ರೈತ ದಿನಾಚರಣೆ : ರೈತರನ್ನು ಭೇಟಿ ಮಾಡಿದ ಕಿಂಗ್ಸಟನ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು

ರಾಮನಗರ: ರೈತರ ದಿನಾಚರಣೆ ಪ್ರಯುಕ್ತ ಇಲ್ಲಿನ ಕಿಂಗ್ಸಟನ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ರೈತರನ್ನು ಭೇಟಿ ಮಾಡಿ ಗೌರವಿಸಿದರು.

ಶಾಲೆಯ ಆಡಳಿತ ಮಂಡಳಿ ಮತ್ತು ಶಾಲೆಯ ಶಿಕ್ಷಕರು ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ರೈತರು ದೇಶದ ಬೆನ್ನೆಲುಬು ಎಂಬ ಮಾತನ್ನು ಮಕ್ಕಳಿಗೆ ಪ್ರತ್ಯಕ್ಷವಾಗಿ ಪರಿಚಯಿಸುವ, ಅನ್ನದಾತರನ್ನು ಗೌರವಿಸುವ ಗುಣವನ್ನು ಮಕ್ಕಳಲ್ಲಿ ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಶಾಲೆಯ ಮುಖ್ಯಶಿಕ್ಷಕಿ ತಬಸುಮ್ ಹೇಳಿದರು.

ಶಾಲೆಯ ಹತ್ತಿರದ ಚನ್ನಮಾನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ಕೆಲವು ರೈತರನ್ನು ಭೇಟಿ ಮಾಡಿದ ವೇಳೆ ವಿದ್ಯಾರ್ಥಿಗಳು ರೈತರಿಗೆ ಹಣ್ಣು ಮತ್ತು ಹೂ ಕೊಟ್ಟು ಗೌರವಿಸಿದರು. ರೈತರು ಸಹ ವಿದ್ಯಾರ್ಥಿಗಳಿಗೆ ಶ್ರೇಯಸ್ಸನ್ನು ಬಯಸಿ ಶುಭ ಹಾರೈಸಿದರು.

ಇದೇ ವೇಳೆ ವಿದ್ಯಾರ್ಥಿಗಳು ಹುಲಿಮುತ್ತಿಗೆ ಸಸ್ಯ ಕ್ಷೇತ್ರಕ್ಕೆ ಭೇಟಿ ಮಾಡಿಸಲಾಯಿತು. ಅಲ್ಲಿ ಅರಣ್ಯ ವಲಯ ಅಧಿಕಾರಿಗಳು ಕಾಡಿನ ಮಹತ್ವ, ಗಿಡ, ಮರಗಳನ್ನು ಬೆಳೆಸುವ ಬಗೆ, ಪರಿಸರದ ವಿಚಾರದಲ್ಲಿ ಹಲವಾರು ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಕೊಟ್ಟರು.

Leave a Reply

Your email address will not be published. Required fields are marked *