ರಾಮನಗರ ಜಿಲ್ಲಾ ಪೊಲೀಸ್ ರಿಂದ ವಿಶೇಷ ಪ್ರಯತ್ನ : ಗಣ್ಯರ ಭದ್ರತೆಗೆ ‘ಕೆಂಪೇಗೌಡ ಪಡೆ’

ರಾಮನಗರ : ಬೆಳಗಾವಿ ಜಿಲ್ಲೆಯಲ್ಲಿ ಚೆನ್ನಮ್ಮ ಪಡೆ, ಚಿತ್ರದುರ್ಗದಲ್ಲಿ ಓಬವ್ವ ಪಡೆ, ಬೆಂಗಳೂರಿನಲ್ಲಿ ಕಬಡ್ಡಿ ಟೀಂ ಇರುವಂತೆ ಈಗ ರಾಮನಗರದಲ್ಲಿ ಕಣಕ್ಕೆ ಇಳಿಯಲು ಕೆಂಪೇಗೌಡ ಪಡೆ ಸಜ್ಜಾಗಿದೆ.

ರಾಮನಗರ ಜಿಲ್ಲೆಗೆ ಮುಖ್ಯಮಂತ್ರಿ ಆಗಮಿಸುವ ಹಿನ್ನಲೆಯಲ್ಲಿ ಗಣ್ಯರ ವಿಶೇಷ ಭದ್ರತೆಗೆಂದು ಪೆÇಲೀಸ್ ಇಲಾಖೆ `ಕೆಂಪೇಗೌಡ ಪಡೆ’ ರಚಿಸಿದೆ. ಇಲ್ಲಿ ಪೆÇಲೀಸರು ಖಾಕಿ ಬದಲಿಗೆ ಬೌನ್ಸರ್ಗಳ ಮಾದರಿಯಲ್ಲಿ ವಸ್ತ್ರ ತೊಟ್ಟು ಕಂಗೊಳಿಸಲಿದ್ದಾರೆ.

ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಮೂಲತಃ ನಮ್ಮ ಜಿಲ್ಲೆಯವರು. ಹೀಗಾಗಿ ಅವರ ಹೆಸರಲ್ಲೇ ಈ ಪಡೆಗೆ ಇಡಲಾಗಿದೆ. ಜಿಲ್ಲೆಯಲ್ಲಿ ನಡೆಯುವ ದೊಡ್ಡ ಮಟ್ಟದ ಕಾರ್ಯಕ್ರಮಗಳಲ್ಲಿ ಅತಿಥಿಗಳಿಗೆ ಇನ್ನು ಮುಂದೆ ಈ ಪಡೆ ವಿಶೇಷ ಭದ್ರತೆ ಒದಗಿಸಲಿದೆ.
ಮುಖ್ಯಮಂತ್ರಿ, ರಾಜ್ಯಪಾಲರು ಮೊದಲಾದವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅನಗತ್ಯವಾಗಿ ಗಲಾಟೆ ಮಾಡುವವರು, ನಿಯಮ ಉಲ್ಲಂಘಿಸಿ ಕಾರ್ಯಕ್ರಮಗಳಲ್ಲಿ ಪ್ರವೇಶಿಸುವವರನ್ನು ನಿಯಂತ್ರಿಸಲಿದೆ. ಸದ್ಯ 16 ಮಂದಿ ಈ ತಂಡದಲ್ಲಿದ್ದು, ಇನ್ನೂ ನಾಲ್ಕು ಮಂದಿ ಸದ್ಯದಲ್ಲೇ ಈ ತಂಡ ಸೇರಿಕೊಳ್ಳಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ತಿಳಿಸಿದರು.
ಈ ವಿಶೇಷ ಪಡೆಗಾಗಿ ಜಿಲ್ಲೆಯ ಪ್ರತಿ ಪೆÇಲೀಸ್ ಠಾಣೆಯಿಂದ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದಲ್ಲದೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನಾಲ್ಕು ಮಂದಿ ಆಯ್ಕೆಯಾಗಿದ್ದಾರೆ. ಇದಕ್ಕಾಗಿ ಈ ಖಾಕಿ ಪಡೆಗೆ ವಿಶೇಷ ತರಬೇತಿಯನ್ನು ನೀಡಲಾಗಿದೆ. ನೀಲಿ ಬಣ್ಣದ ಸಫಾರಿ ಧಿರಿಸಿನಲ್ಲಿ ಈ ಕೆಂಪೇಗೌಡ ಪಡೆ ಕಂಗೊಳಿಸಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *