ಪ್ರಗತಿಪರ ಹೋರಾಟಕ್ಕೆ ಜಯ : ಮುಖ್ಯಮಂತ್ರಿ ಅವರಿಗೆ ಅಭಿನಂದನೆ

ರಾಮನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣದ ಮೂಲಕ ದಲಿತಪರ ಮತ್ತು ಪ್ರಗತಿಪರರ ಹೋರಾಟಕ್ಕೆ ಜಯ ದೊರೆತಿದೆ.

ರಾಮನಗರದ ಜಿಲ್ಲಾಧಿಕಾರಗಳ ಸಂಕೀರ್ಣದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮಾಡಬೇಕು ಎಂಬುದು ಪ್ರಗತಿಪರರ ದಶಕದ ಬೇಡಿಕೆ. ನಂತರ ಕಾಮಗಾರಿ ಕೈಗೆತ್ತಿಕೊಂಡ ಜಿಲ್ಲಾಡಳಿತ ಪ್ರತಿಮೆ ಕಾಮಗಾರಿಯನ್ನು 2019 ರಲ್ಲಿ ಪೂರ್ಣಗೊಳಿಸಿತು.
ಕಾಮಗಾರಿ ಪೂರ್ಣಗೊಂಡು ಪ್ರತಿಮೆಗಳನ್ನು ಅನಾವರಣಗೊಳಿಸಲು ಜಿಲ್ಲಾಡಳಿತ ನಾನಾ ಕಾರಣಗಳನ್ನು ಒಡ್ಡಿ ಅನಾವರಣ ಕಾರ್ಯಕ್ರಮವನ್ನು ವಿಳಂಬ ಮಾಡುತ್ತಿತ್ತು.
ನಂತರ ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳು ಕಳೆದ ಎರಡೂವರೆ ವರ್ಷದಿಂದ ಪ್ರತಿಮೆ ಅನಾವರಣಕ್ಕೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಸ್ಪಂದಿಸದಿದ್ದಾಗ ಪ್ರತಿಭಟನೆ ಮಾಡಿದ್ದರು. ಶೀಘ್ರ ಅನಾವರಣ ಮಾಡದಿದ್ದರೆ ಡಿ.6 ರಂದು ಸಂಘಟನೆಗಳೇ ಅನಾವರಣ ಮಾಡುತ್ತವೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದರು.

ಸರ್ಕಾರ ಕಾರ್ಯಕ್ರಮ ಮತ್ತು ಖಾಸಗಿ ಕಾರ್ಯಕ್ರಗಳಿಗೆ ಅಡ್ಡಿಯಾಗದ ಕೋವಿಡ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಅಡ್ಡಿಯಾಗುತ್ತಿತ್ತು. ಜಿಲ್ಲಾಡಳಿತದ ಈ ಧೋರಣೆ ಪ್ರಗತಿಪರರ ಆಕ್ರೋಶಕ್ಕೆ ಕಾರಣವಾಗಿತ್ತು.

ಹೋರಾಟದ ಎಚ್ಚರಿಕೆಗೆ ಕೊನೆಗೂ ಮಣಿದ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿ, ಕಾರ್ಯಕ್ರಮ ನಿಗದಿ ಮಾಡಿದೆ. ನಾಳೆ ಜ.03 ರಂದು ಎರಡೂ ಪ್ರತಿಮೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನಾವರಣಗೊಳಿಸಲಿದ್ದಾರೆ. ಈ ಮೂಲಕ ಹೋರಾಟಕ್ಕೆ ಜಯ ದೊರೆತಿದೆ.
ಪ್ರಗತಿಪರರ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಎಲ್ಲಾ ಜನಪ್ರತಿನಿಧಿಗಳು, ಹಿರಿಯ ದಲಿತ ಮುಖಂಡ ರಾ.ಶಿ. ದೇವರಾಜು, ಹಿರಿಯ ಪತ್ರಕರ್ತ ಚೆಲುವರಾಜು, ಹಿರಿಯ ದಲಿತ ಮುಖಂಡ ಶಿವಶಂಕರ್, ದಲಿತ ಸಂಘಟನೆಗಳ ಒಕ್ಕೂಟ ಶಿವಕುಮಾರ್ ಸ್ವಾಮಿ, ಎಸ್.ಎಸ್.ಡಿ. ವಿದ್ಯಾರ್ಥಿ ಘಟಕ ರಾಜ್ಯಾಧ್ಯಕ್ಷ ಗೋವಿಂದಯ್ಯ, ಅಹಿಂಧ ಸಂಘದ ರಾಜ್ಯಾಧ್ಯಕ್ಷ ಶೇಖರ್, ಹಿರಿಯ ದಲಿತ ಮುಖಂಡ ರಾಂಪು ನಾಗೇಶ್, ಕರ್ನಾಟಕ ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷ ಕೋಟೆ ಕುಮಾರ್, ಜಿಲ್ಲಾ ಉಪ ಜಾಗೃತಿ ಸಮಿತಿ ಸದಸ್ಯ ವೆಂಕಟೇಶ್ ಗುಡ್ಡೆ, ಜಿವಿಕಾ ಸಂಘದ ಅಧ್ಯಕ್ಷ ಗೋವಿಂದರಾಜು ಪಟ್ಲು, ವಕೀಲ ಚಾಂದ್ ಪಾಷಾ, ಪತ್ರಕರ್ತರುಗಳಾದ ಶಿವಪ್ರಕಾಶ್, ಶಿವರಾಜ್ ಭರಣಿ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಸೋಮಶೇಖರ್, ದಲಿತ ಸಂಘರ್ಷ ಸಮಿತಿ (ಭೀಮ ವಾದ) ಜಿಲ್ಲಾಧ್ಯಕ್ಷ ಗೋವಿಂದ ಕೋತ್ತಿಪುರ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಶಿವಲಿಂಗಯ್ಯ ಕನಕಪುರ, ವಾಲ್ಮೀಕಿ ಸಂಘದ ಅಧ್ಯಕ್ಷ ವಾಸು, ಇರುಳಿಗದ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಹಿರಿಯ ದಲಿತ ಮುಖಂಡ ಗುರುಮಲ್ಲಯ್ಯ, ಹಿರಿಯ ದಲಿತ ಮುಖಂಡ ಶಿವಲಿಂಗಯ್ಯ ಕೇತೊಹಳ್ಳಿ, ದಲಿತ ಮುಖಂಡ ಶಿವಲಿಂಗಯ್ಯ ಕೊಂಕಾಣಿದೊಡ್ಡಿ, ದಲಿತ ಮುಖಂಡ ರಮೇಶ್, ದಲಿತ ಮುಖಂಡ ಬನ್ನಿಕುಪ್ಪೆ ಶ್ರೀನಿವಾಸ, ದಲಿತ ಸಂಘರ್ಷ ಸಮಿತಿ ಕಾರ್ಯದರ್ಶಿ ಪುನೀತ್, ಅಹಿಂಧ ಸಂಘದ ರಾಜ್ಯ ಕಾರ್ಯದರ್ಶಿ ದಾಸಪ್ಪ, ಯುವ ದಲಿತ ಮುಖಂಡ ಶ್ರೀನಿವಾಸ ಚನ್ನಪಟ್ಟಣ, ಕಲಾವಿದ ಸಂಘದ ಅಧ್ಯಕ್ಷ ಡಾ.ಜಯಸಿಂಹ, ಸಮತಾ ಸೈನಿಕ ದಳದ ಜಿಲ್ಲಾ ಖಜಾಂಚಿ ರುದ್ರೇಶ್ , ಗುರು, ಅಶೋಕ್ ಮತ್ತು ಸಹಕರಿದ ಜಿಲ್ಲೆಯ ಎಲ್ಲಾ ದಲಿತ ಮುಖಂಡರುಗಳಿಗೆ ದಲಿತ ಸಂಘಟನೆಗಳ ಮಹಾ ಒಕ್ಕೂಟ ಜಿಲ್ಲಾಧ್ಯಕ್ಷ ಎಂ. ಜಗದೀಶ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *