ಅರಳಾಪುರ ಸುತ್ತ ರೈತರ ಪಂಪ್ ಸೆಟ್ ಗೆ ಕನ್ನ, ಬೆಲೆಬಾಳುವ ಎಲೆಕ್ಟ್ರಿಕ್ ವಸ್ತು – ಕಾಪರ್ ವೈಯರ್ ಕದಿಯುತ್ತಿರುವ ಖದೀಮರು

ಚನ್ನಪಟ್ಟಣ : ಕಳೆದ ಇಪ್ಪತ್ತು ದಿನಗಳಿಂದ ಸತತವಾಗಿ ರೈತರ ಕೃಷಿಪಂಪ್ ಸೆಟ್ ಗಳಲ್ಲಿನ ಬೆಲೆಬಾಳುವ ಎಲೆಕ್ಟ್ರಿಕ್ ವಸ್ತುಗಳು ಹಾಗೂ ಕಾಪರ್ ವೈಯರ್ ಗಳನ್ನ ಖದೀಮರು ಕಳ್ಳತನ ಮಾಡುತ್ತಿದ್ದಾರೆ.

ತಾಲೂಕಿನ ಅರಳಾಪುರ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಾದ ಬೇವೂರು ಮಂಡ್ಯ, ಬೊಮ್ಮನಾಯಕನಹಳ್ಳಿ, ಕುರಿದೊಡ್ಡಿ, ಹೊಸೂರುದೊಡ್ಡಿ ಗ್ರಾಮದಲ್ಲಿನ ರೈತರ ಕೃಷಿಪಂಪ್ ಸೆಟ್ ಗಳಲ್ಲಿನ ವಸ್ತುಗಳನ್ನ ಕಳ್ಳರು ಕಳ್ಳತನ ಮಾಡ್ತಿದ್ದಾರೆ. ಪ್ರಮುಖವಾಗಿ ಅರಳಾಪುರ ಗ್ರಾಮದ 20 ಕ್ಕೂ ಹೆಚ್ಚು ರೈತರ ತೋಟದಲ್ಲಿದ್ದ ಬೋರ್ ವೆಲ್ ನಲ್ಲಿನ ಎಲೆಕ್ಟ್ರಿಕ್ ವಸ್ತುಗಳನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ.

ಚನ್ನಪಟ್ಟಣದ ಗಡಿಗ್ರಾಮಗಳಾಗಿರುವ ಹಿನ್ನೆಲೆ ಈ ಭಾಗದಲ್ಲಿ ಕಳೆದ 15 – 20 ದಿನಗಳಿಂದ ಕಳ್ಳರ ಕೈಚಳಕ ಜೋರಾಗಿದೆ. ಈ ಬಗ್ಗೆ ನಾವು ಎಂ.ಕೆ.ಪೊಲೀಸರ ಗಮನಕ್ಕೂ ವಿಚಾರ ಮುಟ್ಟಿಸಿದ್ದೇವೆ, ಆದರೆ ಯಾವುದೇ ಪ್ರಯೋಜನವಾಗ್ತಿಲ್ಲ. ದಿನನಿತ್ಯವೂ ಸಹ ಕಳ್ಳತನವಾಗ್ತಿದೆ.‌ ಇದರಿಂದಾಗಿ ಕಷ್ಟಕಾಲದಲ್ಲಿರುವ ನಮಗೆ ಬಹಳಷ್ಟು ಸಮಸ್ಯೆಯಾಗ್ತಿದೆ. ಹಾಗಾಗಿ ಸಂಬಂಧಿಸಿದ ಪೊಲೀಸರು ನಮ್ಮ ಭಾಗದಲ್ಲಿ ಕಳ್ಳತನವಾಗದಂತೆ ಎಚ್ಚರಿಕೆವಹಿಸಬೇಕೆಂದು ಈ ಭಾಗದ ನೊಂದ ರೈತರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *