೂರ್ತಿ, ಖಜಾಂಚಿ ನಾಗರಾಜು, ಜಂಟಿ ಕಾರ್ಯದರ್ಶಿ ಸತ್ಯನಾರಾಯಣ್, ಚಕ್ರಬಾವಿ ಸುಧೀಂದ್ರ, ಪ್ರಭು, ಚಂದ್ರುಶೇಖರ್, ನರಹರಿ,ಲಕ್ಷ್ಮಿನಾರಾಯಣ್, ದೀಪಾ ಕೃಷ್ಣ, ಹರೀಶ್, ವಿನಯ್, ಹಾಗೂ ಮಾತಾ ಮಹಿಳಾ ಮಂಡಲಿಯ ಸದಸ್ಯರುಗಳು ಹಾಗೂ ತಾಲೂಕಿನ ವಿಪ್ರ ಭಾಂದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *