ಜಿಲ್ಲಾ ಸಹಕಾರ ಒಕ್ಕೂಟದಿಂದ ಸಹಕಾರ ಸಂಘಗಳಿಗೆ ದಿನದರ್ಶಿಕೆ, ಸಹಕಾರ ವಿಶೇಷಾಂಕ ಸಂಚಿಕೆ

ರಾಮನಗರ: ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಿಗೆ ನೂತನ ವರ್ಷದ ದಿನದರ್ಶಿಕೆ, ಡೈರಿ ಹಾಗೂ ಸಹಕಾರ ಮಾಸಿಕ ಪತ್ರಿಕೆಯ ವಾರ್ಷಿಕ ವಿಶೇಷಾಂಕ ಪ್ರತಿಗಳನ್ನು ಮುಂದಿನ ವಾರ ವಿತರಿಸಲಾಗುವುದು ಎಂದು ರಾಮನಗರ ಜಿಲ್ಲಾ ಸಹಕಾರ ಒಕ್ಕೂಟದ ಸಿಇಒ ಟಿ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ.ದೇವೇಗೌಡರ ಆದೇಶದ ಮೇರೆಗೆ ಈ ಬಾರಿ ವಿಶೇಷವಾಗಿ ಈ ಕಾರ್ಯವನ್ನು ಜಿಲ್ಲಾ ಸಹಕಾರ ಒಕ್ಕೂಟವು ಕೈಗೆತ್ತಿಕೊಳ್ಳುತ್ತಿದ್ದು, ಒಕ್ಕೂಟದ ಅಧ್ಯಕ್ಷರು ಹಾಗೂ ನಿರ್ದೇಶಕರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಿಗೆ ಈ ವರ್ಷದ ದಿನದರ್ಶಿಕೆ, ಡೈರಿ ಹಾಗೂ ಸಹಕಾರ ಪತ್ರಿಕೆಯ ವಿಶೇಷಾಂಕ ಸಂಚಿಕೆಗಳನ್ನು ಎಂದು ಟಿ. ಶಿವಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *