ಅಣ್ಣಹಳ್ಳಿಯಲ್ಲಿ ಮಿಶ್ರತಳಿ ಕರುಗಳ ಪ್ರದರ್ಶನ
ರಾಮನಗರ : ರಾಸುಗಳಿಗೆ ಕಾಲ ಕಾಲಕ್ಕೆ ಸರಿಯಾದ ಚಿಕಿತ್ಸೆ, ಗುಣಮಟ್ಟದ ಆಹಾರ ನೀಡಿ ಉತ್ತಮ ಆರೈಕೆ ಮಾಡಿದಾಗ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ತಾಲ್ಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಅಸಾದುಲ್ಲಾ ಷರೀಫ್ತಿಳಿಸಿದರು.
ರಾಮನಗರ ಜಿಲ್ಲಾ ಪಂಚಾಯತ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ರಾಮನಗರ, ಹಾಲು ಉತ್ಪಾದಕರ ಸಹಕಾರ ಸಂಘ ಅಣ್ಣಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಡೈರಿ ಆವರಣದಲ್ಲಿ ನಡೆದ ಮಿಶ್ರತಳಿ ಕರುಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾನುವಾರುಗಳಿಗೆ ಸಮತೋಲನ ಆಹಾರ ನೀಡಿ ಉತ್ತಮ ಆರೈಕೆ ಮಾಡಿದಾಗ ಉತ್ತಮ ಕರುಗಳು ಜನಿಸಲು ಸಾದ್ಯ ಜನಿಸಿದ ಕರುಗಳಿಗೆ ಹೆಚ್ಚಿನ ಹಾಲು ನೀಡಬೇಕು. ಜೊತೆಗೆ ಕರುಗಳಿಗೆ ಸಿಗುವ ಉತ್ತಮ ಪೌಷ್ಟಿಕಾಂಶ ಪದಾರ್ಥಗಳ ಆಹಾರಗಳನ್ನು ನೀಡಿದಾಗ ಕರುಗಳು ಉತ್ತಮ ಬೆಳವಣಿಗೆ ಕಾಣುತ್ತವೆ ಇದರಿಂದ ಮುಂದೆ ಅವುಗಳು ಸಮಯಕ್ಕೆ ಸರಿಯಾಗಿ ಗರ್ಭಧರಿಸಿಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ತರುತ್ತವೆ ಕರುಗಳ ಪಾಲನೆಗೆ ಹೆಚ್ಚು ಒತ್ತು ನೀಡಿ ಎಂದು ತಿಳಿಸಿದರು.
ಕರುಗಳ ಪ್ರದರ್ಶನದಲ್ಲಿ ಸುಮಾರು 80 ಕ್ಕೂ ಹೆಚ್ಚಿನ ಕರುಗಳು ಭಾಗವಹಿಸಿದ್ದವು ಉತ್ತಮ ಸಾಕಣೆ ಮಾಡಿದ ಕರುಗಳಿಗೆ ಬಹುಮಾನ ನೀಡಲಾಯಿತು.
ಪಶುವೈದ್ಯರಾದ ಡಾ. ನಾಗರಾಜು, ಡಾ. ನಜೀರ್, ಡಾ. ನಾಗೇಶ್, ಡಾ. ಅಜಯ್, ಡೈರಿ ಕಾರ್ಯದರ್ಶಿ ರಾಜಕುಮಾರ್ ಇದ್ದರು.